Beer Benefits: ಬಿಯರ್ ಕುಡಿಯೋದು ಆರೋಗ್ಯಕ್ಕೆ ತುಂಬಾ ಒಳ್ಳೇದಂತೆ! ಇದರ ಸೇವನೆ ಏನೆಲ್ಲಾ ಪ್ರಯೋಜನ ನೀಡುತ್ತೆ ಗೊತ್ತಾ?

Beer benefits: ಒಂದು ಲೆಕ್ಕದಲ್ಲಿ ಸುರಪಾನಗಳ ಸಾಲಿಗೇ ಸೇರುವ ಬಿಯರ್(Beer) ಎಂದರೆ ಹಲವರಿಗೆ ಬಲು ಇಷ್ಟ. ಆದ್ರೆ ಈ ಬಿಯರ್ ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಸಾಮಾನ್ಯವಾಗಿ ಬಿಯರ್ ತಯಾರಿಸಲು ಹಣ್ಣು (fruits) ಮತ್ತು ಧಾನ್ಯದ ರಸವನ್ನು ಬಳಸುತ್ತಾರೆ. ಅದರಲ್ಲಿ ಅಲ್ಪ ಪ್ರಮಾಣದ ಆಲ್ಕೋಹಾಲ್ (Alcohol) ಅನ್ನು ಸೇರಿಸಲಾಗುತ್ತದೆ. ಆದರೆ ಅತಿಯಾದ ಸೇವನೆಯನ್ನು ತಪ್ಪಿಸಬೇಕು. ಪ್ರತಿದಿನ 1 ಬಿಯರ್ ಸೇವಿಸಿದರೆ, ಅದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ(Beer benefits). ಹಾಗಿದ್ರೆ ಏನು ಆ ಪ್ರಯೋಗಗಳು?

ಸಂಶೋಧನೆಯೊಂದು, ಪ್ರತಿದಿನ 1.5 ಬಿಯರ್ ಕುಡಿಯುವುದರಿಂದ ಹೃದಯಾಘಾತದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ತಿಳಿಸಿದೆ. ಇಂದು ಅನೇಕ ಜನರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ, ರಾತ್ರಿಯ ಊಟಕ್ಕೆ ಮುಂಚಿತವಾಗಿ, ಬಿಯರ್ ಕುಡಿಯಿರಿ ಮತ್ತು ಆಹಾರವನ್ನು ಸೇವಿಸಿ. ಇದು ನಿಮ್ಮ ಮೆದುಳಿನ ಕೋಶಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ನೀವು ಬೇಗನೆ ನಿದ್ರಿಸುವಂತೆ ಮಾಡುತ್ತದೆ.

ಮಿತ ಪ್ರಮಾಣದ ಬೀರ್ ಸೇವನೆ ಹೃದಯದ ಕಾಯಿಲೆ ಕಡಿಮೆ ಆಗುವಂತೆ ಮಾಡುತ್ತದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಹೆಚ್ಚಾ ಗಿದ್ದು, ಫಿನಾಲಿಕ್ ಆಮ್ಲಗಳು ಅಪಾರ ಪ್ರಮಾಣ ದಲ್ಲಿ ಸಿಗುತ್ತವೆ. ಆಂಟಿ ಇನ್ಫ್ಲಮೆಂಟರಿ ಮತ್ತು ಆಂಟಿ ಆಕ್ಸಿ ಡೆಂಟ್ ಗುಣಲಕ್ಷಣಗಳು ಬಿಯರ್ ನಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದರಿಂದ ಹೃದಯಕ್ಕೆ ತುಂಬಾ ಒಳ್ಳೆ ಯದು.

ಅಧ್ಯಯನಗಳು ಹೇಳುವಂತೆ ಮಿತ ಪ್ರಮಾಣದಲ್ಲಿ ಬಿಯರ್ ಸೇವನೆ ಮಾಡುವುದರಿಂದ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ವೃದ್ಧಿಸುತ್ತದೆ. ಬಿಯರ್ ಸೇವನೆ ಮಾಡುವುದು ಕೇವಲ ದೇಹಕ್ಕೆ ಮಾತ್ರ ಒಳ್ಳೆಯದು ಎಂದು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಇದು ಮೆದುಳಿನ ಆರೋಗ್ಯವನ್ನು ಸಹ ಅಭಿ ವೃದ್ಧಿಪಡಿಸುತ್ತದೆ. ಮಾನಸಿಕ ಒತ್ತಡವನ್ನು ಮತ್ತು ಮಾನಸಿಕ ಖಿನ್ನತೆಯ ಮಟ್ಟವನ್ನು ನಿಯಂತ್ರಣಕ್ಕೆ ತಂದು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬಿಯರ್‌ನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲೊರಿಗಳು ಕಂಡು ಬರುತ್ತವೆ. ಇದರಿಂದಾಗಿ ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದ ಶಕ್ತಿಯು ಉಳಿಯುತ್ತದೆ. ಹಾಗಾಗಿ ಬಿಯರ್ ಕುಡಿದ ನಂತರ ನೀವು ಹೆಚ್ಚು ಚೈತನ್ಯವನ್ನು ಅನುಭವಿಸುವಂತೆ ಮಾಡುತ್ತದೆ. ಈ ವಿಷಯವು ನಿಮಗೆ ಆಶ್ಚರ್ಯವಾಗಬಹುದು, ಆದರೆ ಕೆಲವು ವಿಭಿನ್ನ ಸಂಶೋಧನೆಗಳಲ್ಲಿ ಬಿಯರ್ ಸೇವನೆಯು ಮಧುಮೇಹದ ಬೆಳವಣಿಗೆಯನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ. ಆದರೆ ಮೀತವಾದ ಸೇವನೆ ಇರಬೇಕು.

ಬಿಯರ್ ಮೂಳೆಗಳ ಆರೋಗ್ಯಕ್ಕೆ ಉತ್ತಮ ಟಾನಿಕ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಮೂಳೆಗಳನ್ನು ಬಲವಾಗಿಡಲು ಸಿಲಿಕಾನ್ ಅಗತ್ಯವಿದೆ ಮತ್ತು ಬಿಯರ್ ಉತ್ತಮ ಪ್ರಮಾಣದಲ್ಲಿ ಅದನ್ನು ಹೊಂದಿರುತ್ತದೆ. ಶೀತಲವಾಗಿರುವ ಬಿಯರ್ ನಿಮ್ಮ ಹಲ್ಲುಗಳಲ್ಲಿ ಕುಳಿಗಳು ಮತ್ತು ಕೊಳೆಯುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಪ್ರಭಾವವು ಹೆಚ್ಚು ಇಲ್ಲದಿದ್ದರೂ, ಸಾಮಾನ್ಯ ಬಿಯರ್ ಪ್ರಿಯರು ಖಂಡಿತವಾಗಿಯೂ ಈ ಪ್ರಯೋಜನವನ್ನು ಪಡೆಯುತ್ತಾರೆ.
ಅಂದರೆ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ದಿನ ಕೇವಲ 1 ಗ್ಲಾಸ್ ಬಿಯರ್ ಸೇವಿಸಿದರೆ ಅದು ಹೆಲ್ತ್ ಟಾನಿಕ್ ನಂತೆ ಕೆಲಸ ಮಾಡುತ್ತದೆ.

ಅಂದಹಾಗೆ ಒಂದು ವೇಳೆ ಇದುವರೆಗೂ ನೀವು ಬಿಯರ್ ಕುಡಿಯದೆ ಇದ್ದರೆ ಇನ್ನು ಮುಂದೆ ಯಾವುದೇ ಆಲೋಚನೆ ಮಾಡದೆ ಕುಡಿಯಬಹುದು. ಆದರೆ ಮಿತ ಪ್ರಮಾಣದಲ್ಲಿ ಸೇವನೆ ಮಾಡಿ. ಹೆಚ್ಚು ಸೇವನೆ ಮಾಡಿ ನಿಮ್ಮ ಲಿವರ್ ಮತ್ತು ಹಾರ್ಟ್ ಹಾಳು ಮಾಡಿ ಕೊಳ್ಳದಿರಿ. ಎಲ್ಲವೂ ಮಿತವಾಗಿರಲಿ.

ಇದನ್ನೂ ಓದಿ: Karjikayi :ಕರ್ಜಿಕಾಯಿಯಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆಯೇ ಪೈಲೆಟ್ ಗಳು? ಇಲ್ಲಿದೆ ಭಯಾನಕ ನಿಜ ಘಟನೆ

Leave A Reply

Your email address will not be published.