Benefits of Urine : ನಿಮಗಿದು ಗೊತ್ತೇ? ಮಾನವ ಮೂತ್ರದಿಂದಲೂ ಪ್ರಯೋಜನವಿದೆಯಂತೆ? ಹೇಗೆ?
Benefits Of Urine: ಭಾರತದಲ್ಲಿ (in India), ಅದರಲ್ಲೂ ಹಿಂದೂ ಧರ್ಮದಲ್ಲಿ (Hindu Religion) ಗೋವಿಗೆ (Cow) ಮಹತ್ವದ ಸ್ಥಾನ ನೀಡಲಾಗಿದೆ. ಗೋವಿನ ಮೂತ್ರ (Urine), ಸಗಣಿ (Dung), ಹಾಲು (Milk) ಎಲ್ಲವೂ ಶ್ರೇಷ್ಠ ಎನ್ನುವುದು ಹಿಂದೂ ಧರ್ಮದಲ್ಲಿ ಗೋಮೂತ್ರ ಹಲವು ರೋಗಗಳಿಗೆ (Dieses) ರಾಮಬಾಣ ಎನ್ನುವುದು ಗೊತ್ತಿರುವ ವಿಚಾರವೇ. ಆದರೆ, ಮಾನವ ಮೂತ್ರದಿಂದ ಅನೇಕ ಪ್ರಯೋಜನಗಳಿವೆ ಎಂದು ಕೇಳಿದರೆ ಅಚ್ಚರಿಯಾಗಬಹುದು.
ಮಾನವ ಮೂತ್ರ (Human Urine)ಎಂದಾಗ ಅಸಹ್ಯ ಆಗೋದು ಗ್ಯಾರಂಟಿ!! ಅರೇ ಇದರಿಂದಲೂ ಪ್ರಯೋಜನವಿದೆಯಾ ಎಂದು ಆಶ್ಚರ್ಯ ಕೂಡ ಆಗಬಹುದು. ಸಹಜವಾಗಿ ಮೂತ್ರ ಅಂದಾಗ ಕೊಳಕು ಎಂದು ಮಾರು ಆಡಿ ದೂರ ಹೋಗೋದು ಕಾಮನ್. ಹೀಗಿರುವಾಗ, ಇದರಿಂದ ಏನು ಉಪಯೋಗವಿದೆ ಎಂದು ತಿಳಿದರೆ ನೀವು ಶಾಕ್ ಆಗೋದು ಪಕ್ಕಾ!!
ಕೇಳಲು ಮುಜುಗರ, ಅಸಹ್ಯ ಎಂದೆನಿಸಿದರೂ ಕೂಡ ಮಾನವ ಮೂತ್ರವನ್ನು (Human Urine)ಯಾವುದಕ್ಕೆಲ್ಲ ಬಳಕೆ ಮಾಡಲಾಗುತ್ತದೆ ಎಂದು ಕೇಳಿದರೆ ಬೆರಗಾಗುತ್ತದೆ. ಪುರಾತನ ರೋಮನ್ನರು ಮೂತ್ರದಿಂದ ಹಲ್ಲುಜ್ಜುತ್ತಿದ್ದರು ಎಂದು ವರದಿಯಾಗಿದ್ದು, ಹೀಗಾಗಿ, ಹಿಂದಿನವರ ಹಲ್ಲುಗಳು ಫಳ ಫಳ ಹೊಳೆಯುತ್ತಿತ್ತಂತೆ. ಆದರೆ ಈ ಸುದ್ದಿ ಎಷ್ಟು ನಿಜ ಎಂಬ ಸಂಶೋಧನೆ ಕೂಡ ಮಾಡಲಾಗಿತ್ತು ಎನ್ನಲಾಗಿದೆ. ಮೂತ್ರವು ದೇಹದ ಮೇಲಿನ ಗಾಯಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ವರ್ಷಗಳ ಹಿಂದೆ ಮೂತ್ರವನ್ನು ನಂಜುನಿರೋಧಕವಾಗಿ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಎನ್ಮೂತ್ರದಲ್ಲಿ ಯೂರಿಯಾದ ಪ್ರಮಾಣ ಹೆಚ್ಚಿರುವುದರಿಂದ ಇದು ಸೋಂಕು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ, ಗಾಯಗಳಾದಾಗ ಮೂತ್ರದಿಂದ (Benefits of Urine) ಸ್ವಚ್ಛಗೊಳಿಸಲಾಗುತ್ತಿತ್ತಂತೆ.
ಈ ಹಿಂದೆ ಬಂದೂಕುಗಳು ಮತ್ತು ಫಿರಂಗಿಗಳಲ್ಲಿ ಬಳಸುವ ಗನ್ ಪೌಡರ್ ಅನ್ನುತಯಾರಿಕೆಯಲ್ಲಿ ಮೂತ್ರವನ್ನು ಬಳಕೆ ಮಾಡಲಾಗುತ್ತಿತ್ತು. ಮೂತ್ರಕ್ಕೆ ಸುಣ್ಣ ಮತ್ತು ಮರದ ಬೂದಿಯನ್ನು ಸೇರಿಸಿಕೊಂಡು ಮಿಕ್ಸ್ ಮಾಡಿ, ಸುಮಾರು ಎರಡು ವರ್ಷಗಳ ಕಾಲ ಕೊಳೆತ ಬಳಿಕ ಅದು ಉಪ್ಪು ಕಾಗದವಾಗಿ ಬದಲಾಗಲಿದ್ದು, ಇದರಿಂದ ಗನ್ ಪೌಡರ್ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಬಟ್ಟೆ ಒಗೆಯಲು ಈ ಹಿಂದೆ ಮೂತ್ರವನ್ನು ಬಳಕೆ ಮಾಡಲಾಗುತ್ತಿತ್ತು. ಮೂತ್ರವು ಯೂರಿಯಾವನ್ನು ಹೊಂದಿದ್ದು, ವಯಸ್ಸಾದಾಗ ಅಮೋನಿಯಾವಾಗಿ ಬದಲಾಗಲಿದೆ.ಇದು ಜಿಡ್ಡಿನ ಅಥವಾ ಎಣ್ಣೆ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ಸಾಮರ್ಥ್ಯ ಹೊಂದಿದ್ದು, ಅಮೋನಿಯಾ ಉತ್ತಮ ಶುಚಿಗೊಳಿಸುವ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ.
2012 ರಲ್ಲಿ, ಮೂರು ಶಾಲೆಗಳ ವಿದ್ಯಾರ್ಥಿಗಳು(Students) ಮೂತ್ರ-ಚಾಲಿತ ಬ್ಯಾಕಪ್ ಜನರೇಟರ್ ಅನ್ನು ತಯಾರಿಸಿದ್ದು, ಒಂದು ಲೀಟರ್ ಮೂತ್ರದಿಂದ ಆರು ಗಂಟೆಗಳಷ್ಟು ವಿದ್ಯುತ್(Electricity) ಅನ್ನು ಉತ್ಪಾದಿಸಬಹುದು. ಇದು ಎಲೆಕ್ಟ್ರೋಲೈಟ್ ಬ್ಯಾಟರಿಯನ್ನು(Electro Light Battery) ಒಳಗೊಂಡಿದ್ದು, ಇದು ವಿದ್ಯುತ್ ಉತ್ಪಾದಿಸಲು ಮೂತ್ರವನ್ನು ಹೈಡ್ರೋಜನ್ ಆಗಿ ವಿಭಜಿಸುತ್ತದೆ. ಮಾನವ ಮೂತ್ರದಿಂದ(Human Urine) ವಾಹನಗಳು ಓಡಬಹುದೇ ಎಂದು ಪರೀಕ್ಷಿಸುವ ಪ್ರಯೋಗಗಳು ಅಮೆರಿಕ ಮತ್ತು ಭಾರತ ಸೇರಿದಂತೆ ವಿಶ್ವದ ಹಲವೆಡೆ ನಡೆಯುತ್ತಿವೆ. ಅಮೋಗಿ, ಅಮೇರಿಕನ್ ಕಂಪನಿ (ಯುಎಸ್ ಕಂಪನಿ) ಅಮೋನಿಯಾದಿಂದ ಚಲಿಸುವ ಟ್ರಾಕ್ಟರ್ ಅನ್ನು ರಚಿಸಿದೆ.
ಚರ್ಮದ ವಸ್ತುಗಳ ತಯಾರಿಕೆಯಲ್ಲಿ ಮಾನವ ಮೂತ್ರ ಇಲ್ಲವೇ ಕುದುರೆ ಮೂತ್ರವನ್ನು ಬಳಕೆ ಮಾಡಲಾಗುತ್ತಿತ್ತು. ಪ್ರಾಣಿಗಳ ಚರ್ಮವನ್ನು ಮೂತ್ರದಲ್ಲಿ ನೆನೆಸಿ ಅವುಗಳನ್ನು ಮೃದುಗೊಳಿಸಿದಾಗ ಕೂದಲು ಸುಲಭವಾಗಿ ಉದುರುತ್ತದೆ. ತಮ್ಮ ಬಟ್ಟೆಗೆ ಬಣ್ಣ ಹಚ್ಚಲು ಮೂತ್ರವನ್ನು ಬಳಕೆ ಮಾಡಲಾಗುತ್ತದೆ. ಅಮೋನಿಯಾಕ್ಕೆ ತಿರುಗಿದ ಸಂದರ್ಭ ಹಳೆಯ ಮೂತ್ರಕ್ಕೆ ಬಣ್ಣವನ್ನು ಸೇರಿಸಲಾಗುತ್ತದೆ. ಹೀಗಾಗಿ, ಬಣ್ಣವು ಸುಲಭವಾಗಿ ಬಟ್ಟೆಗೆ ಅಂಟಿಕೊಳ್ಳುತ್ತದೆ. ಮನೆಗಳ ನಿರ್ಮಾಣಕ್ಕೂ ಮೂತ್ರವನ್ನು ಬಳಕೆ ಮಾಡಲಾಗುತ್ತದೆ.
ಕೇಪ್ ಟೌನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮೂತ್ರವನ್ನು ಸಂಗ್ರಹಣೆ ಮಾಡಲಾಗಿ, ಫಿಲ್ಟರ್ ಸಹಾಯದಿಂದ ಅದರ ಘಟಕಗಳನ್ನು ಬೇರ್ಪಡಿಸಲಾಗಿದೆ.ಆ ಬಳಿಕ ಅದನ್ನು ಸುಣ್ಣದೊಂದಿಗೆ ಬೆರೆಸಲಾಗಿದ್ದು, ಪಿ-ಸಿಮೆಂಟ್ ಅನ್ನು ಸುಣ್ಣ, ಮರಳು ಮತ್ತು ಬ್ಯಾಕ್ಟೀರಿಯಾವನ್ನು ಬೆರೆಸಿ ಸಿದ್ದ ಪಡಿಸಲಾಗುತ್ತದೆ. ಇದರಿಂದ ಇಟ್ಟಿಗೆಗಳನ್ನು ಕೂಡ ತಯಾರಿಸಲಾಗುತ್ತದೆ. ಇದೆಲ್ಲದರ ಹೊರತಾಗಿ,ಮಾನವನ ಮೂತ್ರ ಜೈವಿಕ ಇಂಧನವನ್ನು ತಯಾರಿಸಲು ಉಪಯುಕ್ತವಾಗಿದೆ. ಅದು ಅಮೋನಿಯಮ್ ಸಲ್ಫೇಟ್ ಹಾಗೂ ಸಾರಜನಕವನ್ನು ಕೂಡಾ ಒದಗಿಸುತ್ತದೆ. ಮೂತ್ರದಿಂದ ಯೂರಿಯಾ ರಸಗೊಬ್ಬರ ಉತ್ಪಾದಿಸಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೂಡ ಹೇಳಿದ್ದರು.