Weekend With Ramesh 5: ಇಲ್ಲಿದೆ ನೋಡಿ ವೀಕೆಂಡ್ ವಿತ್ ರಮೇಶ್ 5ರ ಅತಿಥಿಗಳ ಪಟ್ಟಿ! ಸಾಧಕರ ಸೀಟ್‌ನಲ್ಲಿ ಅಶ್ವಿನಿ ಪುನೀತ್‌, ಯೂಟ್ಯೂಬರ್ ಡಾ ಬ್ರೋ?

Weekend with Ramesh Season 5 :ಕಿರುತೆರೆಯ ಜನಪ್ರಿಯ ಶೋಗಳಲ್ಲಿ ‘ವೀಕೆಂಡ್ ವಿಥ್ ರಮೇಶ್’ ಶೋ ( Weekend With Ramesh Season 5 ) ಕೂಡ ಒಂದು. ಈಗಾಗಲೇ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ಶೋನ 5ನೇ ಸೀಸನ್‌ ಇನ್ನು ಕೆಲವೇ ದಿನಗಳಲ್ಲಿ ಪ್ರಸಾರವಾಗುಲಿದ್ದು, ಈ ಬಾರಿ ಸಾಧಕರ ಕುರ್ಚಿಯಲ್ಲಿ ಯಾರೆಲ್ಲಾ ಕೂರಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಕಾಡುತ್ತಿದೆ. ಅಂತೆಯೇ ಈ ಸೀಸನ್ ಅಲ್ಲಿ ಯಾರೆಲ್ಲಾ ಅತಿಥಿಗಳಾಗಿ ಭಾಗವಹಿಸುತ್ತಾರೆ ಗೊತ್ತಾ?

 

ಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್, ರಾಜಕಾರಣಿಗಳು, ಸಿನಿಮಾ, ಕಿರುತೆರೆ, ರಂಗಭೂಮಿ ಹೀಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರು ಈ ಬಾರಿ ವೀಕೆಂಡ್ ಕುರ್ಚಿಯ ಮೇಲೆ ಕೂತು, ತಮ್ಮ ಕಥೆಯನ್ನು ಹೇಳಿಕೊಳ್ಳಲಿದ್ದಾರೆ. ಎಂದಿನಂತೆ ರಮೇಶ್ ಅರವಿಂದ್ ಅವರ ಮಾತಿಗೆ ಕಿವಿಯಾಗಲಿದ್ದಾರೆ.

ಪ್ರತಿ ಬಾರಿ ವೀಕ್ಷಕರು ತಮ್ಮ ಮೆಚ್ಚಿನ ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಕರೆ ತರುವಂತೆ ಬೇಡಿಕೆ ಇಡುತ್ತಿದ್ದರು. ಈ ಬಾರಿ ಕೂಡಾ ಅದೇ ರೀತಿ ಅಭಿಮಾನಿಗಳು ಕೆಲವೊಂದು ಹೆಸರುಗಳನ್ನು ಸೂಚಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌(Punith Rajkumar)ಪತ್ನಿ ಅಶ್ವಿನಿ(Ashwini) ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಖ್ಯಾತ ಯೂಟ್ಯೂಬರ್‌ ಡಾ ಬ್ರೋ(Dr.bro) ಅವರನ್ನು ಕೂಡಾ ವೀಕೆಂಡ್ ವಿತ್ ರಮೇಶ್ ನಲ್ಲಿ ಅತಿಥಿಯಾಗಿ ನೋಡಲು ಬಯಸಿದ್ದಾರೆ. ಆದರೆ ಅಭಿಮಾನಿಗಳ ಆಸೆಯಂತೆ ಇವರು ಈ ಬಾರಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರಾ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಇದರ ಜೊತೆಗೆ ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವವರಲ್ಲಿ ಕೆಲವೊಂದು ಹೆಸರುಗಳು ರಿವೀಲ್‌ ಆಗಿದೆ. ಡಾಲಿ ಧನಂಜಯ್‌(Dali Dhanajay), ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ(Rishab Shetty), ಅಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ(Druva Sarja), ಕ್ರಿಕೆಟಿಗ ಕೆ.ಎಲ್‌ ರಾಹುಲ್‌(K L Rahul), ಡಿಂಪಲ್‌ ಕ್ವಿನ್‌ ರಚಿತಾ ರಾಮ್‌(Rachita Ram), ನಟಿ-ನಿರೂಪಕಿ ಅನುಶ್ರೀ(Anushree), ಮೋಹಕ ತಾರೆ ರಮ್ಯಾ(Ramya) ಹಾಗೂ ಇನ್ನಿತರರು ಈ ಬಾರಿ ವೀಕೆಂಡ್‌ ರಮೇಶ್‌ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ಧಾರೆ ಎನ್ನಲಾಗುತ್ತಿದೆ.

ಇನ್ನು ಇದೇ ಮಾರ್ಚ್ ಮಾರ್ಚ್ ತಿಂಗಳಲ್ಲಿ ವೀಕೆಂಡ್ ವಿತ್ ರಮೇಶ್ ಪ್ರಸಾರವಾಗುತ್ತದೆ ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಸದ್ಯ ಕನ್ನಡದಲ್ಲಿ ಮನೆಮಾತಾಗಿರೋ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಬರುತ್ತಾರೆ ಎಂದು ಹೇಳಲಾಗಿತ್ತು. ಈಗಾಗಲೇ ರಿಷಬ್ ಬಗ್ಗೆ ರಮೇಶ್ (Ramesh Arvind) ತಂಡ ಸಂಶೋಧನೆ ನಡೆಸಿದ್ದಾರೆ, ರಿಷಬ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಇದೀಗ ಕೊನೆಯ ಹಂತದಲ್ಲಿ, ಮೊದಲ ಎಪಿಸೋಡಿನಲ್ಲಿ ಬರುವ ಅತಿಥಿ ಬದಲಾಗಿದ್ದಾರೆ.

5ನೇ ಸೀಸನ್ ನ ಮೊದಲ ಅತಿಥಿಯಾಗಿ ಖ್ಯಾತ ನೃತ್ಯ ನಿರ್ದೇಶಕ, ಚಿತ್ರ ನಿರ್ದೇಶಕ, ನಟ ಪ್ರಭುದೇವ (Prabhudeva) ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆಯಿಂದ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಚಿತ್ರೀಕರಣ ಶುರುವಾಗಿದ್ದು, ಪ್ರಭುದೇವ್ ಅವರು ಚಿತ್ರೀಕರಣಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಪ್ರಭುದೇವ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ : Mens Style Tips : ಪುರುಷರು ತಮ್ಮ ಡ್ರೆಸ್ಸಿಂಗ್ ಸೆನ್ಸ್ ಸುಧಾರಿಸಲು ಸ್ಟೈಲಿಂಗ್ ಸಲಹೆ ಇಲ್ಲಿದೆ !

Leave A Reply

Your email address will not be published.