Difference between Brandy and Whisky : ಬ್ರಾಂಡಿ – ವಿಸ್ಕಿ ನಡುವಿನ ವ್ಯತ್ಯಾಸವೇನು ಗೊತ್ತೇ ?

Difference between Brandy and Whisky : ಬ್ರಾಂಡಿ ಮತ್ತು ವಿಸ್ಕಿಯ ನಡುವಿನ ವ್ಯತ್ಯಾಸ ಏನು ಅಂತ ಸಾಮಾನ್ಯರಿಗೆ ತಿಳಿದಿರಲಿಕ್ಕಿಲ್ಲ. ಸಾಮಾನ್ಯರಿಗೆ ಮಾತ್ರವಲ್ಲದೆ ಅವೆರಡನ್ನೂ ಏಕಕಾಲಕ್ಕೆ ಎಳೆಯಬಲ್ಲ ಪಾನ ಪಂಡಿತರಿಗೂ ಈ ಬಗ್ಗೆ ತಿಳಿದಿರುವುದು ಅಷ್ಟಕಷ್ಟೆ ಅನ್ನೋದು ನಮ್ಮ ಆತ್ಮವಿಶ್ವಾಸದ ಊಹೆ. ಪಾನಪ್ರಿಯರಿಗೆ ಇವೆರಡು ಅಮಲು ಕಾರಕ ವಸ್ತುಗಳಷ್ಟೇ. ಅದನ್ನು ಹೊರತುಪಡಿಸಿ ಇವೆರಡರ ನಡುವಿನ ವ್ಯತ್ಯಾಸವೇನು ?(Difference between Brandy and Whisky )ನಿಜಕ್ಕೂ ಅವುಗಳ ಮಧ್ಯೆ ವ್ಯತ್ಯಾಸ ಇದೆಯಾ ? ಕುಡಿದರೆ ಇವೆರಡೂ ಬೇರೆ ಬೇರೆಯೇ ? ಎಂಬ ಸಂದೇಹಗಳೂ ಬರುತ್ತವೆ. ಅದರ ಬಗ್ಗೆ ತಿಳಿದುಕೊಳ್ಳುವ ಲೇಖನ ಇಲ್ಲಿದೆ ನೋಡಿ.

ಬ್ರಾಂಡಿ ಮತ್ತು ವಿಸ್ಕಿ (Brandy Whisky) ಎರಡು ಜನಪ್ರಿಯ ಆಲ್ಕೊಹಾಲ್ ಯುಕ್ತ ಪಾನೀಯಗಳಾಗಿವೆ. ಪ್ರಪಂಚದಾದ್ಯಂತ ಅನೇಕ ಜನರು ದಶಕಗಳಿಂದ ಬ್ರಾಂಡಿ ಮತ್ತು ವಿಸ್ಕಿಯನ್ನ ಹೀರುತ್ತಿದ್ದಾರೆ. ಕುಡಿದಾಗ ಎರಡೂ ದ್ರವಗಳೂ ತಮ್ಮ ಕರಾ ‘ ಮತ್ತು ‘ ಅನ್ನು ತೋರ್ಪಡಿಸುತ್ತವೆ. ಈ ಎರಡೂ ಪಾನೀಯಗಳು ಕೆಲವು ಸಾಮ್ಯತೆಗಳನ್ನ ಹೊಂದಿದ್ದರೂ, ಅವುಗಳ ತಯಾರಿಕೆ, ವಿಷಯ ಮತ್ತು ರುಚಿಯ ಆಧಾರದ ಮೇಲೆ ಬ್ರಾಂಡಿ ಮತ್ತು ವಿಸ್ಕಿಯ ನಡುವೆ ಅನೇಕ ವ್ಯತ್ಯಾಸಗಳಿವೆ.

ಬ್ರಾಂಡಿಯು ಹುದುಗಿಸಿದ ವೈನ್‌ನಿಂದ ಭಟ್ಟಿ ಇಳಿಸಿದ ಸ್ಪಿರಿಟ್ ಆಗಿದೆ. ಆದ್ರೆ, ವಿಸ್ಕಿಯು ಗೋಧಿ, ಬಾರ್ಲಿ, ಕಾರ್ನ್ ಮತ್ತು ರೈಗಳಂತಹ ಬ್ರೂ ಮಾಡಿದ ಮಾಲ್ಟೆಡ್ ಧಾನ್ಯಗಳಿಂದ ಭಟ್ಟಿ ಇಳಿಸಿದ ಸ್ಪಿರಿಟ್ ಆಗಿದೆ.

ಬ್ರಾಂಡಿಯನ್ನು ದ್ರಾಕ್ಷಿಯಿಂದ ತಯಾರಿಸಿ ಅದು ಮದ್ಯ ಆಗಿ ಬದಲಾದ ನಂತರ ಅದನ್ನು ಕುದಿಸಿ ಆವಿ ಇಳಿಸಲಾಗುವ ಮದ್ಯವಾಗಿದೆ. ಸರಳವಾಗಿ ಹೇಳುವುದಾದರೆ, ಬ್ರಾಂಡಿ ಅನ್ನೋದು ಭಟ್ಟಿ ಇಳಿಸಿದ ವೈನ್. ಬ್ರಾಂಡಿ ಎಂಬ ಹೆಸರು ಡಚ್ ಪದ ‘ಬ್ರಾಂಡ್ವಿಜ್ನ್’ ನಿಂದ ಬಂದಿದೆ. ಇದರ ಅರ್ಥ ‘ಸುಟ್ಟ ವೈನ್’. ಸುಟ್ಟ ವೈನ್ ಅನ್ನುವ ಹೆಸರಿನ ಪ್ರಭಾವವೋ ಏನೋ ಎಂಬಂತೆ ಬ್ರಾಂಡಿ ಉಷ್ಣಕಾರಕ ಅಂಶ ಹೊಂದಿದೆ.

ಬ್ರಾಂಡಿಯ ಆಲ್ಕೋಹಾಲ್ ಅಂಶವು ಸುಮಾರು 35-60% ಆಗಿದೆ. ಹೆಚ್ಚಿನ ಜನರು ಬ್ರಾಂಡಿಯನ್ನ ಜೀರ್ಣಕಾರಿಯಾಗಿ ತೆಗೆದುಕೊಳ್ಳುತ್ತಾರೆ, ಸಾಮಾನ್ಯವಾಗಿ ಊಟದ ನಂತರ. ಬ್ರಾಂಡಿ ಒಂದು ಆಲ್ಕೊಹಾಲ್ಯುಕ್ತ ಪಾನೀಯವಾಗಿದ್ದು ಅದು ಹಣ್ಣಿನಂತಹ, ಸ್ವಲ್ಪ ಸಿಹಿ ರುಚಿಯೊಂದಿಗೆ ಬರುತ್ತದೆ.

ಎಲ್ಲಾ ವಿಸ್ಕಿಗಳು ಪಕ್ವವಾಗಲು ಮೂರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬ್ಯಾರೆಲ್‌ನೊಳಗೆ ವಯಸ್ಸಾಗುವ ಪ್ರಕ್ರಿಯೆಯಲ್ಲಿ, ವಿಸ್ಕಿಯು ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತದೆ ಅದು ಅದರ ಮಾಲ್ಟಿ, ಬ್ರೈನಿ, ಸ್ಮೋಕಿ ಫ್ಲೇವರ್, ಬಣ್ಣ ಮತ್ತು ಪರಿಮಳವನ್ನ ಹೆಚ್ಚಿಸುತ್ತದೆ. ಇದಲ್ಲದೆ, ವಿಸ್ಕಿಯ ಆಲ್ಕೋಹಾಲ್ ಅಂಶವು ಸಾಮಾನ್ಯವಾಗಿ 40% ರಿಂದ 50% ರಷ್ಟಿರುತ್ತದೆ.

ಬ್ರಾಂಡಿ ಮತ್ತು ವಿಸ್ಕಿ ನಡುವಿನ ವ್ಯತ್ಯಾಸವೇನು?

• ಬ್ರಾಂಡಿಯನ್ನು ಸಾಮಾನ್ಯವಾಗಿ ವೈನ್ ಮತ್ತು ಹಣ್ಣುಗಳಿಂದ ತಯಾರಿಸಲಾಗುತ್ತದೆ (ಮುಖ್ಯವಾಗಿ ದ್ರಾಕ್ಷಿಗಳು), ಆದರೆ ವಿಸ್ಕಿಯನ್ನು ವಿವಿಧ ಧಾನ್ಯಗಳಿಂದ ತಯಾರಿಸಲಾಗುತ್ತದೆ (ಹೆಚ್ಚಾಗಿ ಬಾರ್ಲಿ)

ಹಣ್ಣುಗಳ ಹುದುಗುವಿಕೆಯು ಬ್ರಾಂಡಿಯನ್ನು ತಯಾರಿಸಲು ವೈಜ್ಞಾನಿಕ ಪ್ರಕ್ರಿಯೆಯಾಗಿದ್ದು, ವಿಸ್ಕಿಯ ಸಂದರ್ಭದಲ್ಲಿ ಇದು ಧಾನ್ಯಗಳ ಭಟ್ಟಿ ಇಳಿಸುವಿಕೆಯಾಗಿದೆ. ಬ್ರಾಂಡಿಗೆ ಹಣ್ಣು, ವೆನಿಲಾ, ಕ್ಯಾರೆಮಲ್ ಮುಂತಾದ ಫ್ಲೇವರುಗಳನ್ನು ಸೇರಿಸಲಾಗುತ್ತದೆ. ಆದರೆ ವಿಸ್ಕಿಗೆ ಕಟು ಫ್ಲೇವರುಗಳನ್ನು ಸೇರಿಸಿ ಗುಡುಸಾಗಿ ತಯಾರಿಸಲಾಗುತ್ತದೆ.

ಬ್ರಾಂಡಿ ಮತ್ತು ವಿಸ್ಕಿ ಎರಡೂ ಮದ್ಯಗಳನ್ನು ಓಕ್ ಮರದ ಪೀಪಾಯಿಗಳಲ್ಲಿ ಹಾಕಿಟ್ಟು ವಯಸ್ಸಾಗುವ ಹಾಗೆ ಮಾಡಲಾಗುತ್ತದೆ. ಅಂದರೆ, ಹಾಗೆ ಮರದ ಪಾತ್ರೆಗಳಲ್ಲಿ ಹಾಕಿಟ್ಟು ಹಲವು ವರ್ಷಗಳ ತನಕ ಇಡಲಾಗುತ್ತದೆ. ಈ ಪ್ರಕ್ರಿಯೆಗೆ ಏಜಿಂಗ್ ಎನ್ನಲಾಗುತ್ತದೆ. ಆದರೆ ಈ ಏಜಿಂಗ್ ಅಂದರೆ ವಯಸ್ಸಾಗಿಸುವಿಕೆಯ ಪ್ರಕ್ರಿಯೆಯು ಬ್ರಾಂಡಿ ಮತ್ತು ವಿಸ್ಕಿಗೆ ವಿಭಿನ್ನವಾಗಿದೆ.

ವಿಸ್ಕಿಗಳು ವಯಸ್ಸಾದ ವರ್ಷಗಳನ್ನು ಸರಳವಾಗಿ ಉಲ್ಲೇಖಿಸಲಾಗುತ್ತದೆ. ಅಂದರೆ, ಉದಾಹರಣೆಗೆ aged 10 years ಎಂಬುದಾಗಿ ಬರೆಯಲಾಗುತ್ತದೆ. ಆದರೆ ಬ್ರಾಂಡಿಯ ಬಾಟಲಿನ ಮೇಲೆ VOP ಮತ್ತು VSOP ನಂತಹ ಅಕ್ಷರಗಳನ್ನು ಬರೆಯುವುದರ ಮೂಲಕ ಆ ಬ್ರಾಂಡಿ ಗೆ ಎಷ್ಟು ವಯಸ್ಸಾಗಿದೆ ( ಬ್ರಾಂಡಿಯನ್ನು ಎಷ್ಟು ವರ್ಷಗಳ ಕಾಲ ಏಜಿಂಗ್ ಮಾಡಿ ಇಡಲಾಗಿದೆ) ಎಂದು ಗ್ರಾಹಕರಿಗೆ ಸೂಚಿಸಲಾಗುತ್ತದೆ.

ಕುಡಿಯುವಾಗ, ವಿಸ್ಕಿಗೆ ನೀರು ಅಥವಾ ಸೋಡಾವನ್ನು ಸೇರಿಸುವುದು ಸಾಮಾನ್ಯವಾಗಿದೆ. ಆದರೆ, ನೀರನ್ನು ಬ್ರಾಂಡಿಗೆ ಸೇರಿಸಲಾಗುವುದಿಲ್ಲ. ಬ್ರಾಂಡಿಯನ್ನು ಸುಕ್ಕಾ ಆಗಿ ಮಾತ್ರ ತೆಗೆದುಕೊಳ್ಳಲಾಗುತ್ತದೆ. ವಿಸ್ಕಿಯು ಯಾವಾಗಲೂ ಸಾಮಾಜಿಕ ಪಾನೀಯವಾಗಿದ್ದು, ಬಹುಜನರು ಬಳಸುವ ಡ್ರಿಂಕ್ ಆಗಿದೆ. ಬ್ರಾಂಡಿಯನ್ನು ಕೂಡಾ ಮದ್ಯದ ಥರ ಊಟಕ್ಕೆ ಮೊದಲೇ ಕುಡಿಯುವುದು ಕಂಡುಬಂದರೂ, ರಾತ್ರಿಯ ಊಟದ ನಂತರ ಒಂದು ಕಪ್ ಬ್ರಾಂಡಿಯನ್ನು ತೆಗೆದುಕೊಳ್ಳುವ ಪರಿಪಾಠವೂ ಇದೆ. ಬ್ರಾಂಡಿ ಶೀತ ನಿವಾರಕ, ಜೀರ್ಣಕಾರಕ ಮುಂತಾದ ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಕೊನೆಯ ಹನಿ: ನೀವು ಬ್ರಾಂಡಿಯೇ ಬಗ್ಗಿಸಿ, ಅಥವಾ ವಿಸ್ಕಿಯೇ ಚಪ್ಪರಿಸಿ – ಮಾತು ಬೀಳದಂತೆ, ಯೋಚನೆ ವಾಲದಂತೆ ಮಿತವಾಗಿ ಇಳಿಸಿ !!! 

Leave A Reply

Your email address will not be published.