Peacock feather : ಮನೆಯಲ್ಲಿ ನವಿಲುಗರಿ ಏಕೆ ಇಡಬೇಕು ಗೊತ್ತೇ?
Peacock feather :ಅತ್ಯಂತ ಸುಂದರವಾದ ಪಕ್ಷಿಗಳಲ್ಲಿ ನವಿಲು ಒಂದು. ನವಿಲಿನ ಗರಿಯನ್ನು ಪುಸ್ತಕದಲ್ಲಿಡುವುದು, ಮನೆಯಲ್ಲಿಡುವುದು ಸಾಮಾನ್ಯ. ಇದರ ಹಿಂದೆ ಇರುವ ಲಾಭದ ಉದ್ದೇಶ ಜೊತೆಗೆ ಧಾರ್ಮಿಕ ನಂಬಿಕೆಗಳು ಅನೇಕರಿಗೆ ತಿಳಿದಿರುವುದಿಲ್ಲ.
ನವಿಲು ಗರಿ (Peacock feather)ಯನ್ನು ಪ್ರತಿಯೊಬ್ಬರೂ ಅಂದರೆ ಜಾತಿ ಮತ ಬೇಧವಿಲ್ಲದೆ ಪೂಜ್ಯ ಭಾವನೆಯಿಂದ ಕಾಣುವವರು. ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಶುಭ ಫಲ ದೊರೆಯುತ್ತದೆ. ಎಲ್ಲೆಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದು ಯಾವ ಯಾವ ಫಲಗಳು ಸಿಗುತ್ತವೆ ಎಂಬುದನ್ನು ನೋಡೋಣ.
ವಾಸ್ತುಶಾಸ್ತ್ರದ ಪ್ರಕಾರ ಮನೆಯ ನಿರ್ದಿಷ್ಟ ಭಾಗದಲ್ಲಿ ನವಿಲು ಗರಿ ಇಟ್ಟರೆ ಶಾಂತಿ, ನೆಮ್ಮದಿ, ಸಂಪತ್ತು, ಸಮೃದ್ಧಿ ಪ್ರಯೋಜನಗಳನ್ನು ಪಡೆಯಬಹುದು.
ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಗೆ ಅಷ್ಟ ಐಶ್ವರ್ಯ ಬಂದು ಒದಗುತ್ತದೆ. ಪಾಸಿಟಿವ್ ಎನರ್ಜಿ ಅಂದರೆ ಸಕಾರಾತ್ಮಕ ಶಕ್ತಿ ಕೂಡ ಬರುತ್ತದೆ ಇದರಿಂದಾಗಿ ಮನೆಯಲ್ಲಿ ಪ್ರಶಾಂತವಾದ ವಾತಾವರಣ ಮನಸ್ ಶಾಂತಿ ನೆಮ್ಮದಿ ತಾನಾಗಿ ಬಂದು ನೆಲೆಸುತ್ತದೆ.
ನವಿಲುಗರಿಯನ್ನು ಮನೆಯಲ್ಲಿ ಬೆಡ್ ರೂಂ ನಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಮನೆಯ ಪ್ರಧಾನ ಬಾಗಿಲ ಬಳಿ ಈ ನವಿಲುಗರಿಯನ್ನು ಇಡುವುದರಿಂದ ಒಳ್ಳೆಯ ಶುಭ ಸೂಚನೆಗಳು ಶುಭ ಸಮಾಚಾರಗಳು ಶುಭ ಫಲಿತಗಳು ಉಂಟಾಗುತ್ತವೆ.
ಶ್ರೀ ಕೃಷ್ಣನ ಪ್ರತಿರೂಪವಾಗಿ ನವಿಲುಗರಿಯನ್ನು ಭಾವಿಸಲಾಗುತ್ತದೆ ಎಲ್ಲಿ ಶ್ರೀ ಕೃಷ್ಣನು ಇರುತ್ತಾನೋ ಅಲ್ಲಿ ಶ್ರೀ ಮಹಾಲಕ್ಷ್ಮಿಯು ತಾನಾಗಿ ತಾನೆ ಬಂದು ನೆಲೆಸುತ್ತಾಳೆ. ಪ್ರತಿದಿನ ಪ್ರಾಪ್ತಕಾಲದಲ್ಲಿ ಬೆಳಗ್ಗೆ ಎದ್ದ ತಕ್ಷಣ ನವಿಲುಗರಿ ನೋಡುವುದರಿಂದ ರಾಹು ಗ್ರಹ ದೋಷಗಳು ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯ ಕಾರರು ಹೇಳುತ್ತಿದ್ದಾರೆ.
ನವಿಲು ಗರಿಯು ನಿಮ್ಮ ಮನೆಯಿಂದ ಎಲ್ಲಾ ರೀತಿಯ ವಾಸ್ತು ದೋಷವು ತೆಗೆದುಹಾಕಬಹುದು. ಈ ನವಿಲು ಗರಿಯನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನ ಯಾವುದೇ ಮೂಲೆಯಲ್ಲಿ ಇರಿಸಿ. ಹೊರಗಿನಿಂದ ಬರುವ ಜನರು ನೀವು ಹಾಕಿದ ನವಿಲು ಗರಿಯನ್ನು ನೋಡಬಹುದಾದ ರೀತಿಯಲ್ಲಿ ಇಡಿ.
ಗರಿಯನ್ನು ರೇಷ್ಮೆ ಬಟ್ಟೆಯಲ್ಲಿ ಬೀರುವಿನ ಹಣ ಶೇಖರಿಸುವ ಜಾಗದಲ್ಲಿ ಇಡುವುದರಿಂದ ಧನಲಾಭ ಹೆಚ್ಚಾಗುತ್ತದೆ. ಹಾಗೆಯೇ ಕಾಳಸರ್ಪ ದೋಷವಿದ್ದರೆ ಮನೆಯಲ್ಲಿ ನವಿಲು ಗರಿ ಇಡುವುದರಿಂದ ದೋಷ ಕಡಿಮೆಯಾಗುತ್ತದೆ.
ಸುಬ್ರಹ್ಮಣ್ಯ ದೇವರ ವಾಹನವಾಗಿರುವ ನವಿಲಿನ ಗರಿಗಳನ್ನು ಸುಬ್ರಹ್ಮಣ್ಯನರ ಆಶೀರ್ವಾದ ಪಡೆಯಲು ಮನೆಯಲ್ಲಿ ಇಡಲಾಗುತ್ತದೆ ಎಂದು ಹೇಳಲಾಗುತ್ತದೆ. ನವಿಲು ಗರಿಗಳಿಂದ ಪೂಜಿಸುವುದು ಸುಬ್ರಹ್ಮಣ್ಯ ದೇವರನ್ನು ಪೂಜಿಸುವುದಕ್ಕೆ ಸಮಾನವಾಗಿದೆ. ಹಾಗಾಗಿ ಮನೆಯಲ್ಲಿ ನವಿಲು ಗರಿಗಳನ್ನು ಧಾರಾಳವಾಗಿ ಇಟ್ಟುಕೊಳ್ಳಬಹುದು. ಹಾಗಾಗಿ ಒಳ್ಳೆಯದೇ ಆಗುವುದು ಬಿಟ್ಟರೆ ಕೆಟ್ಟದ್ದೇನೂ ಆಗುವುದಿಲ್ಲ. ವಿಶೇಷವಾಗಿ ಪ್ರಾರ್ಥನಾ ಕೋಣೆಯಲ್ಲಿ ದೇವರ ಚಿತ್ರದ ಪಕ್ಕದಲ್ಲಿ ನವಿಲು ಗರಿಯನ್ನು ಇಟ್ಟು ಪೂಜಿಸಬಹುದು.