Flipkart : ಕೇವಲ 1ರೂ.ಪಾವತಿಸಿ ಫ್ರಿಡ್ಜ್‌, ಎಸಿ ಮನೆಗೆ ತನ್ನಿ!

Free Shopping on Flipkart : ಆನ್‌ಲೈನ್‌ ಶಾಪಿಂಗ್ (online shopping ) ಮಾಡಲು ಯಾರಿಗೆ ತಾನೇ ಇಷ್ಟವಿಲ್ಲ. ನಿಮಗೆ ಬೇಕಾದ ವಸ್ತುಗಳನ್ನು ಮನೆಯಲ್ಲೇ ಜನಪ್ರಿಯ ಫ್ಲಿಪ್​ಕಾರ್ಟ್​ ನಲ್ಲಿ ಶಾಪಿಂಗ್ ಮಾಡಲು ಕೂಡಲೇ ತಯಾರಾಗಿ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಎಸಿ, ಫ್ರಿಜ್ ಅನ್ನು ಕೇವಲ 1 ರೂ.ಗೆ ಮನೆಗೆ ತರಬಹುದಾಗಿದೆ.

 

ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart)ಉಚಿತ ಶಾಪಿಂಗ್ (Free Shopping on Flipkart) ಎಂದರೆ ನಿಮ್ಮಿಷ್ಟದ ಎಲ್ಲಾ ಸರಕುಗಳನ್ನು ಉಚಿತವಾಗಿ ಕೊಳ್ಳಬಹುದು ಎಂದರ್ಥವಲ್ಲ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಕೆಲವು ಆಯ್ದ ಸರಕುಗಳ ಮೇಲೆ ಈ ಭರ್ಜರಿ ಕೊಡುಗೆಯನ್ನು ನೀಡಲಾಗುತ್ತಿದೆ.

ಸದ್ಯ ಭರ್ಜರಿ ಕೊಡುಗೆಯನ್ನು ಪಡೆಯಲು ಫ್ಲಿಪ್‌ಕಾರ್ಟ್‌ನಲ್ಲಿ ನೀವು ಸೂಪರ್‌ಕಾಯಿನ್ ಎಂಬ ಆಯ್ಕೆಯನ್ನು ಬಳಸಬೇಕಾಗುತ್ತದೆ. ಈಗಾಗಲೇ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್ ಕೆಲವು ವರ್ಷಗಳ ಹಿಂದೆಯೇ ತನ್ನ ಗ್ರಾಹಕರಿಗಾಗಿ ಸೂಪರ್‌ಕಾಯಿನ್ ಅನ್ನು ಪ್ರಾರಂಭಿಸಿದೆ.

ಫ್ಲಿಪ್‌ಕಾರ್ಟ್‌ನಿಂದ ನೀವು ಎಸಿ, ಫ್ರೀಜ್, ಟಿವಿ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸೂಪರ್‌ಕಾಯಿನ್‌ಗಳಿಂದ ಕೇವಲ ಒಂದು ರೂಪಾಯಿ ಪಾವಟಿಸುವ ಮೂಲಕ ಫ್ರೀ ಆಗಿ ಆರ್ಡರ್ ಮಾಡಬಹುದಾಗಿದೆ. ಉಳಿದ ಹಣವನ್ನು ಸೂಪರ್‌ಕಾಯಿನ್‌ನಿಂದ ಪಾವತಿಸಬೇಕಾಗುತ್ತದೆ.

ಉದಾಹರಣೆಗೆ ನೀವು ಒಂದು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನವನ್ನು ಖರೀದಿಸಿದರೆ ಅದಕ್ಕಾಗಿ ನೀವು ಕೇವಲ ಒಂದು ರೂಪಾಯಿಯನ್ನು ಪಾವತಿಸಿದರೆ, ಇನ್ನುಳಿದ 999 ರೂ.ಗಳನ್ನು ಸೂಪರ್‌ಕಾಯಿನ್‌ಗಳ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಹಾಗಿದ್ದರೆ, ಏನೀ ಸೂಪರ್‌ಕಾಯಿನ್‌ಗಳು, ಸೂಪರ್‌ಕಾಯಿನ್‌ಗಳನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ.

ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ ಪ್ರಯೋಜನವನ್ನು ಪಡೆಯಲು ನೀವು ಯಾವಾಗಲೂ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುತ್ತಿರಬೇಕು. 400 ರೂ.ಮೌಲ್ಯದ ಸರಕುಗಳ ಖರೀದಿಯ ಮೇಲೆ 12 ಸೂಪರ್‌ಕಾಯಿನ್‌ಗಳು ಲಭ್ಯವಾಗುತ್ತವೆ. ಅಂದರೆ 100 ರೂಪಾಯಿಗಳ ಆರ್ಡರ್‌ನಲ್ಲಿ 4 ಸೂಪರ್‌ಕಾಯಿನ್‌ಗಳು ಲಭ್ಯವಿವೆ. ಅದೇ ರೀತಿ, 10,000 ರೂ.ಗಳ ಶಾಪಿಂಗ್‌ನಲ್ಲಿ 100 ಸೂಪರ್‌ಕಾಯಿನ್‌ಗಳು ಲಭ್ಯವಾಗಲಿವೆ. ಈ ಸೂಪರ್‌ಕಾಯಿನ್‌ಗಳ ಸಹಾಯದಿಂದ ನೀವು ಫ್ರೀ ಶಾಪಿಂಗ್ ಮಾಡಲು ಕೂಡ ಸಾಧ್ಯವಾಗುತ್ತದೆ.

ಸೂಪರ್‌ಕಾಯಿನ್ ಅನ್ನು ಖರೀದಿಸುವ ವಿಧಾನ ಮತ್ತು ಇದಕ್ಕೆ ತಗಲುವ ವೆಚ್ಚ ದ ವಿವರ :
ಒಂದು ಸೂಪರ್‌ಕಾಯಿನ್‌ನ ಬೆಲೆ ಕೇವಲ 1 ರೂಪಾಯಿ. ಅದನ್ನು ಖರೀದಿಸುವ ಹಂತ-ಹಂತದ ಪ್ರಕ್ರಿಯೆ ಇಲ್ಲಿದೆ:
>ಸೂಪರ್‌ಕಾಯಿನ್ ಪಡೆಯಲು ಮೊದಲು Google Play Store ಗೆ ಹೋಗಿ ಅಲ್ಲಿ ಫ್ಲಿಪ್‌ಕಾರ್ಟ್ ಅನ್ನು ಇನ್ಸ್ಟಾಲ್ ಮಾಡಿ.
> ಬಳಿಕ ಅಪ್ಲಿಕೇಶನ್ ತೆರೆದು, ಫ್ಲಿಪ್‌ಕಾರ್ಟ್‌ನಲ್ಲಿ ಖಾತೆಯನ್ನು ರಚಿಸಿ.
> ಖಾತೆ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ವರ್ಗಗಳ ಮೇಲೆ ಕ್ಲಿಕ್ ಮಾಡಿ.
>Supercoin ನ ಆಯ್ಕೆಯು ಕೆಳಭಾಗದಲ್ಲಿ ಕಾಣಿಸುತ್ತದೆ.
>ಪುಟ ತೆರೆದ ತಕ್ಷಣ, ನೀವು 1 ರೂ. ಪಾವತಿಸಿ ಸೂಪರ್ ಸ್ಟೋರ್ ಆಯ್ಕೆಯನ್ನು ಪಡೆಯುತ್ತೀರಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
>ನೀವು 600 ಸೂಪರ್‌ಕಾಯಿನ್‌ಗಳನ್ನು ಪಡೆದಿದ್ದೀರಿ ಎಂದು ಭಾವಿಸಿ . ಯಾವುದೇ ವಸ್ತುವು ರೂ.601 ಆಗಿದ್ದರೆ, ನೀವು ಅದನ್ನು ಒಂದು ರೂಪಾಯಿ ಪಾವತಿಸಿ ಆರ್ಡರ್ ಮಾಡಬಹುದು. ಉಳಿದ ಹಣವನ್ನು ಸೂಪರ್‌ಕಾಯಿನ್ ಮೂಲಕ ಡಿಡಕ್ಟ್ ಮಾಡಲಾಗುತ್ತದೆ.

ಈ ಸೂಪರ್‌ಕಾಯಿನ್ ಪ್ರಯೋಜನವೆಂದರೆ ಇದರಿಂದ ನೀವು ಯಾವುದೇ ಸೇಲ್ ನಲ್ಲಿ ಮೊದಲ ಪ್ರವೇಶವನ್ನು ಪಡೆಯಬಹುದು. ಮಾತ್ರವಲ್ಲ, ಉಚಿತ ಡೆಲಿವರಿ ಕೂಡ ಲಭ್ಯವಿರಲಿದೆ. ಅಷ್ಟೇ ಅಲ್ಲ, ಈ ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ ಮೂಲಕ ನಿಮ್ಮ ಮೊಬೈಲ್ ರೀಚಾರ್ಜ್ ಸಹ ಮಾಡಬಹುದಾಗಿದೆ.

Leave A Reply

Your email address will not be published.