Men health : ಲೈಂಗಿಕ ಜೀವನ ಉತ್ತಮವಾಗಿರಲು ಇವುಗಳ ಸೇವನೆ ಅತ್ಯಗತ್ಯ!

Men Health tips : ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಆರೋಗ್ಯಕ್ಕಾಗಿ (Men Health) ಮುಖ್ಯವಾಗಿ ಉತ್ತಮ ಆಹಾರ ದೇಹಕ್ಕೆ ಪೂರೈಕೆ ಆಗಬೇಕು. ಅದಲ್ಲದೆ ಜಡ ಜೀವನಶೈಲಿ, ವಯಸ್ಸು, ಒತ್ತಡ ಅಥವಾ ಕೆಲವು ಅರೋಗ್ಯ ಪರಿಸ್ಥಿತಿಗಳಿಂದ ಕಡಿಮೆ ಸಕ್ರಿಯ ಲೈಂಗಿಕ (Low Libido) ಸಮಸ್ಯೆ ಕಾಡುತ್ತದೆ ಆದರೆ ಅದನ್ನು ಸುಧಾರಿಸಲು ಮಾರ್ಗಗಳಿವೆ. ತಜ್ಞರ ಪ್ರಕಾರ ಪುರುಷರು ಮತ್ತು ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಯಾವ ಆಹಾರಗಳು ಉತ್ತಮವೆಂದು ಈಗಾಗಲೇ ಹಲವಾರು ಅಧ್ಯಯನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಾಸಕ್ತಿಯನ್ನು ತ್ವರಿತವಾಗಿ ಹೆಚ್ಚಿಸುವ ವಿವಿಧ ರೀತಿಯ ಆಹಾರಗಳನ್ನು ಇಲ್ಲಿ ತಿಳಿಸಲಾಗಿದೆ (Men Health tips).

ಡಾರ್ಕ್ ಚಾಕೊಲೇಟ್ (Dark chocolate ):
ಡಾರ್ಕ್ ಚಾಕೊಲೇಟ್ ನ್ನು ಎಲ್ಲರೂ ಇಷ್ಟ ಪಡುತ್ತಾರೆ. ಮುಖ್ಯವಾಗಿ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್‌ ಅನ್ನು ಕಡಿಮೆಗೊಳಿಸುತ್ತದೆ. ಈ ಮೂಲಕ ರಕ್ತ ಪರಿಚಲನೆ ಸುಧಾರಿಸಬಹುದು. ಇದು ಲೈಂಗಿಕತೆಯನ್ನು ಉತ್ತೇಜಿಸುತ್ತದೆ ಕೂಡ. ಅದಲ್ಲದೆ ಸಿಹಿ-ಕಹಿ ರುಚಿಯ ಚಾಕಲೇಟ್ ಒತ್ತಡವನ್ನು ತಡೆಯುತ್ತದೆ. ಅದಲ್ಲದೆ ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ, ಜೊತೆಗೆ ಲೈಂಗಿಕ ಬಯಕೆಯನ್ನು ಉಂಟುಮಾಡುತ್ತದೆ.

ಬೀಟ್‌ರೂಟ್:
ಮುಖ್ಯವಾಗಿ ಲೈಂಗಿಕ ಕಾರ್ಯಕ್ಷ ಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್‌ರೂಟ್‌ಗೆ ಇದೆ. ನಿತ್ಯ ಬೀಟ್‌ರೂಟ್‌ ರಸ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮಿರುವಿಕೆಯ ಸಮಸ್ಯೆಯನ್ನು ಇದು ನಿವಾರಿಸಲಿದೆ. ಈ ವರ್ಣರಂಜಿತ ಆಹಾರವು ನಿಮ್ಮ ಪ್ಲೇಟ್ ಮತ್ತು ಜೀವನಕ್ಕೆ ಬಣ್ಣವನ್ನು ಸೇರಿಸುತ್ತದೆ. ಬೀಟ್ರೂಟ್ನಲ್ಲಿ ನೈಟ್ರೇಟ್ ಇದೆ ಅದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

ಕಲ್ಲಂಗಡಿ:
ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಇದರಿಂದ ಉದ್ರೇಕ ಸಮಸ್ಯೆಯಿಂದ ಮುಕ್ತರಾಗಬಹುದು. ಈಗ ಬೇಸಿಗೆಯ ಸಮಯ ಆಗಿರುವ ಕಾರಣ ಕಲ್ಲಂಗಡಿಯನ್ನು ಸೇವಿಸಲು ನಮಗೆ ಹೆಚ್ಚಿನ ಕಾರಣಗಳಿವೆ. ತಜ್ಞರ ಪ್ರಕಾರ, ಈ ಹಣ್ಣು ನೈಟ್ರಿಕ್ ಆಕ್ಸೈಡ್ ಮತ್ತು ಎಲ್-ಅರ್ಜಿನೈನ್ ಅನ್ನು ಉತ್ಪಾದಿಸುವ ಸಂಯುಕ್ತವನ್ನು ಹೊಂದಿರುತ್ತದೆ, ಇವೆರಡೂ ಆರೋಗ್ಯಕರ ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಉತ್ತಮ ಲೈಂಗಿಕ ಚಾಲನೆಗೆ ಕಾರಣವಾಗುತ್ತದೆ.

ಬೀಜಗಳು:
ಮುಖ್ಯವಾಗಿ ಕಾರ್ಬೋಹೈಡ್ರೇಟ್ ಒಳಗೊಂಡ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಶಕ್ತಿ ಉತ್ಪತ್ತಿ ಆಗುತ್ತವೆ. ಉದಾಹರಣೆಗೆ ಬೀಜಗಳು, ಕಾಳುಗಳು, ಪಿಸ್ತಾ, ಕಡಲೆಕಾಯಿ ಮತ್ತು ವಾಲ್‌ನಟ್‌ಗಳಂತಹ ಸಾಮಾನ್ಯ ಬೀಜಗಳಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳು ಅಧಿಕವಾಗಿವೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಬೀಜಗಳು ಉತ್ತಮ ಪ್ರಮಾಣದ ಸತುವನ್ನು ನೀಡುತ್ತವೆ. ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತವೆ.

ದಾಳಿಂಬೆ ಮತ್ತು ಸೇಬು:
ದಾಳಿಂಬೆ ತಿನ್ನುವುದರಿಂದ ಪುರುಷರಲ್ಲಿ ನಿಮಿರುವಿಕೆಯ ದೋಷದ ಸಮಸ್ಯೆ ದೂರವಾಗುತ್ತದೆ. ಮತ್ತೊಂದೆಡೆ, ದಾಳಿಂಬೆ ರಸವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ರಕ್ತದ ಹರಿವನ್ನು ಸರಿಯಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪುರುಷರು ಪ್ರತಿದಿನ ದಾಳಿಂಬೆ ಸೇವಿಸಬೇಕು.

ಸೇಬು ಹಣ್ಣುಗಳು ನಿಮ್ಮ ಲೈಂಗಿಕ ಜೀವನಕ್ಕೆ ನಿಜಕ್ಕೂ ಒಳ್ಳೆಯದು. ಪ್ರತಿ ದಿನ ಸೇಬು ಹಣ್ಣು ತಿನ್ನುವುದರಿಂದ ದೇಹದಲ್ಲಿ ಸಂತೋಷಕರ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಉತ್ತಮ ರಕ್ತ ಸಂಚಾರ ಉಂಟಾಗಿ ಮನಸ್ಸಿನಲ್ಲಿ ಆಹ್ಲಾದಕರ ಭಾವನೆ ಬರುತ್ತದೆ ಮತ್ತು ಸಂಗಾತಿಯ ಜೊತೆ ಸೇರಲು ಮನಸ್ಸಾಗುತ್ತದೆ.

ಈ ಮೇಲಿನಂತೆ ಲೈಂಗಿಕ ಹಸಿವನ್ನು ಹೆಚ್ಚಿಸುವ ಕೆಲವು ಸಾಮಾನ್ಯ ಆಹಾರಗಳ ಬಗ್ಗೆ ತಜ್ಞರೊಬ್ಬರು ಮಾಹಿತಿ ನೀಡಿದ್ದು, ಆರೋಗ್ಯ ತರಬೇತುದಾರ ದಿಗ್ವಿಜಯ್ ಸಿಂಗ್ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣವಾದ ತಮ್ಮ ಇನ್ಸ್ಟಾಗ್ರಾಮ್ (Instagram ) ಪುಟ ‘digvijaylifestyle’ ನಲ್ಲಿ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

Period Leave : ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ ಮಾಡಿದ ಮೊದಲ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ ಇದು!

Leave A Reply

Your email address will not be published.