Maruti Brezza SUV : ಕೇವಲ ಮೂರು ಲಕ್ಷಕ್ಕೆ ದೊರಕಲಿದೆ ಮಾರುತಿ ಬ್ರೆಜಾ ಎಸ್‌ಯುವಿ!

Maruti Brezza SUV : ಎಸ್‌ಯುವಿ ಕಾರುಗಳಿಗೆ (car ) ಇತ್ತೀಚಿಗೆ ಅತೀ ಹೆಚ್ಚಿನ ಬೇಡಿಕೆ ಇರುವುದು ನಮಗೆ ಗೊತ್ತೇ ಇದೆ. ನಿಮಗೂ ಕೊಂಡುಕೊಳ್ಳಬೇಕೆಂಬ ಕನಸು ಇರಬಹುದು. ಆದರೆ ಬಜೆಟ್ ಕೊರತೆಯಿಂದ ನಿಮ್ಮ ಕನಸು ನನಸಾಗದೆ ಇರಬಹುದು. ಇದೀಗ ಎಸ್‌ಯುವಿ ಅಂತಹ ಕಾರು ಖರೀದಿಸಬೇಕೆಂಬ ನಿಮ್ಮ ಕನಸು ನನಸಾಗಿಸಲು ಕಂಪನಿ ನಿಮಗೊಂದು ಅವಕಾಶ ನೀಡಿದೆ. ಕೇವಲ ಮೂರು ಲಕ್ಷದಲ್ಲಿ

 

Maruti Brezza SUV ಐಷಾರಾಮಿ ಕಾರು ನಿಮ್ಮ ಕೈ ಸೇರಲಿದೆ.

2023 ರ ಫೆಬ್ರವರಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಕಾರ್ ಎಂದರೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ. ಸನ್‌ರೂಫ್, 360 ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಮಾರುತಿ ಬ್ರೆಝಾ ಎಸ್‌ಯುವಿ ಕಾರನ್ನು ಕಡಿಮೆ ಬೆಲೆಯಲ್ಲಿ ಮನೆಗೆ ತರಬಹುದು.

ಮಾರುತಿ ಬ್ರೆಝಾ ಎಸ್‌ಯುವಿಯ ವೈಶಿಷ್ಟ್ಯಗಳು:

ಮಾರುತಿ ಬ್ರೆಝಾ ಎಸ್‌ಯುವಿ LXi, VXi, ZXi ಮತ್ತು ZXi+ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಮಾರುತಿ ಇದನ್ನು ಆರು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್ ಶೇಡ್‌ಗಳಲ್ಲಿ ನೀಡುತ್ತದೆ. ಇದರಲ್ಲಿ ಗರಿಷ್ಠ ಐದು ಮಂದಿ ಕುಳಿತುಕೊಳ್ಳಬಹುದು.

ಇನ್ನು ಸಬ್ ಕಾಂಪ್ಯಾಕ್ಟ್ SUV 328 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಮಾರುತಿ ಬ್ರೆಝಾ ಎಸ್‌ಯುವಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು ಸ್ಪೀಕರ್‌ಗಳು, ಪ್ಯಾಡಲ್ ಶಿಫ್ಟರ್‌ಗಳು (ಎಟಿ ರೂಪಾಂತರ), ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್-ಅಪ್ ಡಿಸ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರಿನಲ್ಲಿ ಸುರಕ್ಷತೆ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳನ್ನು ಸಹ ಒದಗಿಸಲಾಗಿದೆ.

ಪ್ರಸ್ತುತ ಮಾರುತಿ ಬ್ರೆಝಾ ಎಸ್‌ಯುವಿ ಕಾರಿನ ಎಕ್ಸ್ ಶೋ ರೂಂ ಬೆಲೆ 8.19 ಲಕ್ಷ ರೂ.ಗಳಿಂದ 14.04 ಲಕ್ಷ ರೂ.ಗಳವರೆಗೆ ಇರಲಿದೆ. ನೀವು ಈ ಕಾರನ್ನು ಲೋನ್‌ನಲ್ಲಿ ಖರೀದಿಸಲು ಬಯಸಿದರೆ, ಕೇವಲ 3 ಲಕ್ಷ ರೂ.ಗಳನ್ನು ಪಾವತಿಸಿ ಈ ಕಾರನ್ನು ಮನೆಗೆ ತರಬಹುದಾಗಿದೆ.

ಸದ್ಯ ನೀವು ಕಾರಿನ ಬೇಸ್ ವೆರಿಯಂಟ್ (ಬ್ರೆಝಾ ಎಲ್‌ಎಕ್ಸ್‌ಐ) ಖರೀದಿಸಲು ಬಯಸಿದರೆ ಇದರ ಆನ್ ರೋಡ್ ಬೆಲೆ 9.26 ಲಕ್ಷರೂ.ಗಳಾಗಿವೆ. ನೀವು ಇದನ್ನು ಇಎಂಐನಲ್ಲಿ ಖರೀದಿಸಲು ಬಯಸಿದರೆ, ಇದಕ್ಕಾಗಿ 3 ಲಕ್ಷ ರೂ. ಮುಂಗಡವಾಗಿ ಪಾವತಿಸಿದರೆ, ಇನ್ನುಳಿದ 6.26 ಲಕ್ಷ ರೂ.ಗಳ ಪಾವತಿಗಾಗಿ ನೀವು 1 ರಿಂದ 7 ವರ್ಷಗಳವರೆಗೆ ಸಾಲದ ಅವಧಿಯನ್ನು ಆಯ್ಕೆ ಮಾಡಬಹುದು.

ಒಂದು ವೇಳೆ ನೀವು ಐದು ವರ್ಷಗಳ ಸಾಲದ ಅವಧಿಯನ್ನು ಆರಿಸಿದರೆ ಇದಕ್ಕಾಗಿ ಐದು ವರ್ಷಗಳವರೆಗೆ ನೀವು ಪ್ರತಿ ತಿಂಗಳು 13,313 ರೂಪಾಯಿಗಂಐ ಪಾವತಿಸಬೇಕಾಗುತ್ತದೆ. ನೀವು ಇಎಂಐ ಮೂಲಕ ಕಾರ್ ಖರೀದಿಸಿದರೆ ಹೆಚ್ಚುವರಿಯಾಗಿ 1.72 ಲಕ್ಷ ರೂ. ಗಳನ್ನು ಪಾವತಿಸಬೇಕಾಗುತ್ತದೆ.

ಬಜೆಟ್ ಕೊರತೆಯಿದ್ದಲ್ಲಿ ಇಎಂಐ ಮೂಲಕ ನೀವು 1 ರಿಂದ 7 ವರ್ಷಗಳವರೆಗೆ ಸಾಲದ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಸುಲಭವಾಗಿ ಈ ಕಾರನ್ನು ಖರೀದಿಸಬಹುದಾಗಿದೆ.

ಇದನ್ನೂ ಓದಿ : Tata Harrier SUV : ಗೇಮ್ ಚೇಂಜರ್ ಹ್ಯಾರಿಯರ್ ವಿತರಣೆ ಆರಂಭ ; ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

Leave A Reply

Your email address will not be published.