PM Modi Nickname: ಪ್ರಧಾನಿ ಮೋದಿಗೆ ಚೀನಿಯರಿಟ್ಟ ನಿಕ್ ನೇಮ್ ಯಾವುದು? ಅದರ ಅರ್ಥವೇನು ಗೊತ್ತಾ?
PM Modi Nickname :ನಿಕ್ ನೇಮ್(nickname) ಅಥವಾ ಅಡ್ಡ ಹೆಸರು ಯಾರಿಗಿರುವುದಿಲ್ಲ ಹೇಳಿ. ಸಾಧಾರಣವಾಗಿ ಹೆಚ್ಚಿನವರಿಗೆ ಇಂತಹ ಹೆಸರುಗಳು ಇದ್ದೇ ಇರುತ್ತದೆ. ಮನೆಯಲ್ಲಿ ಅಪ್ಪ ಅಮ್ಮ ಒಂದು ಹೆಸರು ಕರೆದರೆ, ಸ್ನೇಹಿತರು ತಾವಾಗೇ ಕರೆಯಲು ಒಂದು ವಿಚಿತ್ರವಾದ ಅಥವಾ ವಿಶೇಷವಾದ ಹೆಸರನ್ನೋ ನಮಗೆ ಇಟ್ಟಿರುತ್ತಾರೆ. ಆದರೆ ಇ ನಿಕ್ ನೇಮ್ ಎಂಬುದು ನಮ್ಮ ಪ್ರಧಾನಿ ಮೋದಿ(PM Modi)ಯವರನ್ನೂ ಕೂಡ ಬಿಟ್ಟಿಲ್ಲ ಅಂದ್ರೆ ನೀವು ನಂಬ್ತೀರಾ. ಅವರಿಗೂ ಒಂದು ವಿಶೇಷವಾದ ಅಡ್ಡಹೆಸರಿದೆ. ಅದೂ ಅಲ್ಲದೆ ಆ ಹೆಸರನ್ನು ಇಟ್ಟವರು ಚೀನಾ ದೇಶದ ಪ್ರಜೆಗಳು!
ಹೌದು, ಸಾದಾ ನಮ್ಮೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ನಮ್ಮ ನೆರೆದೇಶವಾದ ಚೀನಾ(China) ದೇಶದ ಜನ ನಮ್ಮ ಪ್ರಧಾನಿ ಮೋದಿಯವರಿಗೆ ಹೊಸತಾದ ಅಡ್ಡ ಹೆಸರಿಟ್ಟಿದ್ದಾರೆ (PM Modi Nickname). ಈ ಹೆಸರನ್ನು ಹಾಗೂ ಅದರ ಅರ್ಥವನ್ನು ನೀವು ತೀಳಿದರೆ ಈ ಚೀನಾ ಸರ್ಕಾರಕ್ಕಿಂತ ಅಲ್ಲಿನ ಜನ ವಿಭಿನ್ನವಾದ ಆಲೋಚನೆಗಳಿಂದ ಕೂಡಿದ್ದಾರೆ ಎಂದು ನಿಮಗನಿಸುತ್ತದೆ. ಅಲ್ಲದೆ ಅವರು ನಮ್ಮ ಪ್ರಧಾನಿ ಬಗ್ಗೆ ವಿಶೇಷವಾದ ಗೌರವಾಧಾರಗಳನ್ನು ಹೊಂದಿದ್ದಾರೆಂದು ನಮಗನಿಸುತ್ತದೆ. ಹಾಗಾದರೆ ಆ ಹೆಸರಾದರೂ ಏನು?
ಅಂದಹಾಗೆ ಚೀನಾದಲ್ಲಿ ಪ್ರಧಾನಿ ಮೋದಿಗೆ ‘ಲಾವೊಷಿಯಾನ್'(Laotian) ಎಂದು ಕರೆಯುತ್ತಾರಂತೆ. ಚೀನಾದ ಪತ್ರಕರ್ತ ಮು ಸನ್ಶನ್ ಅವರು ‘ದಿ ಡಿಪ್ಲೋಮ್ಯಾಟ್’ ಎಂಬ ಪತ್ರಿಕೆಗೆ ಬರೆದ ತಮ್ಮ ಲೇಖನದಲ್ಲಿ ‘ನರೇಂದ್ರ ಮೋದಿ ಅವರು ಚೀನಾದ ಜನರಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅಲ್ಲಿನ ಜನರು ಅವರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ವಿಶೇಷವಾದ ಗೌರವಾಧಾರಗಳನ್ನು ಹೊಂದಿದ್ದಾರೆ. ಅಲ್ಲದೆ ಚೀನಾದ ಜನರು ಪ್ರಧಾನಿ ಮೋದಿಗೆ ಅಡ್ಡಹೆಸರುಗಳನ್ನು ಸಹ ಇಟ್ಟಿದ್ದಾರೆ’ ಎಂದು ಬರೆದಿದ್ದಾರೆ. ಚು ಸನ್ಶನ್ ಪ್ರಕಾರ, ಚೀನಾದ ಜನರು ಮೋದಿಗೆ ‘ಲಾವೋಷಿಯನ್’ ಎಂದು ಹೆಸರಿಟ್ಟಿದ್ದಾರಂತೆ. ಚೀನೀ ಭಾಷೆಯಲ್ಲಿ, ‘ಲಾವೊಷಿಯಾನ್’ ಎಂದರೆ ಕೆಲವು ಅಸಾಧಾರಣ ಶಕ್ತಿಗಳಿರುವ, ತನ್ನ ಸಂಸ್ಕೃತಿಗೆ ಬದ್ಧನಾಗಿರುವ ವಯಸ್ಸಾದ ಅನುಭವಿ ವ್ಯಕ್ತಿ ಎಂದು ಅರ್ಥ.
ದಿ ಡಿಪ್ಲೊಮ್ಯಾಟ್’ ನಲ್ಲಿ, ಚೀನಾದ ಪತ್ರಕರ್ತ ಮು ಚುನ್ಶನ್ ಅವರು ಚೀನಾದ ಸಾಮಾಜಿಕ ಮಾಧ್ಯಮಕ್ಕೆ ಲಿಂಕ್ ಆಗಿರುವ ಬಗ್ಗೆ ಬರೆದಿದ್ದು ಚೀನೀ ಜನರು ಈ ವೇದಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಭಾರತ ಮತ್ತು ಚೀನಾ ನಡುವಿನ ಸಂಬಂಧವು ಉತ್ತಮವಾಗಿರುತ್ತದೆ ಎಂದು ಚೀನಾದ ಜನರು ನಂಬುತ್ತಾರೆ. ಆದರೆ ಭಾರತವು ಅಮೆರಿಕಗೆ ಹತ್ತಿರವಾಗುವುದನ್ನು ಅವರು ಒಪ್ಪುವುದಿಲ್ಲ ಎಂದು ಚು ಸನ್ಶನ್ ತಮ್ಮ ಬರವಣಿಗೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಬ್ರಾ ಧರಿಸಿಕೊಂಡು ತಾಯಂದಿರು ಮಗುವಿಗೆ ಹಾಲುಣಿಸಬಾರದೇ ? ತಜ್ಞರು ಮಾಹಿತಿ ನೀಡಿದ್ದೇನು ಗೊತ್ತಾ?