Araga Jnanendra : ತುಳುನಾಡ ಗುಳಿಗ ದೈವಕ್ಕೆ ಅಪಮಾನ ಮಾಡಿದ ವಿಷಯ- ಸ್ಪಷ್ಟನೆ ನೀಡಿದ ಸಚಿವ ಆರಗ ಜ್ಞಾನೇಂದ್ರ!

Araga Jnanendra: ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ (Kantara) ಸಿನಿಮಾಗೆ ದಕ್ಕಲೆಬೇಕು. ತುಳುನಾಡಿನ ಆಚರಣೆ, ಸಂಸ್ಕೃತಿಯನ್ನು ಬಿಂಬಿಸುವ ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಪಾತ್ರವನ್ನು ರಿಷಬ್ ಶೆಟ್ಟಿ(Rishab Shetty) ಅವರು ತುಂಬಾ ಶ್ರದ್ಧೆಯಿಂದ ಜೊತೆಗೆ ನೋಡುಗರ ಮೈಮನ ರೋಮಾಂಚನಗೊಳಿಸುವಂತೆ ನಟಿಸಿದ್ದು ಗೊತ್ತಿರುವ ವಿಚಾರವೇ!! ಇದೀಗ, ದೈವದ(Daiva) ಕುರಿತಂತೆ ಸಚಿವರೊಬ್ಬರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಕಾಂತಾರ ಚಿತ್ರ ತೆರೆ ಕಂಡ ಬಳಿಕ ತುಳುನಾಡಿನ ಆರಾಧನಾ ಪದ್ಧತಿಯಾದ ಭೂತಾರಾಧನೆ/ದೈವಾರಾಧನೆಗೆ ಹೆಚ್ಚಿನ ಮಹತ್ವ ದೊರೆತಿದೆ ಎಂದರೂ ತಪ್ಪಾಗಲಾರದು. ಗಣ್ಯಾತಿ ಗಣ್ಯರು ಕೂಡ ದೈವದ ಕುರಿತು ಗೌರವ ಸೂಚಿಸಿದ್ದು, ಇತ್ತೀಚೆಗೆ ಕರಾವಳಿಗೆ ಆಗಮಿಸಿದ್ದ ಸಂದರ್ಭ ಅಮಿತ್ ಶಾ(Amit Shah) ಅವರು ಕೂಡ ವಿಶೇಷ ಗೌರವ ವಹಿಸಿದ್ದರು. ಈ ನಡುವೆ, ಕರಾವಳಿಯ ಜನಮನ ಗೆದ್ದ ‘ಶಿವದೂತೆ ಗುಳಿಗೆ’ (ಗುಳಿಗ) ತುಳು ನಾಟಕಕ್ಕೆ ಸಚಿವಆರಗ ಜ್ಞಾನೇಂದ್ರ(Araga Jnanendra)ಅವಮಾನ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ಜನರು ತಮ್ಮ ಅಸಮಾಧಾನ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸದ್ಯ, ಈ ವಿಚಾರದ ಬಗ್ಗೆ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದು, ‘ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡಿದ್ದು ನಿಜ ಆದರೆ, ತುಳು ಸಂಸ್ಕೃತಿಯನ್ನಾಗಲಿ, ದೈವಗಳನ್ನೂ ಲೇವಡಿ ಮಾಡಿಲ್ಲ ಎಂದು ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನದ ಬಳಕೆಯಿಂದ, ರಂಗಭೂಮಿಯ ಯಶಸ್ವಿ ಪ್ರದರ್ಶನವನ್ನು ಕಲಾ ರಸಿಕರಿಗೆ ಉಣ ಬಡಿಸುತ್ತಿರುವ ಕಲಾವಿದರು ಮತ್ತು ವಿಶೇಷವಾಗಿ ನಿರ್ದೇಶಕ, ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನವಿದೆ ಎಂದು ಸಚಿವರು ಹೇಳಿಕೊಂಡಿದ್ದಾರೆ. ನೆರೆಯ ತುಳು ನಾಡಿನಲ್ಲಿ, ಭಕ್ತಿಯಿಂದ ಪೂಜಿಸುವ( Belive) ನಂಬುವ ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಕುರಿತು ಮೆಚ್ಚುಗೆಯಿದ್ದು ಅಷ್ಟೆ ಅಲ್ಲದೆ ದೈವದ ಮೇಲೆ ವಿಶೇಷ ಗೌರವವನ್ನೂ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಾನು ಆಡಿದ ಮಾತಿಗೆ ರೆಕ್ಕೆ ಪುಕ್ಕ ಸೇರಿಸಿ, ಸಾಮಾಜಿಕ ಜಾಲತಾಣಗಳಲ್ಲಿ, ಅಪ ಪ್ರಚಾರ ನಡೆಸುತ್ತಿರುವ ಕಿಡಿ ಕೇಡಿಗಳ ಪ್ರಯತ್ನ ಯಶ ಕಾಣಲು ಸಾಧ್ಯವಿಲ್ಲ. ಜನರ ನಂಬಿಕೆಯನ್ನು ಕಳೆದುಕೊಂಡ, ತೀರ್ಥಹಳ್ಳಿಯ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ (Politics) ಬೇಳೆ ಬೇಯಿಸುವ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಿದ್ದಾರೆ. ‘ಶಿವದೂತೆ ಗುಳಿಗೆ’ ನಾಟಕದ ಪ್ರದರ್ಶನದ ಮೂಲಕ ತಮ್ಮ ಪಕ್ಷದ ಹೆಸರಿಗೆ ಮಸಿ ಬಳಿಯುವ ಯತ್ನವನ್ನೂ ಉಳಿದವರು ಮಾಡಿದ್ದು, ತಾನು ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ ಏನು ಹೇಳಿಕೆ ನೀಡಿಲ್ಲ ಎಂದು ಸಚಿವರಾದ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ

Leave A Reply

Your email address will not be published.