Gautam Adani : ಅದಾನಿಗೆ ಮತ್ತೊಂದು ಬಿಗ್ ಶಾಕ್!ಈ ಪಟ್ಟಿಯಿಂದ ಹೊರಗೆ ?

Gautam Adani : ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಗೆ (Gautam Adani) ಬಿಗ್ ಶಾಕಿಂಗ್ ದೊರೆತಿದೆ. ಗೌತಲ್ ಅದಾನಿ ಆಸ್ತಿ ದಿನದಿಂದ ದಿನಕ್ಕೆ ನಷ್ಟವನ್ನ ದಾಖಲಿಸುತ್ತಿದೆ. ಅದಾನಿ ಟೋಟಲ್ ಗ್ಯಾಸ್ ಷೇರುಗಳು ಸತತ ಎರಡನೇ ಅಧಿವೇಶನದಲ್ಲಿ ಶೇಕಡಾ 5ರಷ್ಟು ಕುಸಿದಿವೆ.

 

ವಿಶ್ವದ ಶ್ರೀಮಂತರ ಅಗ್ರ 25 ಪಟ್ಟಿಯಿಂದ ಹೊರಗುಳಿದಿದ್ದಾರೆ. ಅದಾನಿ ಅವರ ನಿವ್ವಳ ಮೌಲ್ಯವು ಗಮನಾರ್ಹವಾಗಿ ಕುಸಿದಿದ್ದು, ವಿಶ್ವದ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅವರನ್ನ 26ನೇ ಸ್ಥಾನಕ್ಕೆ ತಂದಿದೆ.

ಮಂಗಳವಾರ ಅದಾನಿ 25ನೇ ಸ್ಥಾನದಲ್ಲಿದ್ದರು. ಈಗ ಆ ಸ್ಥಾನವನ್ನು ಕಳೆದುಕೊಂಡಿದ್ದಾರೆ.ಕಳೆದ 24 ಗಂಟೆಗಳಲ್ಲಿ ಗೌತಮ್ ಅದಾನಿ 2.6 ಬಿಲಿಯನ್ ಡಾಲರ್ ಅಥವಾ 21 ಸಾವಿರ ಕೋಟಿ ರೂ.ಗಿಂತ ಹೆಚ್ಚು ಕಳೆದುಕೊಂಡಿದ್ದಾರೆ.

ಅದಾನಿ ಸಮೂಹದ ಪ್ರಮುಖ ಹೂಡಿಕೆದಾರ ಸಂಸ್ಥೆಯೊಂದು ಸಹ ಮಾಲೀಕತ್ವ ಹೊಂದಿರುವ ಕಂಪನಿಯೊಂದಕ್ಕೆ ರಕ್ಷಣಾ ವ್ಯವಸ್ಥೆಗಳ ಪೂರೈಕೆಗೆ ಗುತ್ತಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಸೇರಿದಂತೆ ಕೆಲ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಬುಧವಾರ ಆರೋಪಿಸಿವೆ.

Leave A Reply

Your email address will not be published.