Railway Station Boards : ರೈಲ್ವೆ ನಿಲ್ದಾಣದಲ್ಲಿ ಹಳದಿ ಬಣ್ಣದ ಬೋರ್ಡ್ ಯಾಕಿರುತ್ತೆ? ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ

Railway Station Boards : ದೂರದ ಊರಿಗೆ ಪ್ರಯಾಣಿಸಬೇಕಾದರೆ ಹೆಚ್ಚಾಗಿ ಜನರು ರೈಲನ್ನೇ ಅವಲಂಬಿಸುತ್ತಾರೆ.
ಹೀಗೇ ರೈಲಿನಲ್ಲಿ ಸಾಗುವಾಗ, ರೈಲ್ವೆ ನಿಲ್ದಾಣದಲ್ಲಿ ಹಳದಿ ಬಣ್ಣದ ಬೋರ್ಡ್ ಹಾಕಿರುತ್ತಾರೆ. ಇದನ್ನು ನೀವು ಗಮನಿಸಿರಬಹುದು. ಆದರೆ ನಿಮಗೆ ತಿಳಿದಿದೆಯಾ? ರೈಲ್ವೆ ನಿಲ್ದಾಣದಲ್ಲಿ ಹಳದಿ ಬಣ್ಣದ ಬೋರ್ಡ್ (Railway Station Boards) ಯಾಕಿರುತ್ತೆ ಅಂತ!!. ಬಹುಶಃ ಪ್ರಶ್ನೆ ಮಾಡಿರಬಹುದು. ಆದರೆ ಉತ್ತರ ಸಿಕ್ಕಿರಲ್ಲ.‌ ಇದರ ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.

 

ನೀವು ಗಮನಿಸಿರುತ್ತೀರಾ!!. ರೈಲ್ವೆ ಪ್ಲಾಟ್‌ಫಾರ್ಮ್‌ನ ಎರಡೂ ತುದಿಗಳಲ್ಲಿ ಹಳದಿ ಬೋರ್ಡ್ ಮೇಲೆ ಕಪ್ಪು ಅಕ್ಷರಗಳಲ್ಲಿ ರೈಲ್ವೆ ನಿಲ್ದಾಣದ (Railway Station) ಹೆಸರು ಇರುತ್ತದೆ. ಕೆಲವು ಕಡೆ ಹಳದಿ ಬಣ್ಣದಲ್ಲಿ ನೀಲಿ ಅಕ್ಷರಗಳಲ್ಲಿ ಇರುತ್ತದೆ. ಈ ಬೋರ್ಡ್ ಸಹಾಯದಿಂದ ಪ್ರಯಾಣಿಕರು ದೂರದಿಂದಲೇ ತಮ್ಮ ನಿಲ್ದಾಣ ಬಂದಿದೆಯಾ? ಇಲ್ಲವಾ? ಎಂಬುದನ್ನು ನೋಡಬಹುದು.

ಬೋರ್ಡ್ ನಲ್ಲಿ ಹೆಚ್ಚಾಗಿ ಹಳದಿ ಬಣ್ಣ ಯಾಕೆ ಬಳಸುತ್ತಾರೆ? ಕೆಂಪು ಅಥವಾ ಬೇರೆ ಬಣ್ಣ ಏಕೆ ಬಳಸುವುದಿಲ್ಲ? ಹಳದಿ ಬಣ್ಣ ಕೆಂಪು ಬಣ್ಣಕ್ಕಿಂತ ವೇಗವಾಗಿರುತ್ತದೆ. ಅಂದ್ರೆ , ನೇರವಾಗಿ ಬೋರ್ಡ್ ನೋಡದಿದ್ದರೂ ಹಳದಿ ಬೋರ್ಡ್ (yellow color board) ಬೇಗನೆ ಕಾಣಿಸುತ್ತದೆ. ಹಾಗೆಯೇ ಗಾಢ ಅಥವಾ ಮಂಜಿನ ವಾತಾವರಣದಲ್ಲಿ ಕೆಂಪು ಬಣ್ಣಕ್ಕಿಂತ ಹಳದಿ ಬಣ್ಣ ಹೆಚ್ಚು ಗೋಚರಿಸುತ್ತದೆ.

ಇನ್ನು ಹಳದಿ ಸೈನ್‌ಬೋರ್ಡ್‌ನಲ್ಲಿ ಕಪ್ಪು ಅಥವಾ ಗಾಢ ನೀಲಿ ಬಣ್ಣದ ಅಕ್ಷರಗಳನ್ನು ಬರೆದಿರುತ್ತಾರೆ. ಯಾಕೆ ಈ ಬಣ್ಣದಲ್ಲಿ ಬರೆಯಲಾಗುತ್ತದೆ? ಯಾಕಂದ್ರೆ, ಕಪ್ಪು ಬಣ್ಣವನ್ನು (black color) ಒಪ್ಪಂದದ ಬಣ್ಣವಾಗಿ ಆಯ್ಕೆ ಮಾಡಿರುವುದು. ಹಳದಿ ಬೋರ್ಡ್‌ನಲ್ಲಿ ಕಪ್ಪು ಅಥವಾ ಗಾಢ ನೀಲಿ ಬಣ್ಣ ಹೆಚ್ಚು ಹೈಲೈಟ್ ಆಗುತ್ತದೆ. ಇದನ್ನು ಹೊರತು ಬೇರೆ ಬಣ್ಣ ಅಷ್ಟಾಗಿ ಗೋಚರಿಸುವುದಿಲ್ಲ. ಹಳದಿ ಬೋರ್ಡ್ ಮೇಲೆ ಕಪ್ಪು ಅಕ್ಷರಗಳನ್ನು ಬರೆದರೆ ದೂರದಿಂದಲೂ ಬೋರ್ಡಿನಲ್ಲಿ ಬರೆದಿರುವುದನ್ನು ಓದಬಹುದು. ಹಾಗಾಗಿ ರೈಲ್ವೆ ನಿಲ್ದಾಣದಲ್ಲಿ ಹಳದಿ ಬಣ್ಣದ ಬೋರ್ಡ್ ಹಾಕಲಾಗುತ್ತದೆ. ಹಾಗೇ
ಕಪ್ಪು ಬಣ್ಣ ಹೈಲೈಟ್ ಆಗುವ ಕಾರಣ ಕಪ್ಪು ಅಕ್ಷರದಲ್ಲಿ ಬರೆಯಲಾಗುತ್ತದೆ.

Leave A Reply

Your email address will not be published.