Africa Splitting : ಇನ್ನು ಏಳು ಖಂಡಗಳಲ್ಲ, ಎಂಟು! ಬದಲಾಗಲಿದೆ ‘ವಿಶ್ವ ಭೂಪಟ’!!!

Africa Splitting : ಪ್ರಪಂಚದಲ್ಲಿ ಈಗಾಗಲೇ ಏಳು ಖಂಡಗಳು ಇರುವ ವಿಚಾರ ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇನ್ನು ಮುಂದೆ ಜಗತ್ತಿನಲ್ಲಿ 8ಖಂಡಗಳು ಆಗಲಿವೆಯಂತೆ. ಬದಲಾವಣೆ ಒಂದು ಪ್ರಕೃತಿ ಸಿದ್ಧಾಂತ. ಅದೇ ರೀತಿ ಒಂದು ವಿಚಿತ್ರ ಬದಲಾವಣೆ (change ) ಆಗಲಿದೆ. ಸದ್ಯ ಆಫ್ರಿಕಾ ಖಂಡ ಎರಡಾಗಿ ಮಾರ್ಪಡಲಿದೆ.

ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳ ಪ್ರಕಾರ ಆಫ್ರಿಕಾ ಖಂಡ ಎರಡಾಗಿ (Africa Splitting) ವಿಭಜಿಸಿದ್ದು , ಈ ಬಿರುಕಿನ ಮಧ್ಯೆ ಹೊಸ ಸಮುದ್ರ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲ ಭೂಮಿಯ ಒಳಗೆ ಮತ್ತು ಹೊರಗೆ ಅದರ ಕುರುಹುಗಳಿದ್ದು, ಆಫ್ರಿಕನ್ ರಿಫ್ಟ್ ಕಣಿವೆಯಿಂದ ಹೊಸ ಸಾಗರವು ರೂಪುಗೊಳ್ಳುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸುಮಾರು 18ವರ್ಷಗಳ ಹಿಂದೆ ಅಂದರೆ ‘2005 ರಲ್ಲಿ, ಜೋರ್ಡಾನ್‌ನಿಂದ ಮೊಜಾಂಬಿಕ್‌ಗೆ 6400 ಕಿಲೋಮೀಟರ್ ಉದ್ದ ಮತ್ತು 35 ಮೈಲಿ ಅಗಲದ ಇಥಿಯೋಪಿಯಾದ ಮರುಭೂಮಿಗಳಲ್ಲಿ ದೊಡ್ಡ ಬಿರುಕು ರೂಪುಗೊಂಡಿದ್ದು, ಇದು ಸಾಗರದ ರಚನೆಗೆ ನಾಂದಿಯಾಗಿದೆ’ ಎನ್ನುತ್ತಾರೆ ತಜ್ಞರು.

ಸದ್ಯ ಭೂಪ್ರದೇಶವು ನಿರಂತರವಾಗಿ ಬದಲಾಗುತ್ತಿದ್ದು, ಈ ಬದಲಾವಣೆಗಳು ಸಾವಿರಾರು ವರ್ಷಗಳಿಂದ ನಡೆಯುತ್ತವೆ. ಅದೇ ರೀತಿ ಆಫ್ರಿಕಾ ಖಂಡದಲ್ಲಿ ಇಂತಹದೊಂದು ಬಹುದೊಡ್ಡ ಬದಲಾವಣೆ ಆಗಲಿದೆ. ಆಫ್ರಿಕಾವು ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ ಮತ್ತು ಹೊಸ ಖಂಡವು ರೂಪುಗೊಳ್ಳುತ್ತದೆ. ಈ ಬಿರುಕಿನ ಭಾಗವಾಗಿ ಅವುಗಳ ನಡುವೆ ಹೊಸ ಸಮುದ್ರವೂ ಹುಟ್ಟುವ ಸಾಧ್ಯತೆ ಇದೆ ಎನ್ನುತ್ತಾರೆ ವಿಜ್ಞಾನಿಗಳು.

ಆದರೆ ಈಗಾಗಲೇ ಆರಂಭಗೊಂಡಿರುವ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ಸಾವಿರ ವರ್ಷಗಳು ಬೇಕಾಗುತ್ತವೆ. ಹೊಸ ಸಾಗರ ರೂಪುಗೊಳ್ಳಲು 5 ರಿಂದ 10 ಮಿಲಿಯನ್ ವರ್ಷಗಳು ಬೇಕಾಗಬಹುದು ಎಂದು ನೈರೋಬಿ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ವಿಜ್ಞಾನಿ ಎಡ್ವಿನ್ ಡಿಂಡಿ ಹೇಳಿದ್ದಾರೆ.

ಮುಖ್ಯವಾಗಿ ಈ ಬದಲಾವಣೆಯನ್ನ ಪೂರ್ವ ಆಫ್ರಿಕಾದ ಬಿರುಕು ಎಂದು ಕರೆಯಲಾಗುತ್ತದೆ. ಭೂಗರ್ಭದ ಟೆಕ್ಟೋನಿಕ್ ಪ್ಲೇಟ್ ಎರಡಾಗಿ ವಿಭಜಿಸಿದಾಗ ವಿಜ್ಞಾನಿಗಳು ಬಿರುಕು ಎಂದು ಕರೆಯುತ್ತಾರೆ. ಈ ಫಲಕಗಳು ಚಲಿಸಿದಾಗ, ಕಣಿವೆಗಳಂತಹ ಬಿರುಕುಗಳು ಭೂಮಿಯ ಮೇಲ್ಮೈಯಲ್ಲಿ ಮತ್ತು ಭೂಮಿಯ ಒಳಗೆ ರೂಪುಗೊಳ್ಳುತ್ತವೆ.

ಬರೋಬ್ಬರಿ 38 ಮಿಲಿಯನ್ ವರ್ಷಗಳ ಹಿಂದೆ, ದಕ್ಷಿಣ ಅಮೇರಿಕಾ ಮತ್ತು ಆಫ್ರಿಕಾ ಖಂಡಗಳು ಸಹ ಬೇರ್ಪಟ್ಟವು. ಈಗ ಆಫ್ರಿಕಾದಲ್ಲಿ ಇದೇ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ.

ಇದೀಗ ವಿಜ್ಞಾನಿಗಳು ಇತ್ತೀಚೆಗೆ ಆಫ್ರಿಕನ್ ನುಬಿಯನ್, ಆಫ್ರಿಕನ್ ಸೊಮಾಲಿ ಮತ್ತು ಅರೇಬಿಯನ್ ಪ್ಲೇಟ್‌ಗಳಲ್ಲಿ ಬಿರುಕುಗಳನ್ನು ಗುರುತಿಸಿದ್ದಾರೆ. ಇದು ಹೊಸ ಸಮುದ್ರದ ರಚನೆಯ ಸಂಕೇತವೆಂದು ಅಭಿಪ್ರಾಯ ನೀಡಲಾಗಿದೆ.

ಮುಖ್ಯವಾಗಿ ಗಲ್ಫ್ ಆಫ್ ಏಡನ್ ಮತ್ತು ಕೆಂಪು ಸಮುದ್ರದ ನೀರು ಈ ಆಫ್ರಿಕಾದ ಬಿರುಕನ್ನು ಪ್ರವೇಶಿಸಿ ಹೊಸ ಸಮುದ್ರವನ್ನು ರೂಪಿಸುತ್ತದೆ ಎಂದು ಲೀಡ್ಸ್ ವಿಶ್ವವಿದ್ಯಾಲಯದ ವಿಜ್ಞಾನಿ ಕ್ರಿಸ್ಟೋಫರ್ ಮೂರ್ ಅವರು ಮಾಹಿತಿ (information ) ನೀಡಿದ್ದಾರೆ.

Leave A Reply

Your email address will not be published.