PF ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ ! ಲೋಕಸಭೆಯಲ್ಲಿ ಹೊರಬಿತ್ತು ಈ ಮಾಹಿತಿ!

Provident Fund Interest Money: ಪಿಎಫ್ ಖಾತೆದಾರರಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಅನೇಕ ದಿನಗಳಿಂದ ಎದುರು ನೋಡುತ್ತಿದ್ದ ಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

 

ಇಪಿಎಫ್( EPF) ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಒಂದು ವೇಳೆ, ನೀವು ಉದ್ಯೋಗದಲ್ಲಿದ್ದು, ನಿಮ್ಮ ಕಂಪನಿಯು ಪ್ರಾವಿಡೆಂಟ್ ಫಂಡ್ (ಇಪಿಎಫ್‌ಒ) ಹಣ, ವೇತನದಿಂದ ಕಡಿತವಾಗುತ್ತಿದ್ದರೆ ಇದು ನಿಮಗೆ ಸಿಹಿ ಸುದ್ದಿ( Good News) ಕಾದಿದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದಿಂದ ಒಂದು ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿ ಅದನ್ನು PF ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರ ಪರವಾಗಿಯೂ ಪಿಎಫ್ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತದೆ.

2021-22ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ನೌಕರರ ಭವಿಷ್ಯ ನಿಧಿಗೆ (EPF) ಸಂಬಂಧಿಸಿದ ಉದ್ಯೋಗಿಗಳ ಖಾತೆಗಳಿಗೆ ಜಮೆಯಾಗಿಲ್ಲ ಎಂದು ವರದಿಯಾಗಿದ್ದು, ಈ ಹಣಕಾಸು ವರ್ಷಕ್ಕೆ, ಬಡ್ಡಿ ದರವನ್ನು ಸರ್ಕಾರವು 8.1 ಶೇಕಡಾ ದರದಲ್ಲಿ ನಿಗದಿ ಮಾಡಲಾಗಿದೆ. ಈ ಕುರಿತಂತೆ ಜನಪ್ರತಿನಿಧಿಗಳ ಜೊತೆಗೆ ನೌಕರರ ಸಂಘಟನೆಗಳು ಬಹಳ ದಿನಗಳಿಂದಲೇ ಪ್ರಶ್ನೆ ಮಾಡುತ್ತಿದ್ದರು. ಸದ್ಯ, ಈ ಕುರಿತು ಲೋಕಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ (Rameswar Teli ) ನೌಕರರ ಗೊಂದಲಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದ್ದಾರೆ.

ಸರ್ಕಾರ (Government)ಈಗ 2021-22 ರ ಹಣಕಾಸು ವರ್ಷದಲ್ಲಿ ಸುಮಾರು 98 ಪ್ರತಿಶತದಷ್ಟು ಪಿಎಫ್ ಖಾತೆದಾರರ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ. 2021-22 ರ ಹಣಕಾಸು ವರ್ಷದಲ್ಲಿ, ಇಪಿಎಫ್ ಮೇಲಿನ ಬಡ್ಡಿ ದರವನ್ನು ಶೇಕಡಾ 8.1 ಕ್ಕೆ ನಿಗದಿ ಮಾಡಲಾಗಿದ್ದು, ನಿಮ್ಮ ಪಿಎಫ್ ಖಾತೆಯಲ್ಲಿ ಬಡ್ಡಿ ಹಣವನ್ನು (Provident Fund Interest Money)ಠೇವಣಿ ಆಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ.

ಕೇಂದ್ರ ರಾಜ್ಯ ಸಚಿವ ರಾಮೇಶ್ವರ್ ತೇಲಿ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ,ಟಿಡಿಎಸ್‌ಗೆ ಸಂಬಂಧಿಸಿದ ಹೊಸ ನಿಯಮಗಳಿಂದಾಗಿ, ಪಿಎಫ್ ಖಾತೆಗೆ ಬಡ್ಡಿ ಠೇವಣಿ ಮಾಡುವ ಪ್ರಕ್ರಿಯೆಯು ವಿಳಂಬವಾಗಿದೆ. ಇಪಿಎಫ್ ಖಾತೆಗೆ ಬಡ್ಡಿಯನ್ನು ಜಮಾ ಮಾಡುವುದು ನಿರಂತರ ಪ್ರಕ್ರಿಯೆ ಆಗಿದ್ದು, ಹೊಸ ತಂತ್ರಾಂಶ ಅಳವಡಿಕೆಯಾದ ನಂತರ ನಿಗದಿತ ವಿಧಾನದ ಅನುಸಾರ ಬಡ್ಡಿ ಜಮೆ (Provident Fund Interest Money)ಮಾಡುವ ಪ್ರಕ್ರಿಯೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

PF ಬ್ಯಾಲೆನ್ಸ್ ಅನ್ನು ಚೆಕ್ ಮಾಡುವ ವಿಧಾನ ಹೀಗಿದೆ ನೋಡಿ.
ಮೊದಲು EPFO ​​ಪೋರ್ಟಲ್ www.epfindia.gov.in ಗೆ ಭೇಟಿ ನೀಡಬೇಕು. ಆ ಬಳಿಕ, E-PassBook ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಹೊಸ ಪುಟದಲ್ಲಿ UAN ಮೇಲೆ ಕ್ಲಿಕ್ ಮಾಡಿ ಮತ್ತು ಪಾಸ್‌ವರ್ಡ್ ಅನ್ನು ಹಾಕಬೇಕು. ಬಳಿಕ ಕೆಳಗೆ ನೀಡಲಾದ ಕ್ಯಾಪ್ಚಾ ಕೋಡ್ ಅನ್ನು ಹಾಕಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಲಾಗಿನ್ ಆದ ಬಳಿಕ ಸದಸ್ಯ ID ಆಯ್ಕೆಯನ್ನು ಆರಿಸಿಕೊಂಡರೆ ಅಲ್ಲಿ PDF ರೂಪದಲ್ಲಿ ಪಾಸ್‌ಬುಕ್ ಕಂಡುಬರುತ್ತದೆ. ಇದರಲ್ಲಿ ಇತ್ತೀಚೆಗೆ ಬಂದ ಬಡ್ಡಿ ಮೊತ್ತ ಇತ್ಯಾದಿಗಳನ್ನು ಪರಿಶೀಲನೆ ಮಾಡಬಹುದು.

ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯುನಿವರ್ಸಲ್ ಅಕೌಂಟ್ ನಂಬರ್ (UAN) ಮೂಲಕ ಇ-ನಾಮನಿರ್ದೇಶನವನ್ನು ಮಾಡಬಹುದಾಗಿದೆ.

ಇದನ್ನೂ ಓದಿ Tirumala: ತಿರುಪತಿ ಭಕ್ತಾದಿಗಳೇ ಗಮನಿಸಿ, ಈ ಸೇವೆಗಳು ಏಪ್ರಿಲ್ 3ರಿಂದ ಇರಲ್ಲ 

 

Leave A Reply

Your email address will not be published.