Upcoming MPVs : ಅದ್ಭುತ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಈ ಮೂರು ಹೊಸ 7 ಸೀಟರ್ !!
Upcoming MPVs : ಮಾರುಕಟ್ಟೆಯಲ್ಲಿ ಕಾರುಗಳು ಭರ್ಜರಿ ಪೈಪೋಟಿ ನಡೆಸುತ್ತಿವೆ. ಕಂಪನಿಗಳು ನೂತನ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದ್ಭುತ ಮೈಲೇಜ್ ನೀಡುವ ಅತ್ಯುತ್ತಮ ಕಾರುಗಳು ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಮುಂಬರುವ ದಿನಗಳಲ್ಲಿ ಮೂರು ಹೊಸ 7 ಸೀಟರ್ MPV (Upcoming MPVs) ಬಿಡುಗಡೆಯಾಗಲಿದೆ. ಯಾವುದು? ಮಾಹಿತಿ ತಿಳಿಯೋಣ.
ಟೊಯೊಟಾ ರುಮಿಯಾನ್ (TOYOTA RUMION) : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ 2021 ರಲ್ಲಿ ಭಾರತದಲ್ಲಿ ‘Rumion’ ನಾಮಫಲಕವನ್ನು ಟ್ರೇಡ್‌ಮಾರ್ಕ್ ಮಾಡಿತ್ತು. ಸದ್ಯ ಟೊಯೊಟಾ ರುಮಿಯಾನ್ MPV ಫ್ರಂಟ್ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಮತ್ತು ರಿವರ್ಸ್ದ್ ರಿಯರ್ ಸೆಕ್ಷನ್ ನೊಂದಿಗೆ ಬರಲಿದೆ. ಇದು 1.5-ಲೀಟರ್, 4-ಸಿಲಿಂಡರ್ K15C ಡ್ಯುಯಲ್ಜೆಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಎನ್ನಲಾಗಿದೆ.
ನಿಸ್ಸಾನ್ 7-ಸೀಟರ್ MPV (Nissan 7-SEATER MPV) : ಹೊಸ 7 ಸೀಟರ್ MPV ರೆನಾಲ್ಟ್‌ನ 7- ಸೀಟರ್ ಟ್ರೈಬರ್ ಅನ್ನು ಆಧರಿಸಿರಬಹುದು. 1.0L 3-ಸಿಲಿಂಡರ್ NA ಪೆಟ್ರೋಲ್ ಮತ್ತು 1.0L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಸದ್ಯ ಈ ಕಾರು ಗ್ರಾಹಕರನ್ನು ಆಕರ್ಷಣೆಗೊಳಿಸಲಿದೆ.
ಸಿಟ್ರೊಯೆನ್ 7-ಸೀಟರ್ MPV (CITROEN 7-SEATER MPV ):
ಈ MPV ಯನ್ನು C3 ಏರ್‌ಕ್ರಾಸ್ ಎಂದು ಹೆಸರಿಸಬಹುದು ಎನ್ನಲಾಗಿದೆ. Citroen ಹೊಸ ತ್ರಿ ರೋ ಮಾದರಿಯ ಕಾರಿನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದು C3 ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಇದು 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.