Electric scooter : ಮಾರುಕಟ್ಟೆಗೆ ಯುಲು, ಬಜಾಜ್ ನ ಎಲೆಕ್ಟ್ರಿಕ್ ಸ್ಕೂಟರ್ ಲಗ್ಗೆ!!!

Bajaj Electric scooter : ಮೊದಲೆಲ್ಲಾ ಪೆಟ್ರೋಲ್ ವಾಹನಗಳೇ ಇದ್ದ ಕಾರಣ ಎಲ್ಲಾ ಅದರತ್ತ ಸಾಗುತ್ತಿದ್ದರು. ಕ್ರಮೇಣ ಇದೀಗ ಎಲೆಕ್ಟ್ರಿಕ್ ವಾಹನಗಳು (electric vehicle) ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಹಾಗಾಗಿ ಈ ವಾಹನಗಳು ಜನರನ್ನು ಎಲ್ಲಾ ರೀತಿಯಲ್ಲೂ ಸೆಳೆದಿದ್ದು, ಜನರು ಇದೀಗ ಎಲೆಕ್ಟ್ರಿಕ್ ವಾಹನದ (Electric scooter) ಖರೀದಿಗೆ ಮುಗಿಬೀಳುತ್ತಿದ್ದಾರೆ.

 

ಸದ್ಯ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ.
ಹಾಗೆಯೇ ಪೆಟ್ರೋಲ್ (petrol), ಡೀಸೆಲ್ ಬೆಲೆ (diesel price) ಕೂಡ ಏರಿಕೆ ಕಂಡಿದೆ. ಈ ಕಾರಣದಿಂದ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದ್ದಾರೆ. ಪೆಟ್ರೋಲ್ ಅಗತ್ಯವೂ ಇಲ್ಲ. ಸುಲಭವಾಗಿ ನಿಭಾಯಿಸಬಹುದಾದ ವಾಹನವಾಗಿದೆ. ಜನರು ಇದರತ್ತ ಮುಖ ಮಾಡಿರುವ ಕಾರಣ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಬಿಡುಗಡೆ ಮಾಡುತ್ತಿವೆ.

ಇದೀಗ ಬಾಡಿಗೆ ಬೈಕ್ ತಯಾರಿಕಾ ಕಂಪನಿಯಾದ ಯೂಲು (yulu) ವಾಹನ ತಯಾರಿಕಾ ದಿಗ್ಗಜ ಬಜಾಜ್ (Bajaj) ಜೊತೆ ಪಾಲುದಾರಿಕೆಯಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ (Bajaj electric scooter) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಹೆಸರು ಜಿ ಆರ್ (GR) ಮತ್ತು ಡಿಕ್ಸ್ ಜಿ ಆರ್ (Dex GR) ಎಂದಾಗಿದೆ. ಇವೆರಡೂ ಚಾಲಕ ಸ್ನೇಹಿ ವಾಹನಗಳಾಗಿದ್ದು, ಸುಗಮ ಚಾಲನೆಗೆ ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ. ಸದ್ಯ ಈ ವಾಹನಗಳು ಜನರನ್ನು ಸೆಳೆಯುವಲ್ಲಿ ನಿರತವಾಗಿವೆ. ಹಾಗೆಯೇ ಜಿ ಆರ್ ಮತ್ತು ಡಿಕ್ಸ್ ಜಿ ಆರ್ ತಮ್ಮ ವೈಶಿಷ್ಟ್ಯ, ವಿನ್ಯಾಸದಿಂದ ಗ್ರಾಹಕರ ಕಣ್ಮನ ಸೆಳೆಯಲಿದೆ.

Leave A Reply

Your email address will not be published.