Yaduveer Wadiyar :ಯದುವೀರ್ ಒಡೆಯರ್ ಅವರಿಗೆ ಜನ್ಮ ಕೊಟ್ಟ ತಂದೆ ತಾಯಿ ಯಾರು ಗೊತ್ತಾ?

Yaduveer Wadiyar : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂದು ಈಗ ಪ್ರಸಿದ್ಧರಾಗಿರುವ ಯದುವೀರ(Yaduveer Wadiyar)ರನ್ನು ಯದುವಂಶದ ೨೭ನೆಯ ಅಧಿಕಾರಿಯಾಗಿ, ‘ಮಹಾರಾಣಿ ಪ್ರಮೋದಾದೇವಿ’ಯವರು ೨೦೧೫ ರ, ಫೆಬ್ರವರಿ ೨೩, ರಂದು ದತ್ತುಪುತ್ರನಾಗಿ ಸ್ವೀಕರಿಸಿದರು.

ಯದುವೀರರ ಮೊದಲಹೆಸರು, ‘ಯದುವೀರ್ ಗೋಪಾಲರಾಜೇ ಅರಸ್,’ ಎಂದು. ದತ್ತು ಸ್ವೀಕಾರ ಸಮಾರಂಭದ ಸಮಯದಲ್ಲಿ ಈ ಹೆಸರನ್ನು ಬದಲಾಯಿಸಲಾಯಿತು. ೨೨ ವರ್ಷ ಹರೆಯದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ೨೦೧೫ ರ ಮೇ, ೨೮, ಗುರುವಾರ ವಿಧ್ಯುಕ್ತವಾಗಿ ೨೭ ನೇ ರಾಜರಾಗಿ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸಿಕೊಂಡಿದ್ದರು.
ಯದುವೀರ್ ಹಾಗು ನರಸಿಂಹ ರಾಜ್ ಒಡೆಯರ್ ಅವರಿಗೆ ಏನು ಸಂಬಂಧ? ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 1992 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು.ಈಗ ಇವರಿಗೆ 28 ವರ್ಷ. ಇವರ ತಂದೆಯ ಹೆಸರು ಸ್ವರೂಪ್ ಆನಂದ್ ಗೋಪಾಲ್ ರಾಜ್ ಅರಸ್ ಹಾಗೂ ತಾಯಿಯ ಹೆಸರು ಲೀಲಾ ತ್ರಿಪುರ ಸುಂದರಿ.
ಯದುವೀರ್ ಅವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನ ಕೆನಡಿಯನ್ ಇಂಟರ್ ನ್ಯಾಶನಲ್ ಸ್ಕೂಲಿನಲ್ಲಿ ಮುಗಿಸಿಕೊಂಡ ನಂತರ. ಅಮೇರಿಕಾದ ಪ್ರಸಿದ್ಧವಾದಂತಹ ಮ್ಯಾಸೆಪ್ ಜೊಸೆಪ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್ ನಲ್ಲಿ ಪದವಿ ಮುಗಿಸಿಕೊಂಡಿದ್ದಾರೆ.
ಯಾವಾಗ ಯದುವೀರ್ ಅವರು ವಿದೇಶದಲ್ಲಿ ಓದುತ್ತಿದ್ದರೋ ಆಗಲೇ ಇವರೇ ಮುಂದಿನ ಮೈಸೂರಿನ ರಾಜ ಎಂದು ನಿರ್ಧಾರ ಮಾಡಿದ್ದರು ನರಸಿಂಹ ರಾಜ ಒಡೆಯರ್.ಯಾವಾಗ ಶ್ರೀ ಕಂಠ ದತ್ತ ನರಸಿಂಹರಾಜ ಒಡೆಯರ್ ಅವರ ಆರೋಗ್ಯ ಚೇತರಿಸಿಕೊಳ್ಳಲಾಗಲಿಲ್ಲವೋ ಆಗ ಯದುವೀರ್ ಅವರನ್ನು ಭಾರತಕ್ಕೆ ಕರಿಸಿ ಕೊಂಡರಂತೆ ಪ್ರಮೋದ ದೇವಿ.
ಆನಂದ್ ಗೋಪಾಲ್ ರಾಜ್ ಮದುವೆಯಾಗಿರುವ ಲೀಲಾ ತ್ರಿಪುರ ಸುಂದರಿ ದೇವಿ ಬೇರೆ ಇನ್ಯಾರು ಅಲ್ಲ ನರಸಿಂಹ ರಾಜ್ ಒಡೆಯರ್ ಅವರಿಗೆ ತಂಗಿಯಾಗಬೇಕು. ಅಂದರೆ ಯದುವೀರ್ ಒಡೆಯರ್ ಅವರಿಗೆ ನರಸಿಂಹ ರಾಜ ಒಡೆಯ ಸ್ವಂತ ಮಾವ ಆಗಬೇಕು..

ಯದುವೀರ್ ರವರು, ತಮ್ಮ ಪಟ್ಟಾಭಿಷೇಕವಾಗಿ ಸಿಂಹಾಸನಾರೋಹಣ ಮಾಡಿದ ಒಂದು ವರ್ಷದ ತರುವಾಯ ೨೭, ಜೂನ್ ೨೦೧೬ ರಲ್ಲಿ ತ್ರಿಶಿಖಾಕುಮಾರಿಯವರನ್ನು ಮದುವೆಯಾದರು. ತ್ರಿಶಿಖಾಕುಮಾರಿಯವರು ರಾಜಾಸ್ಥಾನದ ಡುಂಗರ್ಪುರ್ ರಾಜವಂಶದ ಹರ್ಷ್ ವರ್ಧನ್ ಸಿಂಗ್, ಮತ್ತು ಮಹೇಶ್ರಿ ಕುಮಾರಿಯವರ ಪುತ್ರಿ. ತ್ರಿಶಿಖಾಕುಮಾರಿ ಅವರು, ೬, ಡಿಸೆಂಬರ್, ೨೦೧೭ ರಂದು, ಗಂಡುಮಗು, ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಮಗುವಿಗೆ ಜನ್ಮಕೊಟ್ಟರು.