Salt : ತಿನ್ನುವ ಆಹಾರಕ್ಕೆ ಅಗತ್ಯವಾದ ಉಪ್ಪಿನಿಂದಲೂ ಇದೆ ಆರೋಗ್ಯಕ್ಕೆ ಹಾನಿ!

Salt :ಆರೋಗ್ಯಕರ ಜೀವನ ಎಂದರೆ ಉತ್ತಮ ಆರೋಗ್ಯ ಮತ್ತು ಒಳ್ಳೆಯ ಮನಸ್ಸು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸುವುದು ಮುಖ್ಯ. ಆರೋಗ್ಯಕರ ಜೀವನಶೈಲಿ ರೋಗಗಳನ್ನು ತಡೆಯುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಒಳ್ಳೆಯ ಅಭ್ಯಾಸಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ.

 

ಇಂತಹ ಒಂದು ಅಗತ್ಯ ಆಹಾರಗಳಲ್ಲಿ ಉಪ್ಪು (Salt) ಕೂಡ ಒಂದು. ಉಪ್ಪು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಆದ್ರೆ, ಈ ಅತ್ಯಗತ್ಯ ವಸ್ತುವಿನ ಅತಿಯಾದ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಮಾರಕವಾಗಬಹುದು. ಹೌದು. ಉಪ್ಪಿನ ಅತಿಯಾದ ಸೇವನೆಯು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಉಪ್ಪು / ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನ ಬಹಳ ಸುಲಭ ಮತ್ತು ಅಗ್ಗದ ರೀತಿಯಲ್ಲಿ ತಡೆಯಬಹುದು. ಹೀಗಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಂದ ಬಳಲುತ್ತಿದ್ದರೆ, ಉಪ್ಪಿನ ಸೇವನೆಯನ್ನ ಆದಷ್ಟು ಬೇಗ ಕಡಿಮೆ ಮಾಡಬೇಕು. ಉಪ್ಪಿನ ಸೇವನೆ ಕಡಿಮೆ ಮಾಡಲು WHO ಕೆಲವೊಂದು ಸಲಹೆಗಳನ್ನು ನೀಡಿದ್ದು,ಅವು ಹೀಗಿದೆ ನೋಡಿ.

•ನಿಮ್ಮ ಉಪ್ಪಿನ ಸೇವನೆಯ ಬಗ್ಗೆ ಸದಾ ಕಾಳಜಿ ವಹಿಸಿ.
•ಆಹಾರ ಸರಬರಾಜಿನಲ್ಲಿ ಬಳಸುವ ಉಪ್ಪಿನ ಬಗ್ಗೆಯೂ ಗ್ರಾಹಕರು ಸಂಪೂರ್ಣವಾಗಿ ತಿಳಿದಿರಬೇಕು.
•ಉಪ್ಪಿನ ಕನಿಷ್ಠ ಬಳಕೆ ಇರುವ ರೀತಿಯಲ್ಲಿ ಆಹಾರವನ್ನ ತಯಾರಿಸಿ. ನಿಮ್ಮ ಆಹಾರದಲ್ಲಿ ಉಪ್ಪು / ಸೋಡಿಯಂ ಪ್ರಮಾಣವನ್ನ ಕಡಿಮೆ ಮಾಡಲು ಗುರಿಗಳನ್ನ ನಿಗದಿಪಡಿಸಿ.
•ಶಾಲೆಗಳು, ಆಸ್ಪತ್ರೆಗಳು, ಕಚೇರಿಗಳು ಮತ್ತು ನರ್ಸಿಂಗ್ ಹೋಂಗಳಂತಹ ಸಾರ್ವಜನಿಕ ಸಂಸ್ಥೆಗಳಲ್ಲಿ ಕಡಿಮೆ ಸೋಡಿಯಂ ಆಯ್ಕೆಗಳನ್ನ ಒದಗಿಸಬೇಕು. ಇದರಿಂದ ಉಪ್ಪು ಯಾರಿಗೂ ವಿಷವಾಗುವುದಿಲ್ಲ.
•ಜನರು ತಮ್ಮ ಉಪ್ಪು ತಿನ್ನುವ ಅಭ್ಯಾಸವನ್ನು ಬದಲಾಯಿಸಲು ಸಹಾಯ ಮಾಡಲು ಸಮೂಹ ಮಾಧ್ಯಮ ಅಭಿಯಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನ ನಡೆಸಬೇಕಾಗುತ್ತದೆ.
•ಆಹಾರ ಪ್ಯಾಕೆಟ್’ನ ಮುಂಭಾಗದಲ್ಲಿ ಸೋಡಿಯಂ ಪ್ರಮಾಣದ ಬಗ್ಗೆ ಸ್ಪಷ್ಟ ಪದಗಳಲ್ಲಿ ಬರೆಯಬೇಕು, ಇದನ್ನ ಗ್ರಾಹಕರು ಸುಲಭವಾಗಿ ಓದಬಹುದು ಮತ್ತು ಅರ್ಥಮಾಡಿಕೊಳ್ಳಬಹುದು.

Leave A Reply

Your email address will not be published.