Dhanya Ramkumar: ಸಲ್ಮಾನ್ ಯೂಸುಫ್ ಖಾನ್‌ಗೆ ದೊಡ್ಮನೆ ಮಗಳಿಂದ ಸಖತ್ ಕ್ಲಾಸ್!

Sandalwood : ಮತ್ತೆ ಶುರುವಾಗಿದೆ ರಾಷ್ಟ್ರ ಭಾಷೆಯ ವಿಚಾರ. ಸ್ಯಾಂಡಲ್ ವುಡ್ (sandalwood) ತಾರೆಯೊಬ್ಬರು ಬಾಲಿವುಡ್ ಕೊರಿಯೋಗ್ರಾಫರ್ ಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ. ಅರೆ ಇದೇನು ಮತ್ತೆ ಶುರುನ ಅಂತೀರಾ? ಹೌದು ಇತ್ತಿಚಿಗೆ ಬಾಲಿವುಡ್(bollywood) ನ ಕೊರಿಯೋಗ್ರಫರ್, ಡ್ಯಾನ್ಸರ್ (dancer) ಸಲ್ಮಾನ್ ಯೂಸುಫ್ ಖಾನ್ ನ ವಿಡಿಯೋ ಒಂದಕ್ಕೆ ಕನ್ನಡದ ದೊಡ್ಡಮನೆ ಹುಡುಗಿ ಧನ್ಯ ರಾಜಕುಮಾರ್ ಸರಿಯಾಗಿಯೇ ಕ್ಲಾಸ್ ತೆಗೆದು ಕೊಂಡಿದ್ದಾರೆ. ಸಲ್ಮಾನ್ ಯೂಸುಫ್ ಖಾನ್ ಅವರ ಇತ್ತೀಚಿನ ವೀಡಿಯೋ (video) ದಲ್ಲಿ ಹಿಂದಿಯು ನಮ್ಮ ರಾಷ್ಟ್ರ ಭಾಷೆ ಎಂದು ತಮ್ಮ ಮಾತುಗಳಿಂದ ತಿಳಿಸಿದ್ದಾರೆ. ಈ ವಿಚಾರ ಕನ್ನಡಿಗರ ಮನದಲ್ಲಿ ಮತ್ತೆ ಕಿಚ್ಚನ್ನು ಏರಿಸಿದೆ.

ಈ ವಿಚಾರವಾಗಿ ಸಲ್ಮಾನ್ ಯೂಸುಫ್ ಖಾನ್ ಅವರ ವಿಡಿಯೋಕ್ಕೆ (video) ಕಮೆಂಟ್ (comment) ಮಾಡಿರುವ ದೊಡ್ಮನೆ ಮುದ್ದಾದ ಹುಡುಗಿ ಧನ್ಯ ರಾಜಕುಮಾರ್ ‘ ಹಿಂದಿ ಕಂಡಿತವಾಗಿಯು ರಾಷ್ಟ್ರ ಭಾಷೆ ಅಲ್ಲ ‘ ಎಂದು ಖಾನ್ ಗೆ ಸ್ವಷ್ಟನೆ ನೀಡಿದ್ದಾರೆ. ಇವರ ಈ ಕಮೆಂಟ್ ನೋಡಿ ಕನ್ನಡಿಗರು ದಿಲ್ ಕುಶ್ ಆಗಿದ್ದಾರೆ. ಹಾಗೂ ಕನ್ನಡದ ಅವರ ಪ್ರೇಮಕ್ಕೆ ದೊಡ್ಮನೆ ಅವರು ಯಾವಾಗಲೂ ಕನ್ನಡದ ವಿಷಯಕ್ಕೆ ಮುಂದೆ ಬರುತ್ತಾರೆ ಎಂದು ತಮ್ಮ ಅಭಿಮಾನ ತಿಳಿಸಿದ್ದಾರೆ.
ಸಲ್ಮಾನ್ ಯೂಸುಫ್ ಖಾನ್ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿರುವಾಗ ಅಧಿಕಾರಿಯೊಬ್ಬರು ಖಾನ್ ಅವರ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ ಇದರಿಂದಾಗಿ ಏರ್ಪೋರ್ಟ್ ( airport) ನಲ್ಲಿ ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣ (social media) ಒಂದರಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕನ್ನಡ ಅಭಿಮಾನಿಗಳು ಕೂಡ ತಮ್ಮ ಅಭಿಪ್ರಾಯಗಳನ್ನು ಖಾನ್ ಅವರ ವಿಡಿಯೋಕ್ಕೆ ಕಮೆಂಟ್ (comment) ಮಾಡುವ ಮೂಲಕ ವ್ಯಕ್ತ ಪಡಿಸಿದ್ದಾರೆ.