House Fly : ನಿಮಗಿದು ಗೊತ್ತೇ? ನೊಣಗಳು ಕಾಲು ಯಾಕೆ ಉಜ್ಜುವುದೆಂದು? ಆಸಕ್ತಿಕರ ಮ್ಯಾಟರ್‌ ನಿಮಗಾಗಿ!!!

House Fly: ಈ ಜಗವೇ ಒಂದು ವಿಸ್ಮಯ ನಗರಿ. ಈ ಪೃಥ್ವಿಯಲ್ಲಿ( Earth) ಜೀವಿಸುವ ಪ್ರತಿ ಜೀವರಾಶಿಯು ಅದರದ್ದೇ ಆದ ವಿಶೇಷತೆಯನ್ನು ಒಳಗೊಂಡಿರುತ್ತದೆ. ಆದರೆ, ಎಷ್ಟೋ ಬಾರಿ ನಮ್ಮ ಕಣ್ಣ ಮುಂದೆಯೇ ನಡೆಯುವ ಸಣ್ಣ ಪುಟ್ಟ ವಿದ್ಯಮಾನಗಳ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದೆ ಇರುವುದರಿಂದ ಎಷ್ಟೋ ವಿಷಯಗಳು ನಮ್ಮ ಅರಿವಿಗೆ ಬರುವುದಿಲ್ಲ.

 

ಸೆಕೆ ಹೆಚ್ಚಾದಾಗ ನಮ್ಮ ಮನೆ ಸುತ್ತಮುತ್ತ ಕಂಡುಬರುವ ನೊಣಗಳನ್ನು ನೀವು ಗಮನಿಸಿರಬಹುದು. ಸೆಕೆಯ ಜೊತೆಗೆ ಈ ನೋಣಗಳದ್ದು ಬೇರೆ ಕಾಟ!! ಎಂದು ಗೊಣಗಿರಬಹುದು. ಆದರೆ, ಇವುಗಳ ಕುರಿತ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ನಿಮಗೆ ತಿಳಿದಿರಲಿಕ್ಕಿಲ್ಲ. ನಿಮ್ಮ ಮನೆಯ ಮುಂದೆ ನೊಣವನ್ನ ಸೂಕ್ಷ್ಮವಾಗಿ ಗಮನಿಸಿದರೆ, ಅವು ಆಗಾಗ ತಮ್ಮ ಕಾಲುಗಳನ್ನು ಉಜ್ಜುವುದನ್ನು ಗಮನಿಸಿರುತ್ತೀರಿ! ಆದರೆ, ನೊಣ(House Fly) ಹೀಗೆ ಮಾಡಲು ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೇವೆಯೇ??ಇಲ್ಲ ಎಂದಾದರೆ ಈ ಕುರಿತ ಇಂಟರೆಸ್ಟಿಂಗ್ (Intresting) ವಿಚಾರ ನಾವು ಹೇಳ್ತೀವಿ ಕೇಳಿ!

ನಾವೆಲ್ಲ ಸಂವಹನ ಮಾಡುವ ವಿಶೇಷ ಸಾಮರ್ಥ್ಯ ಹೊಂದಿದ್ದೇವೆ. ಆದರೆ, ಪ್ರಾಣಿ, ಪಕ್ಷಿಗಳು, ನೊಣಗಳು ಹೇಗೆ ತಮ್ಮ ಗುಂಪಿನೊಂದಿಗೆ ವಿಚಾರ ಸಂವಹನ ಮಾಡುತ್ತವೆ ಎಂಬ ಕುತೂಹಲ ಸಹಜವಾಗಿ ಎಲ್ಲರಿಗೂ ಮೂಡುತ್ತದೆ. ಪ್ರಾಣಿ (Animals), ಪಕ್ಷಿಗಳು (Birds) ಸಂವಹನ ಮಾಡುವ ವೈಖರಿಯೇ ವಿಭಿನ್ನ. ನೊಣಗಳು ತಮ್ಮ ಕಾಲುಗಳನ್ನೂ ಉಜ್ಜುವುದು ಕೂಡ ಸಂವಹನದ ಒಂದು ಭಾಗ ಎಂದರೆ ಅಚ್ಚರಿಯಾಗುತ್ತದೆ. ಆದರೆ, ನೊಣಗಳು ತಮ್ಮ ಕಾಲುಗಳನ್ನು ಉಜ್ಜುವುದಕ್ಕೆ ಅನೇಕ ಕಾರಣಗಳಿವೆ.

ಯಾವುದೇ ನೊಣವಾದರು ಸರಿ, ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಆಹಾರವನ್ನು( Food)ನೋಡಿದ ಸಂದರ್ಭದಲ್ಲಿ ಈ ವಿಚಾರವನ್ನು ಇನ್ನುಳಿದ ನೊಣಗಳಿಗೆ ತಿಳಿಸುವ ನಿಟ್ಟಿನಲ್ಲಿ ತಮ್ಮ ಕಾಲುಗಳನ್ನು ಉಜ್ಜುತ್ತವಂತೆ. ಇದರಿಂದಾಗಿ ಈ ಸಂಕೇತವು ಇತರ ನೊಣಗಳಿಗೆ ರವಾನೆಯಾಗುತ್ತದೆ. ಎಲ್ಲಿಯೋ ಆಹಾರವಿದೆ ಎಂದು ಈ ಕಂಪನಗಳು ಬಂದೊಡನೆ ಉಳಿದ ನೊಣಗಳಿಗೆ ತಿಳಿಯುತ್ತದೆ. ಹೀಗಾಗಿ, ಉಳಿದ ನೊಣಗಳು ಆಹಾರವನ್ನು ಅರಸುತ್ತಾ ಅಲ್ಲಿಗೆ ಹೊರಡುತ್ತವಂತೆ. ಅರೇ, ಇದು ಹೇಗೆ ಸಾಧ್ಯ? ಎಂದು ನಿಮಗೆ ಅಚ್ಚರಿಯಾಗಬಹುದು.

ನೊಣಗಳು ತಮ್ಮ ಮುಂಭಾಗ ಮತ್ತು ಹಿಂಭಾಗದ ಕಾಲುಗಳನ್ನು ಉಜ್ಜುತ್ತ ಇರೋದನ್ನು ಎಲ್ಲರೂ ಗಮನಿಸಿರಬಹುದು. ತಾವಿದ್ದ ಸ್ಥಳದಿಂದ ಹೊರಡುವ ಮುನ್ನ ನೊಣಗಳು ತಮ್ಮ ಕಾಲುಗಳನ್ನು ಉಜ್ಜುತ್ತವೆ. ನೊಣಗಳು ಇನ್ನುಳಿದ ನೊಣಗಳಿಗೆ ಮಾಹಿತಿ ರವಾನೆ ಮಾಡಲು ಕಾಲುಗಳನ್ನು ಉಜ್ಜುತ್ತವೆ. ನೊಣಗಳ ಕಾಲುಗಳ ಮೇಲೆ ಚಿಕ್ಕ ಕೂದಲನ್ನು ಹೊಂದಿದ್ದು, ಇವು ಸೂಕ್ಷ್ಮಗ್ರಾಹಿಗಳಾಗಿರುವ ಹಿನ್ನೆಲೆ ನೊಣಗಳು ಕಾಲನ್ನು ಉಜ್ಜಿದಾಗ ಕೂದಲಿಗೆ ಸ್ಪರ್ಶವಾಗಿ ಕಂಪನ(Tremor) ಉಂಟಾಗಿ, ಅಲೆಗಳ( Wave) ರೂಪದಲ್ಲಿ ಕಂಪನ ಗಾಳಿಯಲ್ಲಿ (Air) ರವಾನೆಯಾಗುತ್ತದೆ. ಇದರಿಂದ ನೊಣ ಕಳುಹಿಸಿದ ಮಾಹಿತಿ ಇನ್ನುಳಿದ ನೊಣಗಳಿಗೆ ತಲುಪಿ ಕಂಪನ ಎಲ್ಲಿಂದ ಬರುತ್ತಿದೆ ಎಂದು ಗ್ರಹಿಸಿಕೊಂಡು ನೊಣಗಳು ಯಾವ ನಿರ್ದಿಷ್ಟ ಸ್ಥಳದಲ್ಲಿ ನೊಣವಿದೆ ಎಂದು ಕಂಪನದ ಮೂಲಕ ನೊಣಗಳು ತಿಳಿದುಕೊಳ್ಳುತ್ತದಂತೆ.

ಅಷ್ಟೆ ಅಲ್ಲದೇ, ನೊಣಗಳು ತಮ್ಮ ಕಾಲುಗಳ ಮೂಲಕ ರುಚಿಯನ್ನು (Taste)ಕಂಡುಕೊಳ್ಳುತ್ತದೆ. ಅವುಗಳ ಕಾಲುಗಳು ಕೀಮೋರೆಸೆಪ್ಟರ್‌ಗಳನ್ನು ಹೊಂದಿದ್ದು, ವಿವಿಧ ರಾಸಾಯನಿಕಗಳಿಗೆ ಪ್ರತಿಕ್ರಯಿಸಲು ನೆರವಾಗುತ್ತದೆ. ತಮ್ಮ ಕಾಲುಗಳನ್ನು ಉಜ್ಜುವ ಮೂಲಕ, ನೊಣಗಳು ತಾವು ಇಳಿದ ಪ್ರದೇಶದಲ್ಲಿನ ರಾಸಾಯನಿಕಗಳ ರುಚಿ ನೋಡಿ ಹೇಗಿದೆ ಎಂದು ತಿಳಿಯುವುದು ಮಾತ್ರವಲ್ಲ ತಮ್ಮ ಸುತ್ತಮುತ್ತಲಿನ ಬಗ್ಗೆ ಸುಲಭವಾಗಿ ತಿಳಿಯುತ್ತವೆ.

ನೊಣಗಳು ಸಂವಹನದ ಹೊರತಾಗಿ ಬಹುಮುಖ್ಯವಾಗಿ ಕಾಲುಗಳನ್ನ ಉಜ್ಜಲು ಮುಖ್ಯ ಕಾರಣ ಕೇಳಿದರೆ ಅಚ್ಚರಿ ಆಗಬಹುದು. ಹೌದು!! ಸ್ವಚ್ಚತೆಯ (Cleaning) ದೃಷ್ಟಿಯಿಂದ ನೊಣಗಳು ಕಾಲನ್ನು ಉಜ್ಜುತ್ತವಂತೆ. ಎಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಆಹಾರ ಪದಾರ್ಥವಿರಲಿ ನೊಣಗಳು ಇಳಿಯುವುದನ್ನ ನೋಡಿರಬಹುದು.ಹೀಗೆ ಇಳಿಯುವ ಸಂದರ್ಭದಲ್ಲಿ ಬ್ಯಾಕ್ಟೀರಿಯಾ ಕಾಲುಗಳಿಗೆ ಅಂಟಿಕೊಳ್ಳುತ್ತವಂತೆ. ಪಾದಗಳಿಗೆ ಅಂಟಿಕೊಂಡಿರುವ ಕೊಳೆ, ಕಸ ಮತ್ತು ಬ್ಯಾಕ್ಟೀರಿಯಾವನ್ನು ತೊಡೆದುಹಾಕುವ ನಿಟ್ಟಿನಲ್ಲಿ ನೊಣಗಳು ತಮ್ಮ ಕಾಲುಗಳನ್ನು ಉಜ್ಜುತ್ತವೆ.

 

ಇದನ್ನೂ ಓದಿ: Flipkart : ಕೇವಲ 1ರೂ.ಪಾವತಿಸಿ ಫ್ರಿಡ್ಜ್‌, ಎಸಿ ಮನೆಗೆ ತನ್ನಿ!

Leave A Reply

Your email address will not be published.