Macadamia : ಈ ಬೆಳೆಗೆ ಭಾರತದಲ್ಲಿ ವಿಶೇಷ ಬೇಡಿಕೆ! ಏನಿದು ? ಕಂಪ್ಲೀಟ್‌ ವಿವರ ಇಲ್ಲಿದೆ

Macadamia :  ವಿದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಮೆಕಾಡೊಮಿಯ ಬೆಳೆಯನ್ನು ಶಿವಮೊಗ್ಗ ತಾಲೂಕಿನ ರೈತರು ಬೆಳೆದು ಕ್ರಾಂತಿ ಮಾಡಿದ್ದಾರೆ. ಸದ್ಯ ಇದು ಎಲ್ಲೆಡೆ ಪರಿಚಯವಾಗುತ್ತಿದ್ದು, ಇದರ ಮೂಲಕ ನೀವು ಅಡಿಕೆ ಬೆಳೆಗಿಂತಲೂ ದುಪ್ಪಟ್ಟು ಲಾಭ ಗಳಿಸಬಹುದು. ಈ ಬೆಳೆಯೇ  ಆಸ್ಟ್ರೇಲಿಯನ್ ಮೂಲದ ‘ಮೆಕಡೇಮಿಯಾ’. ಒಂದು ಎಕರೆ ಪ್ರದೇಶದಲ್ಲಿ ಇದನ್ನು ಕೃಷಿ ಮಾಡಿ ವರ್ಷಕ್ಕೆ ಕೋಟಿ ಕೋಟಿ ಆದಾಯ ಗಳಿಸಬಹುದು. ಇದು ಬೀಜ ಮತ್ತು ಸಸಿ ಎರಡರಿಂದಲೂ ಆದಾಯ ತಂದುಕೊಡುತ್ತದೆ.

 

ಈ ‘ಮೆಕಡೇಮಿಯಾ’ ಬೆಳೆಯನ್ನು ಬೆಳೆಯಲು ಅಡಿಕೆ ಬೆಳೆಗಿಂತ ಕಡಿಮೆ ಖರ್ಚು ತಗುಲುತ್ತದೆ. ಹಣವನ್ನು ವ್ಯಯಿಸುವುದನ್ನು ಕಡಿಮೆ ಮಾಡುವುದರೊಂದಿಗೆ ಇದರ ಆರೈಕೆ ಮಾಡಲು ಅಂದರೆ ನಿರ್ವಹಣೆ ಮಾಡಲು ಕಡಿಮೆ  ಕೆಲಸಗಾರರು ಸಾಕಾಗುತ್ತದೆ. ಮೆಕಾಡಾಮಿಯಾ ಕಾಯಿಗಳ ಉತ್ಪಾದನೆಯು ಮಕಾಡಾಮಿಯಾ ಮರವನ್ನು ಬೆಳೆದ ನಂತರ ಐದು ವರ್ಷಗಳು ಬೇಕಾಗುತ್ತವೆ. ಅದಕ್ಕಾಗಿಯೇ ಬೀಜಗಳು ಆಮದು ಮಾಡಿಕೊಳ್ಳಲು ತುಂಬಾ ದುಬಾರಿಯಾಗಲಿದೆ. ಮಕಾಡಾಮಿಯಾ ಮರಗಳನ್ನು ಹೊಂದಿರುವ ಇತರ ಉಷ್ಣವಲಯದ ಹವಾಮಾನಗಳಲ್ಲಿ ನ್ಯೂಜಿಲೆಂಡ್, ಕೀನ್ಯಾ ಮತ್ತು ಇಂಡೋನೇಷ್ಯಾ ಸೇರಿವೆ.

ಮೆಕಾಡೊಮಿಯ (Macadamia) ಅಡಿಕೆಯ ರೀತಿಯ ಸವಿಯಾದ ಪದಾರ್ಥವಾಗಿದ್ದು, ವಿಶಿಷ್ಟವಾದ ಪರಿಮಳವನ್ನು ಮತ್ತು ಹಲವಾರು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿವೆ. ಮೆಕಾಡೊಮಿಯ ಬೀಜಗಳ ಕೊಬ್ಬಿನಂಶವು ಮರದ ಅಡಿಕೆಗಿಂತ ಹೆಚ್ಚಿರುತ್ತದೆ. ಕಚ್ಚಾ ಮೆಕಾಡೊಮಿಯ ಬೀಜಗಳನ್ನು ತೆರೆದು ಮಾರಾಟ ಮಾಡಲಾಗುತ್ತದೆ. ಆದರೆ ಹುರಿದ ಮತ್ತು ಉಪ್ಪುಸಹಿತ ಬೀಜಗಳನ್ನು ಪ್ಯಾಕೆಟ್ಗಳಲ್ಲಿ ನೀಡಲಾಗುತ್ತದೆ. ಇತರ ಬೀಜಗಳಿಗೆ ಹೋಲಿಸಿದರೆ ಮೆಕಾಡೊಮಿಯ ಬೀಜಗಳು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ.

 

ಭಾರತದ ಮಾರುಕಟ್ಟೆಯಲ್ಲಿ  ಮೆಕಾಡೊಮಿಯ ಬೆಳೆಗೆ ಹೆಚ್ಚು ಬೇಡಿಕೆ ಇದ್ದು, ಆದರೆ ಇಲ್ಲಿ ಈ ಬೆಳೆ ಆರಂಭಿಕ ಹಂತದಲ್ಲಿ ಇರುವುದರಿಂದ ಅಗತ್ಯವಾದಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತ ಸರ್ಕಾರವು ನಮ್ಮಲ್ಲಿ ಮೆಕಾಡೊಮಿಯಾವನ್ನು ಹೆಚ್ಚು ಉತ್ಪಾದಿಸುವ ಸಲುವಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಈ ಬೆಳೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ.

 

ಲಾಭದಾಯಕ ಬೆಳೆಯಾಗಿರುವ ಮೆಕಾಡೆಮಿಯ ಕೃಷಿಯನ್ನು ಪ್ರತಿಯೊಬ್ಬ ರೈತರು ಮಾಡಿ ಉತ್ತಮ ಆದಾಯ ಗಳಿಸಬಹುದು. ಇದನ್ನು ಬೇರೆ ಬೆಳೆಗಳ ಜೊತೆ ಅಂತರ ಬೆಳೆಯಾಗಿ ಬೆಳೆದರೆ ರೈತರಿಗೆ ಆದಾಯ ಹೆಚ್ಚುತ್ತದೆ. ಆದರೆ ಈ ಕೃಷಿಗೆ ಭೂಮಿ ಸಮತಟ್ಟಾಗಿರಬೇಕು. ಮಣ್ಣು ಕೆಂಪು ಮತ್ತು ಮರಳು ಮಿಶ್ರಿತವಾಗಿರಬೇಕು. ಮೆಕಾಡೊಮಿಯ ವಿಚಾರಕ್ಕೆ ಬಂದರೆ ರೈತರಿಗೆ ಇದರಿಂದ ಬರುವ ಆದಾಯದ ಮೊತ್ತ ಇತರೆ ಬೆಳೆಗಳಿಗಿಂತ ಹೆಚ್ಚಾಗಿರುತ್ತದೆ. ಯಾಕೆಂದರೆ ಇದರಲ್ಲಿ ಸಸಿ ಮತ್ತು ಬೀಜ 2ರಿಂದಲೂ ಆದಾಯ ಪಡೆಯಬಹುದು.

 

ವಿದೇಶದಲ್ಲಿ ಪ್ರಸಿದ್ಧವಾದ ಮೆಕಾಡೊಮಿಯ ಬೆಳೆ ಈಗ ಮಲೆನಾಡಿನಲ್ಲಿ ತನ್ನ ಕಂಪು ಬೀರಲು ರೆಡಿಯಾಗುತ್ತಿದೆ.ಆಸ್ಟ್ರೇಲಿಯಾದಿಂದ ಮಲೆನಾಡಿಗೆ ಈ ಬೆಳೆಯ ಪರಿಮಳ ಊರೆಲ್ಲ ಹಬ್ಬುತ್ತಿದೆ. ಮೆಕಾಡೊಮಿಯ ಒಂದು ಸಿಹಿ ಸ್ವಾದವನ್ನ ಹೊಂದಿರುವ ಕಾಯಿಯಾಗಿದ್ದು, ಕೋಕೊ (Cacao tree)ಸೇರಿದಂತೆ ಬಾದಾಮಿ (Almond) ಜೊತೆಗೆ ಗೇರು ಬೀಜದ(Cashew) ರೀತಿಯ ಸಿಹಿ ಅಂಶವನ್ನು ಒಳಗೊಂಡಿದೆ. ಇದನ್ನು ಸಂಸ್ಕರಿಸಿದ ಬಳಿಕ ಮಾರಾಟ ಮಾಡಬಹುದಾಗಿದೆ.

 

ಸಿಹಿ ಪದಾರ್ಥಗಳ ತಯಾರಿಕೆ ಅಂದರೆ, ಚಾಕಲೇಟು (Chocolate), ಐಸ್ ಕ್ರೀಂ( Icecream)ತಯಾರಿಕೆಯಲ್ಲಿ ಮೆಕಾಡೊಮಿಯ ಬೆಳೆಯನ್ನು ಬಳಕೆ ಮಾಡುವ ಹಿನ್ನೆಲೆ ಭಾರತ (India) ಕೋಟ್ಯಂತರ ರೂಪಾಯಿಯ ಮೆಕಾಡೊಮಿಯ ಬೆಳೆಯನ್ನು ವಿದೇಶಗಳಿಂದ ಆಮದು (Import) ಮಾಡಿಕೊಳ್ಳುತ್ತಿದೆ. ಈ ಬೆಳೆಯನ್ನು ವಿದೇಶದಲ್ಲಿ ಮೆಕಾಡೊಮಿಯ ಪ್ರಥಮ ದರ್ಜೆ ಬೀಜಕ್ಕೆ 3,500 ರೂ ಬೆಲೆಯಿದ್ದು, ಭಾರತದಲ್ಲಿ ಈ ಬೆಳೆ ಪ್ರತಿ ಕೆ.ಜಿಗೆ 2 ಸಾವಿರಕ್ಕೆ ಮಾರಾಟವಾಗಬಹುದು. ಕ್ಯಾಲಿಫೋರ್ನಿಯಾ(California), ದಕ್ಷಿಣ ಆಫ್ರಿಕಾ, ಕೀನ್ಯಾ(Kenya) ಮತ್ತು ಮಲಾವಿಯಂತಹ ಸ್ಥಳಗಳಿಗೆ ಕೃಷಿಗಾಗಿ (Agriculture)ಆಮದು ಮಾಡಿಕೊಳ್ಳಲಾಗಿದೆ. ಈ ದೇಶಗಳು/ ಪ್ರದೇಶಗಳಲ್ಲಿ, ಮಕಾಡಾಮಿಯಾವು ಎತ್ತರದ ಪ್ರದೇಶಗಳು, ಹೆಚ್ಚಿನ ಮಳೆ ಮತ್ತು ಸಮಶೀತೋಷ್ಣ ಹವಾಮಾನವನ್ನು(Weather) ಹೊಂದಿರುವ ಪ್ರದೇಶಗಳಿಗೆ ಹೆಚ್ಚು ಈ ಬೆಳೆ ಸರಿಹೊಂದುತ್ತದೆ.

 

ಮೆಕಾಡೊಮಿಯಾ ಬೀಜಗಳು ಬೆಣ್ಣೆಯ ಸುವಾಸನೆ ಮತ್ತು ಕೆನೆ ವಿನ್ಯಾಸದೊಂದಿಗೆ ಮರದ ಬೀಜಗಳ ಒಂದು ವಿಧವಾಗಿದೆ. ಮೆಕಾಡೊಮಿಯಾಬೀಜಗಳು , ಇತರ ಬೀಜಗಳಂತೆ, ಹೆಚ್ಚಿನ ಪೋಷಕಾಂಶಗಳು ಮತ್ತು ಉಪಯುಕ್ತ ಸಸ್ಯ ರಾಸಾಯನಿಕಗಳನ್ನು ಹೊಂದಿರುತ್ತವೆ. ಮೆಕಾಡೊಮಿಯ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೃದಯ(Heart Problems) ಸಂಬಂಧಿ ಕಾಯಿಲೆ ಇದ್ದವರಿಗೆ ವಿದೇಶದಲ್ಲಿ(Foreign) ಮೆಕಾಡೊಮಿಯದ ಬೀಜ ತಿನ್ನಲು ವೈದ್ಯರು(Doctors) ಸಲಹೆ ನೀಡುತ್ತಾರೆ. ಉತ್ತಮ ಜೀರ್ಣಕ್ರಿಯೆ, ಹೃದಯದ ಆರೋಗ್ಯ, ತೂಕ ನಷ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಈ ಬೆಳೆಯಿಂದ ಪಡೆಯಬಹುದು.

 

ಮೆಕಾಡೊಮಿಯ ಬೆಳೆಯನ್ನು ಆಸ್ಟ್ರೇಲಿಯಾ, ಅಮೆರಿಕ(USA) ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರ ಮರ 18 ಮೀಟರ್​ ಎತ್ತರ ಬೆಳೆಯುವ ಹಾಗೂ ಎಲೆಗಳು 7 ರಿಂದ 25 ಸೆಂ.ಮೀ ನಷ್ಟು ಉದ್ದವಿರುತ್ತದೆ. ಒಂದು ಎಕರೆ ಅಡಕೆ ತೋಟಕ್ಕೆ ಬೇಕಾದ ನೀರಿನಲ್ಲಿ ನಾಲ್ಕು ಎಕರೆ ಮೆಕಾಡೊಮಿಯ ಬೆಳೆಯಬಹುದಾಗಿದೆ.ಕಪ್ಪು ಮಣ್ಣಿಗೆ ಹೊಂದಿಕೊಳ್ಳುವ ಬೆಳೆಯಾಗಿದ್ದು ಹೆಚ್ಚಿನ ಫಸಲು ಪಡೆಯಬಹುದು. ಈ ಬೆಳೆಗೆ ನೆಡಲು ಮತ್ತು ಅದಕ್ಕೆ ಬೇಕಾದ ವ್ಯವಸ್ಥೆಗಾಗಿ ಹಣ ವ್ಯಯಿಸಬೇಕಾಗುತ್ತದೆ. ನಾಲ್ಕು ವರ್ಷದ ನಂತರ ಫಸಲು ಪಡೆಯಬಹುದು. ನಾಲ್ಕು ವರ್ಷ ಇದರ ಜೊತೆಗೆ ಬೇರೆ ಬೆಳೆ ಬೆಳೆಯಬಹುದಾಗಿದೆ. ಅಂದರೆ, ಮಿಶ್ರತಳಿಯಾಗಿ ಸೀಬೆ ಹಣ್ಣು, ರೇಷ್ಮೆ, ಶೇಂಗಾ, ಎಳ್ಳು, ರಾಗಿ ಹೀಗೆ ಕಡಿಮೆ ನೀರು ಸಾಕಾಗುವ ಬೆಳೆಯನ್ನು ಬೆಳೆಯಬಹುದು.

 

ಸದ್ಯ ಈ ಬೆಳೆಯನ್ನು ಶಿವಮೊಗ್ಗದ ರೈತರೊಬ್ಬರು ಬೆಳೆದು ಪ್ರಯೋಗ ನಡೆಸಿದ್ದಾರೆ. ಕಳೆದ 17 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮೂಲದವರೊಬ್ಬರು ಇದನ್ನು ಪರಿಚಯಿಸಿದ್ದು, ಪೂರ್ಣ ಮಾಹಿತಿ ಪಡೆದು ಸಸಿ ನೆಟ್ಟು ಗಿಡ ಬೆಳೆಸಿದ್ದು, ಕಳೆದ ವರ್ಷ ಕಟಾವು ಮಾಡಿ ಒಂದು ಗಿಡದಿಂದ 36 ಕೆ.ಜಿ ಫಸಲು ಗಳಿಸಿದ್ದಾರೆ. ಇದರಲ್ಲಿ ಎರಡು ಪದರಗಳಿದ್ದು, ಒಳಭಾಗದಲ್ಲಿ ಒಂದು ಸೆಲ್ ಇದ್ದು, ನಂತರ ಪಲ್ಪ್ ಇದ್ದು,ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಡಿಮ್ಯಾಂಡ್ ಇರುತ್ತದೆ. ಕೆಲ ಸಂಶೋಧನೆಯ ಪ್ರಕಾರ, ಮಕಾಡಾಮಿಯಾ ಬೀಜಗಳು ಟೈಪ್ 2 ಡಯಾಬಿಟಿಸ್ ಹೊಂದಿರುವ ವ್ಯಕ್ತಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅವರ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯವನ್ನು ಕಡಿಮೆ ಮಾಡುತ್ತದೆ.

 

ಇದನ್ನೂ ಓದಿ: Maruti Suzuki Launch : ಮುಂದಿನ ನಾಲ್ಕು ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ಸುಜುಕಿಯ ಕಾರುಗಳು!

Leave A Reply

Your email address will not be published.