B Sriramulu : ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರಕಾರ! ಶೇ.15 ರಷ್ಟು ವೇತನ ಹೆಚ್ಚಳ!

B Sriramulu: ಕಳೆದ ಕೆಲ ದಿನಗಳ ಹಿಂದೆ ಸಾರಿಗೆ ನೌಕರರು ವೇತನ ಹೆಚ್ಚಳದ ಮುಷ್ಕರಕ್ಕೆ ಅಣಿಯಾಗಿದ್ದರು. ಈ ವೇಳೆ ಸಾರಿಗೆ ಸಚಿವರಾದ (Minister of Transport of Karnataka) ಬಿ.ಶ್ರೀರಾಮುಲು (B Sriramulu) ಅವರು ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವ ಭರವಸೆ ನೀಡಿದ್ದರು.

 

ಇದೀಗ ಸರ್ಕಾರ ಸಾರಿಗೆ ನೌಕರರಿಗೆ (KSRTC) ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಂದು (ಮಾ.16) ರಾಜ್ಯ ಸರ್ಕಾರ ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನ ಪರಿಷ್ಕರಣೆಯ ಬಗ್ಗೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡಲು ನಿರ್ಧರಿಸಿದೆ. ಸಾರಿಗೆ ನೌಕರರ ಬಹುದಿನಗಳ ಬೇಡಿಕೆಯನ್ನು ಇಂದು ಸರ್ಕಾರ ಪೂರೈಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ಅವರು ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಇಂದು ಈ ಬಗ್ಗೆ ಆದೇಶವಾಗಲಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸರ್ಕಾರವು ಶೇ.15% ವೇತನ‌ ಪರಿಷ್ಕರಣೆಯ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಸದ್ಯ ಈ ಬಗ್ಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದು, “ಸದಾ ಉತ್ತಮ ಜನಸೇವೆಗೆ ಹೆಸರು ಮಾಡಿರುವ ನಮ್ಮ ಸಿಬ್ಬಂದಿ, ತಾವು ನೀಡಿರುವ ಬಂದ್ ಕರೆ ಹಿಂಪಡೆದು ಪ್ರತಿದಿನದಂತೆ ಉತ್ತಮ ಸೇವೆಗಳನ್ನು ಯಾವುದೇ ವ್ಯತ್ಯಯ ಆಗದಂತೆ ಮುಂದುವರಿಸುತ್ತಾರೆ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ.

ಈ ಹಿಂದೆಯೂ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆಯಾಗುತ್ತಿತ್ತು. ಈ ಹಿಂದಿನ ವೇತನ‌ ಪರಿಷ್ಕರಣೆಗಳ ಪಟ್ಟಿ ಇಲ್ಲಿದೆ. 1996 ರಲ್ಲಿ 11% ವೇತನ‌ ಪರಿಷ್ಕರಣೆಯಾಗಿದ್ದು, 2000 ರಲ್ಲಿ 10%, 2004 ರಲ್ಲಿ 5% ಆಗಿದೆ. 2008 ರಲ್ಲಿ 6%, 2012 ರೂಂ ವೇಳೆಗೆ ಈ 10% , 2016 ರಲ್ಲಿ 12.50% ಆಗಿದ್ದು, ಇದು ಈ ಮೊದಲಿನ ವೇತನಕ್ಕೆ ಹೋಲಿಸಿದರೆ ಹೆಚ್ಚು ಇದ್ದು, ಈ ಬಾರಿ 15% ಸಾರಿಗೆ ನೌಕರರಿಗೆ ವೇತನ ಘೋಷಣೆಯಾಗಿದ್ದು, ಇದು ಈ ಮೊದಲಿಗಿಂತ ಹೆಚ್ಚಿನದ್ದಾಗಿದೆ. ಸದ್ಯ ಈ ನಿರ್ಧಾರದಿಂದ ವಾರ್ಷಿಕ 4 ರಸ್ತೆ ಸಾರಿಗೆ ನಿಗಮಗಳಿಗೆ ಅಂದಾಜು 550 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ ಎನ್ನಲಾಗಿದೆ.

Leave A Reply

Your email address will not be published.