Weekend Marriage : ವಾರಾಂತ್ಯದಲ್ಲಿ ಮಾತ್ರ ಗಂಡ ಹೆಂಡತಿ, ಉಳಿದ ದಿನ ಬ್ಯಾಚುಲರ್‌ ಲೈಫ್‌ ಜೀವನ ! ಇದು ಈ ದೇಶದ ವಿಚಿತ್ರ ಸಂಗತಿ!

Weekend Marriage: ಮದುವೆ (marriage) ಆದ ಮೇಲೆ ಗಂಡ-ಹೆಂಡತಿ ಒಟ್ಟಿಗೆ ಜೀವನ ನಡೆಸಬೇಕು. ಏನೇ ಕಷ್ಟ ಬಂದರೂ ಪ್ರತಿಕ್ಷಣ ಒಟ್ಟಿಗೆ ಇರುತ್ತೇವೆ ಎಂದೆನ್ನುತ್ತಲೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದು ಭಾರತದಲ್ಲಿ ನಡೆದುಕೊಂಡು ಬಂದಿರುವಂತದ್ದು. ಆದರೆ ಈ ಒಂದು ದೇಶದಲ್ಲಿ ಮದುವೆಯಾದ ದಂಪತಿಗಳು ವಾರಾಂತ್ಯದಲ್ಲಿ ಮಾತ್ರವೇ ಗಂಡ ಹೆಂಡತಿ (Weekend Marriage), ಉಳಿದ ದಿನ ಬ್ಯಾಚುಲರ್‌ ಲೈಫ್‌ ಜೀವನ ನಡೆಸುತ್ತಾರೆ. ಎಲ್ಲಿ? ಯಾಕೆ ಹೀಗೆ? ಬನ್ನಿ ಮಾಹಿತಿ ತಿಳಿಯೋಣ‌.

ಇಂತಹ ಮದುವೆಗಳು ಜಪಾನ್​ನಲ್ಲಿ (Japan) ನಡೆಯುತ್ತವೆ. ಎರಡು ವಿವಾಹಿತ ದಂಪತಿಗಳು ಪ್ರತಿದಿನ ಒಟ್ಟಿಗೆ ಜೀವನ ನಡೆಸಲ್ಲ. ಬದಲಾಗಿ ವಾರಕ್ಕೊಮ್ಮೆ ಒಟ್ಟಿಗೆ ಇರುತ್ತಾರೆ. ಉಳಿದ ದಿನಗಳಲ್ಲಿ, ತಮ್ಮ ಸ್ವಂತ ಜೀವನವನ್ನು ಎಂಜಾಯ್ ಮಾಡುತ್ತಾರೆ. ತಮಗಿಷ್ಟ ಬಂದ ಕಡೆಗೆ ಸ್ವತಂತ್ರವಾಗಿ ಸುತ್ತಾಡುತ್ತಾರೆ.

ಅಲ್ಲದೆ, ವಾರಾಂತ್ಯದಲ್ಲಿ ಒಟ್ಟಿಗೆ ಇರೋದ್ರಿಂದ ಜಗಳಗಳು ಆಗುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ಟೆನ್ಶನ್, ಜಗಳ ಇವೆಲ್ಲಾ ಇರೋದಿಲ್ಲ. ಬದಲಾಗಿ ವಾರಾಂತ್ಯದಲ್ಲಿ ಇಬ್ಬರೂ ಪರಸ್ಪರ ಭೇಟಿಯಾದಾಗ ಮುಖದಲ್ಲಿ ಮಂದಹಾಸ ಇರುತ್ತದೆ. ಅಲ್ಲದೆ, ಇಬ್ಬರು ನಡುವೆ ವಾದ-ವಿವಾದಗಳಿಗೆ ಅವಕಾಶವಿರುವುದಿಲ್ಲ.

ಅದೆಷ್ಟೋ ಹುಡುಗರು ಮದುವೆ ಆದ ಮೇಲೆ ಸ್ವಾತಂತ್ರ್ಯ ಇಲ್ಲ ಎಂದು ಮದುವೆ ಆಗೋದಿಕ್ಕೆ ಹಿಂಜರಿಯುತ್ತಾರೆ. ಮದುವೆಗೂ ಮುನ್ನ ಯಾರ ಮಾತು ಕೇಳದೆ, ತಮಗಿಷ್ಟ ಬಂದ ಹಾಗೆ ಇರುವ ಯುವಕರಿಗೆ ಮದುವೆ ಕಬ್ಬಿಣದ ಕಡಲೆಯಾಗಿ ಬಿಡುತ್ತದೆ. ಅಂತಹವರಿಗೆ ಜಪಾನ್ ನ ಈ ವೀಕೆಂಡ್​ನಲ್ಲಿ ಮಾತ್ರ ಗಂಡ-ಹೆಂಡತಿ, ಉಳಿದ ದಿನಗಳಲ್ಲಿ ಸಿಂಗಲ್​ ಲೈಫ್! ಬೆಸ್ಟ್ ಅನಿಸುತ್ತದೆ.

tirupati temple Assets : ತಿರುಪತಿ ದೇವಾಲಯದ ಒಟ್ಟು ಆಸ್ತಿ ಎಷ್ಟು? ಚಿನ್ನ ಎಷ್ಟಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ

Leave A Reply

Your email address will not be published.