Ration Card and Govt : ಪಡಿತರ ತೂಕದಲ್ಲಿನ ವಂಚನೆಗೆ ಕಡಿವಾಣ ಹಾಕಲು ಸರ್ಕಾರದ ಹೊಸ ಪ್ಲಾನ್!

Ration card and government : ಇದೀಗ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ( Ration card and government) ಮಹತ್ವದ ಮಾಹಿತಿಯೊದನ್ನು ನೀಡಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್’ (one nation one ration card )ಬಳಿಕ ಇದೀಗ ಮೋದಿ ಸರ್ಕಾರ ಪಡಿತರ ತೂಕದಲ್ಲಿನ ವಂಚನೆಗೆ ಕಡಿವಾಣ ಹಾಕಲು ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.

 

ಮೋದಿ ಸರ್ಕಾರ ತರಲು ಹೊರಟಿರುವ ಹೊಸ ಯೋಜನೆಯ ಪ್ರಕಾರ, ದೇಶದ ಯಾವುದೇ ಪಡಿತರ ಚೀಟಿದಾರರೂ ಸಹ ಎಂತಹದ್ದೇ ಪರಿಸ್ಥಿತಿಯಲ್ಲಿ ಕಡಿಮೆ ಪಡಿತರವನ್ನು ಪಡೆಯದಂತೆ ಜಾಗೃತಿ ವಹಿಸಲು ಕೇಂದ್ರ ಸರ್ಕಾರವು ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆನ್ ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಪಿಒಎಸ್ ) ಸಾಧನಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.

ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತೂಕದ ಆಹಾರ ಧಾನ್ಯವನ್ನು ಸುಧಾರಿಸುವ ನಿಟ್ಟಿನಿಂದ, ಇನ್ನು ಮುಂದೆ ಫಲಾನುಭವಿಗಳು ಯಾವುದೇ ಸಂದರ್ಭದಲ್ಲೂ ಕಡಿಮೆ ಪಡಿತರವನ್ನು ಪಡೆಯಬಾರದು ಎಂಬ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಇದರ ವಿಶೇಷತೆ ಎಂದರೆ ಯಾವುದೇ ನೆಟ್‌ವರ್ಕ್ ಇಲ್ಲದಿದ್ದರೂ ಸಹ ಈ ಯಂತ್ರಗಳು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸದ್ಯ ರಾಷ್ಟೀಯ ಆಹಾರ ಭದ್ರತ ಕಾಯಿದೆ (NFSA) ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 6 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಆದ್ದರಿಂದ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರಧಾನ್ಯದ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಲು ಮಾಹಿತಿ ತಿಳಿಸಲಾಗಿದೆ.

ಒಂದು ವೇಳೆ ವಿತರಣೆಯಾಗುವ ಆಹಾರಧಾನ್ಯ ಕಡಿಮೆ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಕಾರರು ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಆಹಾರ ಧಾನ್ಯದ ಪ್ರಮಾಣ ದಲ್ಲಿ ಕಡಿಮೆ ಇದ್ದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆ ಸಂಪರ್ಕಿಸಲು ತಿಳಿಸಲಾಗಿದೆ.

ಧಾರವಾಡ ಪಡಿತರ ಪ್ರದೇಶ-ಸಹಾಯಕ ನಿರ್ದೇಶಕರು-ಮೊ.ಸಂ-9880725639, ಆಹಾರ ನಿರೀಕ್ಷಕರ-ಮೊ.ಸಂ-8088737170, ಧಾರವಾಡ ತಾಲ್ಲೂಕು-ಆಹಾರ ಶಿರಸ್ತೇದಾರ-ಮೊ.ಸಂ-9845202400, ಆಹಾರ ನಿರೀಕ್ಷಕರ-ಮೊ.ಸಂ-8310109795 ಹಾಗೂ ಅಳ್ನಾವರ ಆಹಾರ ನಿರೀಕ್ಷಕರ ಮೊ.ಸಂ-9448221892,
ಹುಬ್ಬಳ್ಳಿ ಪಡಿತರ ಪ್ರದೇಶ-ಸಹಾಯಕ ನಿರ್ದೇಶಕರು-ಮೊ.ಸಂ-9611123128, ಆಹಾರ ನಿರೀಕ್ಷಕರ-ಮೊ.ಸಂ-8310490713, ಆಹಾರ ನಿರೀಕ್ಷಕರ-ಮೊ.ಸಂ-9886320360,
ಹುಬ್ಬಳ್ಳಿ ತಾಲ್ಲೂಕು-ಆಹಾರ ನಿರೀಕ್ಷಕರ-ಮೊ.ಸಂ-9482532326, ಕಲಘಟಗಿ ತಾಲ್ಲೂಕ-ಆಹಾರ ನಿರೀಕ್ಷಕರ-ಮೊ.ಸಂ-9741304522, ಕುಂದಗೋಳ ತಾಲ್ಲೂಕು -ಆಹಾರ ನಿರೀಕ್ಷಕರ-ಮೊ.ಸಂ-8618525185, ನವಲಗುಂದ ತಾಲ್ಲೂಕು -ಆಹಾರ ನಿರೀಕ್ಷಕರ-ಮೊ.ಸಂ-9902142458, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಶಾಖೆ ದೂ.ಸಂ-0836 2444594

ಈ ಮೇಲಿನ ದೂರವಾಣಿಗಳಿಗೆ ದೂರು ಸಲ್ಲಿಸಿದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಸದ್ಯ ಫಲಾನುಭವಿಗಳು ಯಾವುದೇ ಸಂದರ್ಭದಲ್ಲೂ ಕಡಿಮೆ ಪಡಿತರವನ್ನು ಪಡೆಯಬಾರದು ಎಂಬ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತಂದಿದೆ .

Leave A Reply

Your email address will not be published.