Sim Card : ನಿಮಗಿದು ತಿಳಿದಿದೆಯೇ? ಸಿಮ್‌ಕಾರ್ಡ್‌ನ ಒಂದು ಮೂಲೆ ಯಾಕೆ ಕತ್ತರಿಸಲಾಗುತ್ತದೆ?
Sim Card: ಇತ್ತೀಚಿನ ದಿನದಲ್ಲಿ ಫೋನ್ ಬಳಸದೇ ಇರುವವರು ಬೆರಳೆಣಿಕೆಯಷ್ಟು ಜನ. ಪ್ರತಿಯೊಬ್ಬರ ಬಳಿಯಲ್ಲೂ ಫೋನ್ ಇದ್ದೇ ಇರುತ್ತದೆ. ಬರೀ ಫೋನ್ ಇದ್ದರೆ ಸಾಕಾಗುತ್ತಾ?? ಅದಕ್ಕೆ ಸಿಮ್ ಕಾರ್ಡ್ (Sim Card) ಬೇಕು ಆಗಲೇ ಫೋನ್ ಬಳಸೋದಿಕ್ಕೆ ಆಗೋದು. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ನೀವು ಗಮನಿಸಿದ್ದೀರಾ? ಸಿಮ್ ಕಾರ್ಡ್ ನ ಒಂದು ಮೂಲೆ ಕತ್ತರಿಸಿರುತ್ತಾರೆ. ಯಾಕೆ ಕತ್ತರಿಸಲಾಗುತ್ತದೆ? ಬಹುಶಃ ಯಾರಿಗೂ ಇದರ ಉತ್ತರ ತಿಳಿದಿರಲಿಕ್ಕಿಲ್ಲ. ಇಲ್ಲಿದೆ ಈ ಬಗ್ಗೆ ಮಾಹಿತಿ.
ಮೊಬೈಲ್ ಗೆ ಸಿಮ್ ಕಾರ್ಡ್ ಅತಿಮುಖ್ಯ. ಮೊಬೈಲ್ ಗೆ (mobile) ಸಿಮ್ ಕಾರ್ಡ್ ಹಾಕುವಾಗ ಸರಿಯಾದ ರೀತಿಯಲ್ಲಿ ಹಾಕಬೇಕು. ಇಲ್ಲವಾದರೆ, ಚಿಪ್ ಗೆ ಹಾನಿಯಾಗುತ್ತದೆ. ಮೊಬೈಲ್ ನಲ್ಲಿನ ಹೋಲ್ಡರ್ ಪಿನ್ ಗೆ ಸಿಮ್ ಕಾರ್ಡ್ ಅನ್ನು ತಪ್ಪಾದ ರೀತಿಯ ಜೋಡಣೆ ಮಾಡಬಾರದು. ತಪ್ಪು ರೀತಿಯಲ್ಲಿ ಜೋಡಣೆ ಆಗಬಾರದೆಂದೇ ಸಿಮ್ ಕಾರ್ಡ್ ನ ಒಂದು ಮೂಲೆ ಕತ್ತರಿಸಲಾಗುತ್ತದೆ.
ಮೊಬೈಲ್ ಫೋನ್ಗಳಲ್ಲಿ ಬಳಸುವ ಸಿಮ್ ಕಾರ್ಡ್ನ ಅಗಲ 25 ಎಂಎಂ, ಉದ್ದ 15 ಎಂಎಂ ಮತ್ತು ದಪ್ಪ 0.76 ಎಂಎಂ ವನ್ನು ಹೊಂದಿದೆ.
ಮೊಬೈಲ್ ಫೋನ್ಗಳಲ್ಲಿ ಸಿಮ್ ಕಾರ್ಡ್ ಅನ್ನು ಸರಿಯಾಗಿ ಇರಿಸಲು ಸಿಮ್ ಕತ್ತರಿಸಲಾಗಿರುತ್ತದೆ. ಕತ್ತರಿಸದೇ ಇದ್ದರೆ ಸಿಮ್ ಕಾರ್ಡಿನ ಸ್ಥಳದಲ್ಲಿ ಸರಿಯಾಗಿ ಇರಿಸಲು ಸಾಧ್ಯವಾಗುವುದಿಲ್ಲ.
ಹಾಗೆಯೇ, ಸಿಮ್ ತಲೆಕೆಳಗಾಗಿದೆಯಾ? ನೇರವಾಗಿದೆಯಾ? ಎಂದು ಗುರುತಿಸುವ ಸಲುವಾಗಿಯೂ ಸಿಮ್ ಕತ್ತರಿಸಲಾಗುತ್ತದೆ. ಸಿಮ್ ಅನ್ನು ತಲೆಕೆಳಗಾಗಿ ಹಾಕಿದರೆ ಅದರ ಚಿಪ್ಗೆ ಹಾನಿಯಾಗಬಹುದು.
ಹಾಗಾಗಿ ಸಿಮ್‌ಕಾರ್ಡ್‌ನ ಒಂದು ಮೂಲೆ ಕತ್ತರಿಸಲಾಗುತ್ತದೆ.