Honda : ಇನ್ಮುಂದೆ ದ್ವಿಚಕ್ರ ವಾಹನಗಳಿಗೆ ಬರಲಿದೆ ಏರ್‌ಬ್ಯಾಗ್ !!
Honda two wheeler airbag : ವಾಹನ ಖರೀದಿ ಮಾಡುವಾಗ ಅದರ ವೈಶಿಷ್ಟ್ಯತೆ ಹಾಗೂ ಬಣ್ಣ ಮಾತ್ರ ಚೆನ್ನಾಗಿದ್ದರೆ ಸಾಲೋದಿಲ್ಲ. ಅದರಲ್ಲಿ ಸುರಕ್ಷತಾ ವೈಶಿಷ್ಟ್ಯತೆ ಕೂಡ ಇರಬೇಕು. ಇತ್ತೀಚೆಗೆ ಅಪಘಾತಗಳ ಪ್ರಕರಣ ಹೆಚ್ಚಾಗಿದ್ದು, ಗ್ರಾಹಕರು ವಾಹನಗಳ ಫೀಚರ್ ಮಾತ್ರವಲ್ಲದೆ ಅದರಲ್ಲಿನ ಸುರಕ್ಷತೆಯ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.
ಈಗಾಗಲೇ ಕಾರುಗಳಲ್ಲಿ ಏರ್‌ಬ್ಯಾಗ್ ಸಿಸ್ಟಂ ಗಳು ಇವೆ. ಆದರೆ, ದ್ವಿಚಕ್ರ ವಾಹನಗಳಲ್ಲಿ (honda two wheeler) ಇಂತಹ ವ್ಯವಸ್ಥೆ ಇಲ್ಲ. ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲೂ ಇಂತಹ ಸೌಲಭ್ಯಗಳು ದೊರಕುತ್ತದೆ. ಹೌದು, ಹೋಂಡಾ ಕಂಪನಿ (Honda company) ದ್ವಿಚಕ್ರ ವಾಹನಗಳಿಗಾಗಿ ಏರ್‌ಬ್ಯಾಗ್‌ಗಳನ್ನು (Honda two wheeler airbag) ಅಭಿವೃದ್ಧಿಪಡಿಸುತ್ತಿದೆ.
ಕೇಂದ್ರ ಸರ್ಕಾರ (central government) ಕೂಡ ಸುರಕ್ಷತಾ ದೃಷ್ಟಿಯಿಂದ ಎಲ್ಲಾ ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು (air bag) ಕಡ್ಡಾಯಗೊಳಿಸಿದೆ.
ಆದರೆ ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಏರ್ ಬ್ಯಾಗ್ ಗಳು ಇಲ್ಲ. ಆದರೆ, ಇದೀಗ ಹೋಂಡಾ ದ್ವಿಚಕ್ರ ವಾಹನಗಳಿಗಾಗಿ ಏರ್‌ಬ್ಯಾಗ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಹೋಂಡಾದ ಈ ಏರ್‌ಬ್ಯಾಗ್ ಸವಾರನ ತಬ್ಬಿಕೊಂಡ ರೀತಿಯಲ್ಲಿ ಸುತ್ತಲೂ ಸುತ್ತಿಕೊಳ್ಳುತ್ತದೆ. ನಂತರ ವಾಹನದಿಂದ ಬೇರ್ಪಡುತ್ತದೆ. ಹೋಂಡಾ ದ್ವಿಚಕ್ರ ವಾಹನಗಳಲ್ಲಿ ಏರ್‌ಬ್ಯಾಗ್ ತಂತ್ರಜ್ಞಾನದ ಪ್ರವರ್ತಕವಾಗಿದೆ. ವಾಹನ ಸವಾರರಿಗೆ ಭಾರೀ ಅನುಕೂಲವಾಗಲಿದೆ.
2006 ರಿಂದ ಹೋಂಡಾ ತನ್ನ ಗೋಲ್ಡ್ ವಿಂಗ್ ಟೂರರ್ ಬೈಕಿನ (Honda gold wing ) ಮುಂಭಾಗದ ಏರ್‌ಬ್ಯಾಗ್ ಅನ್ನು ನೀಡುತ್ತಿದೆ. ಹೋಂಡಾ ಗೋಲ್ಡ್ ವಿಂಗ್ ಇಂದಿಗೂ ಏರ್ ಬ್ಯಾಗ್ ಹೊಂದಿರುವ ಏಕೈಕ ಬೈಕ್ ಆಗಿದೆ. ಏರ್‌ಬ್ಯಾಗ್ ಎರಡು ಪ್ರಮುಖ ವಿನ್ಯಾಸಗಳ ಶೈಲಿಯಲ್ಲಿ ಬರಲಿದ್ದು, ಮೊದಲು, ಸೀಟು ಮುಂಭಾಗದಲ್ಲಿ, ಸವಾರನ ಕಾಲುಗಳ ನಡುವೆ ಏರ್‌ಬ್ಯಾಗ್ ಸಿಸ್ರಂ ಅನ್ನು ಹೊಂದಿದೆ. ಅಲ್ಲಿಂದ ಏರ್‌ಬ್ಯಾಗ್ ಉಬ್ಬಿಕೊಳ್ಳುತ್ತದೆ ಮತ್ತು ಸವಾರನ ಸುತ್ತ ಸುತ್ತುವರಿಯುತ್ತದೆ.
ಎರಡನೇಯದು ಹೆಚ್ಚು ಆರಾಮದಾಯಕವಾದ ವಿನ್ಯಾಸದ ಏರ್‌ಬ್ಯಾಗ್ ಸಿಸ್ಟಂ ಇದಾಗಿದೆ. ಈ ಏರ್‌ಬ್ಯಾಗ್ ಸವಾರನ ಹಿಂದೆ, ರೈಡರ್ ಸೀಟ್ ಮತ್ತು ಪಿಲಿಯನ್ ಸೀಟ್ ನಡುವೆ ಇರಿಸುತ್ತದೆ. ಸದ್ಯ ಈ ವಿನ್ಯಾಸಗಳು ಅಭಿವೃದ್ಧಿ ಹಂತದಲ್ಲಿದೆ.