MG Comet electric car : ತೀರಾ ಕಡಿಮೆ ಬೆಲೆಯಲ್ಲಿ ಗ್ರಾಹಕರ ಮಡಿಲಿಗೆ ಸೇರಲಿದೆ ಈ ಪುಟ್ಟ ಎಲೆಕ್ಟ್ರಿಕ್‌ ಕಾರು!

MG Comet electric car: ವಾಹನಗಳ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪೆಟ್ರೋಲ್ (petrol), ಡೀಸೆಲ್ ಗಳ (diesel) ಬೆಲೆ ಗಗನಕ್ಕೇರಿರುವುದರಿಂದ ಜನರು ಎಲೆಕ್ಟ್ರಿಕ್ ವಾಹನಗಳ (electric vehicle) ಕಡೆಗೆ ಮುಖ ಮಾಡಿದ್ದಾರೆ. ಇದೀಗ ಭಾರತೀಯ ಮಾರುಕಟ್ಟೆಗೆ ನೂತನ ಕಾರನ್ನು ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ (MG motor India) ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಎಂಜಿ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರಿನ ಹೆಸರು MG Comet (MG Comet electric car) ಎಂದಾಗಿದೆ. ಈ ಕಾರು ಅತ್ಯಂತ ಪುಟ್ಟದಾಗಿದ್ದು, ತೀರಾ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

 

ಬಹುನಿರೀಕ್ಷಿತ ಎಂಜಿ Comet ಎಲೆಕ್ಟ್ರಿಕ್ ಕಾರು 2023ರ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಇದರ ಎಕ್ಸ್ ಶೋರೂಂ ಬೆಲೆ ರೂ.10 ಲಕ್ಷ ಇರಬಹುದು ಎನ್ನಲಾಗಿದ್ದು, ಮುಂಬರುವ MG Comet ಸ್ಮಾರ್ಟ್ ಇವಿ ಚೀನಾ-ಸ್ಪೆಕ್ ವುಲಿಂಗ್ ಏರ್ ಎಲೆಕ್ಟ್ರಿಕ್ ಕಾರನ್ನು ಆಧರಿಸಿದೆ.

ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 20kWh – 25kWh ನಡುವಿನ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರಲಿದ್ದು, ಇದು
ಸುಮಾರು 40 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. .
ಕಾರು 200 ಕಿ.ಮೀ ಮೈಲೇಜ್ ನೀಡಲಿದ್ದು, ಇದರ ಬ್ಯಾಟರಿ ಪ್ಯಾಕ್ LFP ಸಿಲಿಂಡರಾಕಾರದ ಸೆಲ್ ಗಳನ್ನು ಹೊಂದಿರುತ್ತದೆ, ಈ ಸೆಲ್ ಗಳು ಹಗುರ ಮತ್ತು ಹೆಚ್ಚು ಚಾರ್ಜ್ ದಕ್ಷವಾಗಿರುತ್ತವೆ. NMC ಸೆಲ್‌ಗಳಿಗಿಂತ ಕಡಿಮೆ ನಿರ್ವಹಣೆಯನ್ನು ಇರುತ್ತದೆ.

MG Comet ಎಲೆಕ್ಟ್ರಿಕ್ ಕಾರಿನಲ್ಲಿ FWD (ಫ್ರಂಟ್-ವೀಲ್-ಡ್ರೈವ್) ಸಿಸ್ಟಂ ಇದ್ದು, ಇದು ಸುಮಾರು 2.9 ಮೀಟರ್ ಉದ್ದವನ್ನು ಹೊಂದಿರುತ್ತದೆ. ಇದನ್ನು ಬ್ರ್ಯಾಂಡ್‌ನ ಹೊಸ ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (GSEV) ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಪುಟ್ಟ ಎಲೆಕ್ಟ್ರಿಕ್ ಕಾರು ಡ್ಯುಯಲ್ 10.25-ಇಂಚಿನ ಡಿಸ್ ಪ್ಲೇಯಂತಹ ವೈಶಿಷ್ಟ್ಯಗಳನ್ನು ಪಡೆದಿರಲಿದೆ.

ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್ಸ್ ಟ್ರೂಮೆಂಟ್, ಆಟೋಮ್ಯಾಟಿಕ್ ಎಸಿ, ಕೀಲೆಸ್ ಎಂಟ್ರಿ, ಸಂಪರ್ಕಿತ ಕಾರ್ ಟೆಕ್ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳನ್ನು ಒಳಗೊಂಡಿರಲಿದ್ದು, ಸಿಟಿಗಳಲ್ಲಿ ಟ್ರಾಫಿಕ್ ನ ದಟ್ಟನೆ ಎದುರಿಸಲು ಇದು ಸಹಕಾರಿಯಾಗಲಿದೆ ಎಂದು ಕಂಪನಿ ಹೇಳಿದೆ. ಸದ್ಯ ಕೈಗೆಟುಕುವ ದರದ ಈ ಪುಟ್ಟ ಎಲೆಕ್ಟ್ರಿಕ್ ಕಾರು ಉಳಿದ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Leave A Reply

Your email address will not be published.