Anand Mahindra : ಆನಂದ್ ಮಹೀಂದ್ರ ತಳ್ಳುವ ಗಾಡಿಯಲ್ಲಿ ಹಣ್ಣು ಖರೀದಿ ಮಾಡಿ ಪೇಮೆಂಟ್ ಮಾಡಿದ ವಿಡಿಯೋ ವೈರಲ್!

Anand Mahindra: 2022-23ರ ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಿದ ಅನ್ವಯ, ಸೆಂಟ್ರಲ್ ಬ್ಯಾಂಕ್ (Central Bank) ಡಿಜಿಟಲ್ ಕರೆನ್ಸಿ (Digital Currency) ­ಅಥವಾ ಇ-ರೂಪಾಯಿ ಪರಿಕಲ್ಪನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank Of India) ಡಿಸೆಂಬರ್ 1 ರಂದು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

ವ್ಯಾಪಾರ-ವಹಿವಾಟನ್ನು ಸರಳಗೊಳಿಸುವ ಜೊತೆಗೆ ಸಮರ್ಥವಾಗಿ ಎದುರಿಸುವ ದೃಷ್ಟಿಯಿಂದ, ನೋಟುಗಳನ್ನು ಮುದ್ರಿಸುವ, ವಿತರಿಸುವ ಮತ್ತು ಸಂಗ್ರಹಿಸುವ ವೆಚ್ಚ ಉಳಿತಾಯ ಮಾಡಲು, ಜಾಗತಿಕ ಸ್ವೀಕಾರ, ಸುಲಭ ಬಳಕೆ, ವಂಚನೆಯಿಂದ ಪಾರು ಮಾಡುವ ದೆಸೆಯಲ್ಲಿ ಡಿಜಿಟಲ್ ರೂಪಾಯಿ ಮಹತ್ತರ ಪಾತ್ರ ವಹಿಸುತ್ತವೆ. ಇದೀಗ, ಕೆಲ ನಿರ್ದಿಷ್ಟ ಬ್ಯಾಂಕ್ ಮತ್ತು ಉದ್ಯಮ ವಲಯದಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಇ–ರುಪೀ (e-Rupee) ಹಂತ ಹಂತವಾಗಿ ಸಾರ್ವಜನಿಕವಾಗಿ ಚಲಾವಣೆಯಾಗುತ್ತಿದೆ.

ಆರ್​ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಇ-ರುಪಾಯಿ(e-Rupee) ಹೇಗೆ ಬಳಕೆ ಮಾಡುವುದು ಎಂಬ ಅನುಮಾನ , ಗೊಂದಲ ಹೆಚ್ಚಿನವರಿಗೆ ಇದೆ. ಸದ್ಯ, ಈ ಕುರಿತಂತೆ ಆನಂದ್ ಮಹೀಂದ್ರ ರವರು ಮಾಹಿತಿ ನೀಡುವ ನಿಟ್ಟಿನಲ್ಲಿ ಸ್ವತಃ ತಮ್ಮ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ರಸ್ತೆಬದಿಯ ವ್ಯಾಪಾರಿಯೊಬ್ಬರಿಗೆ ಆನಂದ್ ಮಹೀಂದ್ರಾ (Anand Mahindra)ಅವರು ಇ-ರುಪಾಯಿ ಪಾವತಿಸುತ್ತಿರುವ ದೃಶ್ಯ ವೈರಲ್ (Viral) ಆಗಿದೆ.

ಕ್ರಿಪ್ಟೋಕರೆನ್ಸಿಯ ಒಂದು ತಂತ್ರಜ್ಞಾನವನ್ನು ಆಧರಿಸಿ ಆರ್​ಬಿಐ ಡಿಜಿಟಲ್ ರುಪಾಯಿ ಕರೆನ್ಸಿ (CBDC- Central Bank Digital Currency) ಬಿಡುಗಡೆ ಮಾಡಿದೆ. ಇಂದು ಎಲ್ಲೇ ನೋಡಿದರೂ ಯುಪಿಐ (UPI) ಪಾವತಿ ಮಾಡೋದನ್ನು ಗಮನಿಸಿರಬಹುದು. ಆದರೆ, ಈ ನಡುವೆ ಆರ್​ಬಿಐನ(RBI) ಸಿಬಿಡಿಸಿCBDC- Central Bank Digital Currency) ಇ–ರುಪಾಯಿಯಲ್ಲಿ ಹೇಗಪ್ಪಾ ಬಳಕೆ ಮಾಡೋದು ಎಂಬ ಗೊಂದಲ ಹೆಚ್ಚಿನವರಿಗೆ ಕಾಡುತ್ತಿರುತ್ತದೆ. ಇದನ್ನು ಬಗೆಹರಿಸುವ ಕಾರ್ಯಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ (Anand Mahindra) ಮುಂದಾಗಿದ್ದು, ಇ–ರುಪಾಯಿಯಲ್ಲಿ ವಹಿವಾಟಿನ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರಾಯೋಗಿಕವಾಗಿ ಮಾಹಿತಿ ನೀಡಲು ಇದರ ಒಂದು ವಿಡಿಯೋವನ್ನು (Video)ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

“ಡಿಜಿಟಲ್ ಕರೆನ್ಸಿ ಇ–ರುಪೀ ಯ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್​ನ ಮಂಡಳಿ ಸಭೆಯಲ್ಲಿ ಮಾಹಿತಿ ಪಡೆದ ಆನಂದ್ ಮಹೀಂದ್ರರವರು ಆ ಸಭೆ ಬಳಿಕ ನಾನು ಬಚ್ಚೇ ಲಾಲ್ ಸಹಾನಿ ಎಂಬ ಹಣ್ಣು ಮಾರಾಟಗಾರನ ಬಳಿ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ರಸ್ತೆಬದಿಯ ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ವ್ಯಾಪಾರಿಯೊಬ್ಬರ (Fruit Vendor) ಬಳಿ ಆನಂದ್ ಮಹೀಂದ್ರಾ ರವರು ದಾಳಿಂಬೆ ಹಣ್ಣು ಕೊಂಡುಕೊಂಡಿದ್ದು, ಅದನ್ನು ಡಿಜಿಟಲ್ ರುಪಾಯಿಯ ಮೂಲಕ ಹಣ ಪಾವತಿಸಿದ ವಿಡಿಯೋವನ್ನ ಮಹೀಂದ್ರಾರವರು ಟ್ವಿಟ್ಟರ್ನಲ್ಲಿ( Twitter) ವಿಡಿಯೋ ಹಂಚಿಕೊಂಡು ಡಿಜಿಟಲ್ ಪಾವತಿ ಎಷ್ಟು ಸುಲಭ ಹಾಗೂ ಸರಳ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇ–ರುಪಾಯಿ ಎಂಬುದು ಡಿಜಿಟಲ್ ರೂಪದ ರೂಪಾಯಿ ಕರೆನ್ಸಿಯಾಗಿದ್ದು, ನಮ್ಮ ನೋಟುಗಳಿರುವ ಎಲ್ಲಾ ವಿಶೇಷತೆಗಳೂ ಇ–ಕರೆನ್ಸಿಗೂ ಅನ್ವಯವಾಗುತ್ತದೆ. ಭೌತಿಕ ರೂಪದ ನೋಟುಗಳ ಬದಲಾಗಿ ಎಲೆಕ್ಟ್ರಾನಿಕ್ ರೂಪದಲ್ಲಿ ಇ – ರೂಪಾಯಿ ಇರುತ್ತದೆ. ಇ–ರುಪಾಯಿಯಲ್ಲಿ ಉಳಿದ ಪೇಟಿಯಂ (Paytm),ಗೂಗಲ್ ಪೇ(Google Pay), ಕ್ಯೂಆರ್ ಕೋಡ್ ಸ್ಕ್ಯಾನ್ (QR Code Scan) ಮೊಬೈಲ್ ನಂಬರ್ ಹಾಕಿ ಪಾವತಿ ಮಾಡಬಹುದು.

 

ಇದನ್ನೂ ಓದಿ: Bizarre Names: ಇಲ್ಲಿದೆ ವಿಚಿತ್ರ ಹೆಸರುಗಳು! ಇವು ಮನುಷ್ಯರ ಹೆಸರು ಅಂತ ನೀವು ನಂಬೋಕೆ ಸಾಧ್ಯವಿಲ್ಲ!

 

ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರ ಅವರು ಬಚ್ಚೇ ಲಾಲ್ ಸಹಾನಿಯಿಂದ ದಾಳಿಂಬೆ ಖರೀದಿ ಮಾಡಿದ್ದು, ಹಣ್ಣು ಅಂಗಡಿಯಲ್ಲಿ ಬೇರೆ ಪೇಟಿಎಂ, ಫೋನ್​ಪೇ ಇತ್ಯಾದಿ ಯುಪಿಐ ಕ್ಯೂಆರ್ ಕೋಡ್ ಹಾಕುವ ರೀತಿಯಲ್ಲಿ ಇ–ರುಪಾಯಿಗೂ ಕ್ಯೂಆರ್ ಬೋರ್ಡ್ ಅನ್ನು ವ್ಯಾಪಾರಿ ಇಟ್ಟಿದ್ದರು. ಯುಪಿಐ ವಹಿವಾಟು ಮಾಡುವ ರೀತಿಯೇ ಇದನ್ನೂ ಕೂಡ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದಾಗಿದೆ. ಆನಂದ್ ಮಹೀಂದ್ರ ಅವರು ಕೂಡ ಇದೇ ವಿಧಾನವನ್ನ ಅನುಕರಣೆ ಮಾಡಿ ಇ- ರುಪಾಯಿಯಲ್ಲಿ ಪಾವತಿ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಆ ಮೂಲಕ ಜನತೆಗೆ ಇ-ರುಪಾಯಿ(e-Rupee)ಬಗ್ಗೆ ಅರಿವು ಮೂಡಿಸುವ ಕೆಲಸವನ್ನ ಮಹೀಂದ್ರಾ ರವರು ಮಾಡಿದ್ದಾರೆ.

ಇ-ರುಪಾಯಿ(e-Rupee)ಯಲ್ಲಿ ಒಬ್ಬ ವ್ಯಕ್ತಿಯ ವ್ಯಾಲಟ್​ನಿಂದ ಇನ್ನೊಬ್ಬ ವ್ಯಕ್ತಿಯ ವ್ಯಾಲಟ್​ಗೆ ನೇರವಾಗಿ ಟ್ರಾನ್ಫರ್ (Transfer) ಮಾಡಬಹುದಾಗಿದ್ದು, ಬ್ಯಾಂಕ್ ಮೂಲಕ ಈ ವರ್ಗಾವಣೆ ಪ್ರಕ್ರಿಯೆ ನಡೆಯುವುದಲ್ಲ ಬದಲಿಗೆ ಒಂದು ವೇಳೆ ನಮ್ಮ ಕೈಯಲ್ಲಿ ಹಣವಿದ್ದರೆ ಹೇಗೆ ನಾವು ಅಂಗಡಿಯವರಿಗೆ ಪಾವತಿ ಮಾಡುತ್ತೇವೋ ಅದೇ ರೀತಿಯ ವಹಿವಾಟು ಇದಾಗಿದೆ.

Leave A Reply

Your email address will not be published.