Okaya Ev: ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಿದರೆ ಥೈಲ್ಯಾಂಡ್ ಟ್ರಿಪ್ ಫ್ರೀ! ಹೇಗೆ ಅಂತೀರಾ?
Okaya EV scooter: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ (electric ) ದ್ವಿಚಕ್ರ ವಾಹನಗಳ ಹವಾ ಜೋರಾಗಿದ್ದು, ಇದೀಗ ಎಲೆಕ್ಟ್ರಿಕ್ ವಾಹನಗಳನ್ನು ಕೊಂಡುಕೊಳ್ಳುವವರಿಗೆ ಭರ್ಜರಿ ಆಫರ್ ನೀಡಲಾಗಿದೆ. ಹೌದು, ಎಲೆಕ್ಟ್ರಿಕ್ ವಾಹನ ತಯಾರಕ Okaya EV ತನ್ನ ಖರೀದಿದಾರರಿಗೆ ಬಂಪರ್ ಆಫರ್ ನೀಡಿದೆ.
Okaya EV ತನ್ನ ಪೋರ್ಟ್ಫೋಲಿಯೊದಲ್ಲಿ ಕಡಿಮೆ-ವೇಗ ಮತ್ತು ಹೆಚ್ಚಿನ-ವೇಗದ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳಲ್ಲಿ ಫಾಸ್ಟ್ ಎಫ್4, ಫಾಸ್ಟ್ ಎಫ್3, ಫಾಸ್ಟ್ ಎಫ್2ಎಫ್, ಕ್ಲಾಸ್ಐಕ್ಯೂ+, ಫ್ರೀಡಮ್ ಮತ್ತು ಫಾಸ್ಟ್ ಎಫ್2ಬಿ ನಂತಹ ಮಾದರಿಗಳು ಸೇರಿವೆ.
ನೀವು Okaya EV ಎಲೆಕ್ಟ್ರಿಕ್ ಸ್ಕೂಟರ್ (electric scooter ) ಅನ್ನು 6 ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಇದು ಮೆಟಾಲಿಕ್ ಬ್ಲಾಕ್, ಮೆಟಾಲಿಕ್ ಸಯಾನ್, ಮ್ಯಾಟ್ ಗ್ರೀನ್, ಮೆಟಾಲಿಕ್ ಗ್ರೇ, ಮೆಟಾಲಿಕ್ ಸಿಲ್ವರ್ ಮತ್ತು ಮೆಟಾಲಿಕ್ ವೈಟ್ ಆಯ್ಕೆಗಳನ್ನು ಹೊಂದಿದೆ. ನೀವು ದೇಶಾದ್ಯಂತ 550 Okaya ಎಲೆಕ್ಟ್ರಿಕ್ ವೆಹಿಕಲ್ ಔಟ್ಲೆಟ್ಗಳಿಂದ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಖರೀದಿಸಬಹುದಾಗಿದೆ.
ಸದ್ಯ ಎಲೆಕ್ಟ್ರಿಕ್ ವಾಹನ ತಯಾರಕ Okaya EV ಈ ಕೊಡುಗೆಯ ಅಡಿಯಲ್ಲಿ, ಒಕಾಯಾ ಎಲೆಕ್ಟ್ರಿಕ್ ಸ್ಕೂಟರ್ಗಳ ಖರೀದಿದಾರರು ರೂ. 5,000 ವರೆಗಿನ ಕ್ಯಾಶ್ಬ್ಯಾಕ್ ಸೇರಿದಂತೆ ಇತರೆ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಅಂದರೆ ಆಯ್ದ ಗ್ರಾಹಕರು ಥೈಲ್ಯಾಂಡ್ಗೆ ಮೂರು ರಾತ್ರಿ, ನಾಲ್ಕು ದಿನಗಳ ಪ್ರವಾಸವನ್ನು ಗೆಲ್ಲುವ ಅವಕಾಶವನ್ನು ಸಹ ಪಡೆಯುತ್ತಾರೆ.
ಸದ್ಯ ಕಂಪನಿಯ ಈ ಕಾರ್ನಿವಲ್ ಕೊಡುಗೆಯು ಬ್ರ್ಯಾಂಡ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಅನ್ವಯಿಸುತ್ತದೆ ಮತ್ತು ಮಾರ್ಚ್ 31 ರವರೆಗೆ ಮಾನ್ಯವಾಗಿರುತ್ತದೆ.
ಮುಖ್ಯವಾಗಿ ಗ್ರಾಹಕರು ರಾಷ್ಟ್ರವ್ಯಾಪಿ ಬ್ರ್ಯಾಂಡ್ನ ಯಾವುದೇ ಡೀಲರ್ಗಳಿಂದ Okaya ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಮೂಲಕ ಕಾರ್ನೀವಲ್ನಲ್ಲಿ ಭಾಗವಹಿಸಬಹುದು. ಖರೀದಿ ಪೂರ್ಣಗೊಂಡ ನಂತರ, ಖರೀದಿದಾರರು ನೋಂದಾಯಿತ ಫೋನ್ ಸಂಖ್ಯೆಯಲ್ಲಿ ಲಿಂಕ್ ಅನ್ನು ಸ್ವೀಕರಿಸುತ್ತಾರೆ. ಅವರು ಈ ಲಿಂಕ್ನಲ್ಲಿ ಅಗತ್ಯವಿರುವ ಮಾಹಿತಿಯನ್ನು ಸಲ್ಲಿಸಬೇಕು. ಇದರ ನಂತರ ಗ್ರಾಹಕರು ಸ್ಕ್ರ್ಯಾಚ್ ಕಾರ್ಡ್ ಅನ್ನು ಪಡೆಯುತ್ತಾರೆ, ಅದನ್ನು ಸ್ಕ್ರ್ಯಾಚ್ ಮಾಡಿದ ನಂತರ ಅವರು ಗೆದ್ದ ಬಹುಮಾನವನ್ನು ಪಡೆದುಕೊಳ್ಳುತ್ತಾರೆ .