Cockroach : ಈ ಮನೆಮದ್ದುಗಳನ್ನು ಬಳಸಿ , ಸುಲಭವಾಗಿ ಜಿರಳೆ ಪ್ರಾಬ್ಲಂ ಹೋಗಲಾಡಿಸಿ!

Cockroach: ನಮ್ಮ ಅಡುಗೆ ಕೋಣೆಯಲ್ಲಿ (kitchen room) ಆರೋಗ್ಯ ಅಪಾಯದ ಸೂಚನೆಗಳಲ್ಲಿ ಜಿರಳೆ ಕೂಡ ಒಂದು. ಜಿರಳೆಗಳು ಮನೆಯಲ್ಲಿದ್ದರೆ ಆ ಕುಟುಂಬದ ಸದಸ್ಯರು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಆದರೆ ಜಿರಳೆಗಳನ್ನು (Cockroach) ಓಡಿಸುವುದು ಅಂದುಕೊಂಡಷ್ಟು ಸುಲಭವಲ್ಲ.

 

ಸದ್ಯ ಮಾರುಕಟ್ಟೆಯಲ್ಲಿ ಜಿರಳೆ ಓಡಿಸಲು ಸಾಕಷ್ಟು ಔಷಧಿಗಳಿವೆ. ಆದರೆ ಸುಲಭವಾಗಿ ಜಿರಳೆಗಳನ್ನು ನಿಮ್ಮ ಮನೆಯಿಂದ ಶಾಶ್ವತವಾಗಿ ತೊಲಗಿಸಲು ಸುಲಭ ಉಪಾಯ ಇಲ್ಲಿದೆ.

ಪಲಾವ್ ಎಲೆ :
ಆಹಾರದ ರುಚಿಯನ್ನು ಹೆಚ್ಚಿಸಲು ಪಲಾವ್ ಎಲೆ(Bay leaf) ಬಳಸಲಾಗುತ್ತದೆ, ಇದು ಜಿರಳೆಗಳನ್ನು ತೊಡೆದುಹಾಕಲು ರಾಮಬಾಣ. ಜಿರಳೆಗಳು ಈ ಎಲೆಗಳ ವಾಸನೆಯನ್ನು ಸಹಿಸುವುದಿಲ್ಲ. ಈ ಎಲೆಗಳನ್ನು ಪುಡಿಮಾಡಿ ಮತ್ತು ಅವುಗಳನ್ನು ಮನೆಯಲ್ಲಿ ಅಲ್ಲಲ್ಲಿ ಇರಿಸಿದರೆ ಮನೆಯೊಳಗೆ ಜಿರಳೆಗಳು ಬರುವುದಿಲ್ಲ.

ಲವಂಗ :
ಎಲ್ಲರ ಮನೆಯಲ್ಲಿಯೂ ಲವಂಗ ಇದ್ದೇ ಇರುತ್ತದೆ. ಇದನ್ನು ಉಪಯೋಗಿಸಿ ನೀವು ಜಿರಳೆ ಓಡಿಸಬಹುದು. ಮನೆಯ ಯಾವ ಜಾಗದಲ್ಲಿ ಜಿರಳೆ ಇದೆಯೋ ಅಲ್ಲಿ ಲವಂಗವನ್ನಿಡಿ. ಅದರ ವಾಸನೆಗೆ ಜಿರಳೆ ಬರುವುದಿಲ್ಲ.

ಸೀಮೆ ಎಣ್ಣೆ:
ಜಿರಳೆಗಳೂ ಸೀಮೆ ಎಣ್ಣೆಯ (Kerosene Oil) ವಾಸನೆಯನ್ನು ಇಷ್ಟಪಡುವುದಿಲ್ಲ ಮತ್ತು ಅವು ಅದರಿಂದ ಓಡಿಹೋಗುತ್ತವೆ. ಮನೆಯಲ್ಲಿ ಜಿರಳೆಗಳು ಕಾಣಿಸಿಕೊಳ್ಳದಂತೆ, ನೆಲ ಒರೆಸುವಾಗ ಸ್ವಲ್ಪ ಸೀಮೆ ಎಣ್ಣೆಯನ್ನು ಸೇರಿಸಿಕೊಳ್ಳಿ. ಜಿರಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಮನೆಯ ಮೂಲೆ ಮೂಲೆಗೂ ಇದನ್ನೂ ಸಿಂಪಡಿಸಿ.

ವಿನೇಗರ್‌:
ಬೌಲ್ ನಲ್ಲಿ ಬಿಸಿ ನೀರು ಇರಿಸಿ ಇದಕ್ಕೆ ಒಂದು ಟೇಬಲ್ ಚಮಚ ಆಗುವಷ್ಟು ವೈಟ್ ವಿನೇಗರ್‌ನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಅಡುಗೆಯ ಮನೆಯ ಸೆಲ್ಫ ಹಾಗೂ ಗ್ಯಾಸ್ ಸ್ಟವ್ ಅಡಿಭಾಗಗಳ ಎಲ್ಲಾ ಮೂಳೆಗಳನ್ನು ಚೆನ್ನಾಗಿ ಶುಚಿ ಮಾಡಿಕೊಳ್ಳಿ, ಹಾಗೂ ಮಲಗುವ ಮುನ್ನ ಜಿರಳೆಗಳು ಓಡಾಡುವ ಕಡೆಗಳಿಗೆಲ್ಲಾ ಈ ನೀರನ್ನು ಚುಮುಕಿಸಿ, ಹೀಗೆ ಪ್ರತಿದಿನ ಮಾಡುವುದರಿಂದ ಜಿರಳೆಗಳು ಮಾಯವಾಗುತ್ತದೆ.

ಬೇವಿನ ಎಲೆ :
ಬೇವಿನ ಎಲೆಗಳನ್ನು ಜಿರಳೆಗಳು ಓಡಾಡುವ ಸ್ಥಗಳಲ್ಲಿ ಇಟ್ಟು ಬಿಟ್ಟರೆ ಸಾಕು, ಇದರ ಪರಿಣಾಮವು ನಿಮಗೆ ಮೂರು ದಿನಗಳಲ್ಲಿ ಕಂಡು ಬರುವುದು. ಇದರ ಹೊರತು ಒಂದು ಸಣ್ಣ ಬೌಲ್ ನಲ್ಲಿ ಬಿಸಿ ನೀರಿಗೆ ಒಂದು ಟೇಬಲ್ ಚಮಚ ಆಗುವಷ್ಟು ಬೇವಿನ ಎಣ್ಣೆಯನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಕೊಂಡು ಜಿರಳೆಗಳು ಓಡಾಡುವ ಕಡೆಗಳಿಗೆಲ್ಲಾ ಸಿಂಪಡಿಸಿ.

ಸೌತೆಕಾಯಿ:
ಸೌತೆಕಾಯಿ ಕೂಡ ಜಿರಳೆಗೆ ಉತ್ತಮ ಮನೆ ಮದ್ದು. ಜಿರಳೆ ಬರುವ ಜಾಗದಲ್ಲಿ ಸೌತೆ ಕಾಯಿಯ ತುಂಡನ್ನು ಇಡಿ. ಅಪ್ಪಿ ತಪ್ಪಿಯೂ ಜಿರಳೆ ನಿಮ್ಮ ಮನೆಗೆ ಬರುವುದಿಲ್ಲ.

ಬೆಳ್ಳುಳ್ಳಿ:
ಬೆಳ್ಳುಳ್ಳಿ ಕೂಡ ಜಿರಳೆಯ ಶತ್ರು. ಹಾಗಾಗಿ ಜಿರಳೆ ಓಡಿಸಲು ನೀವು ಬೆಳ್ಳುಳ್ಳಿಯನ್ನು ಬಳಸಬಹುದು. ಬೆಳ್ಳುಳ್ಳಿ ಜಜ್ಜಿ ಅಲ್ಲಲ್ಲಿ ಇರಿಸಬಹುದು.

ಮುಖ್ಯವಾಗಿ ಜಿರಳೆಗಳು ಕೊಳಕು ಸ್ಥಳಗಳಲ್ಲಿ ವಾಸಿಸುತ್ತವೆ ಮತ್ತು ಅವುಗಳು ತಮ್ಮ ಮೊಟ್ಟೆಗಳನ್ನು ಇಡುತ್ತವೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮನೆಯ ಸಿಂಕ್, ಬಾತ್ ರೂಂ, ಮನೆಯ ಮೂಲೆಗಳನ್ನು ಸ್ವಚ್ಛಗೊಳಿಸಿದರೆ ಅಲ್ಲಿ ಜಿರಳೆ ವಾಸಿಸಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ: Indian Railway : ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳು ಭಾರತದ ರೈಲುಗಳಲ್ಲಿ ಹೆಚ್ಚಾಗಿ ಕಾಣುತ್ತದೆ! ಇದು ಯಾಕಿದೆ ಗೊತ್ತಾ?

Leave A Reply

Your email address will not be published.