Electric Cars: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಇವಿ ಕಾರುಗಳಿವು!

New Electric Cars : ಪೆಟ್ರೋಲ್ ದರ ಏರಿಕೆ ಮತ್ತು ಪೊರೈಕೆ ಅಭಾವದ ಹಿನ್ನೆಲೆಯಲ್ಲಿ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು (Electric Car) ಬಿಡುಗಡೆಗೊಳಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆ ಇದ್ದು ಇದೀಗ ಹೊಸ ಇವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

 

ಭಾರತದಲ್ಲಿ ಹಲವಾರು ಹೊಸ ಕಾರು(New electric Cars) ಮಾರುಕಟ್ಟೆ ಪ್ರವೇಶಿಸಿದ್ದು, ಇದರಲ್ಲಿ ಎಲೆಕ್ಟ್ರಿಕ್ ಕಾರುಗಳು(Electric Cars) ಸಾಮಾನ್ಯ ಕಾರುಗಳನ್ನೇ ಹಿಂದಿಕ್ಕಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಅವುಗಳ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

ಟಿಯಾಗೋ ಎಲೆಕ್ಟ್ರಿಕ್:

ಈ ಕಾರು ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 8.69 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಯುನಿಟ್ ಬುಕಿಂಗ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ 19.2 ಕೆವಿಹೆಚ್ ಮತ್ತು 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಾಗಿದ್ದು, ಇದು ಪ್ರತಿ ಚಾರ್ಜ್ ಗೆ 250 ರಿಂದ 315 ಕಿ.ಮೀ ಮೈಲೇಜ್ ನೀಡುತ್ತದೆ.

ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿ:

ಈ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 12.49 ಲಕ್ಷ ಮತ್ತು 14.49 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಸುಧಾರಿತ ಬ್ಯಾಟರಿ ಆಯ್ಕೆ ಪಡೆದುಕೊಂಡಿವೆ. ಟಿಗೋರ್ ಇವಿ ಮಾದರಿಯು ಪ್ರತಿ ಚಾರ್ಜ್ ಗೆ 306 ಕಿ.ಮೀ ಮೈಲೇಜ್ ನೀಡಿದ್ದಲ್ಲಿ, ನೆಕ್ಸಾನ್ ಇವಿ ಕಾರು 312 ರಿಂದ 453 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ನೆಕ್ಸಾನ್ ಇವಿಯಲ್ಲಿ ಮ್ಯಾಕ್ಸ್ ಆವೃತ್ತಿಯು ಹೆಚ್ಚಿನ ಮೈಲೇಜ್ ನೀಡುತ್ತದೆ.

ಬಿವೈಡಿ ಅಟ್ಟೊ 3:

ಈ ಹೊಸ ಎಲೆಕ್ಟ್ರಿಕ್ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 33.99 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನಗಳ ಪ್ರೇರಣೆ ಹೊಂದಿದ್ದು, 60.48 ಕಿಲೋ ವ್ಯಾಟ್ ಬ್ಲೇಡ್ ಬ್ಯಾಟರಿ ಪ್ಯಾಕ್ ಜೋಡಣೆ ಪಡೆದುಕೊಂಡಿದೆ. ಈ ಮೂಲಕ ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 521 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಹೊಂದಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಫೀಚರ್ಸ್ ಜೋಡಿಸಲಾಗಿದೆ.

ಸಿಟ್ರನ್ ಇಸಿ3:

ಸಿಟ್ರನ್ ಇಸಿ3 ಆವೃತ್ತಿ ಈ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ.11.50 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದು 29.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್ ಗೆ 320 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಕಾರು ಮಾದರಿಯು 56.2 ಹಾರ್ಸ್ ಪವರ್ ಮತ್ತು 143 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಪರ್ಫಾಮೆನ್ಸ್ ಹೊಂದಿದ್ದು, ಇದು ಪ್ರತಿ ಗಂಟೆಗೆ 107 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಮಹೀಂದ್ರಾ ಎಕ್ಸ್ ಯುವಿ400:

ಈ ಹೊಸ ಇವಿ ಕಾರು ಮಾದರಿಯು ಕಳೆದ ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 15.99 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಇದು ಪ್ರತಿ ಚಾರ್ಜ್ ಗೆ 456 ಕಿ.ಮೀ ಮೈಲೇಜ್ ನೀಡಲಿದ್ದು, ನೆಕ್ಸಾನ್ ಇವಿ ಕಾರಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಸದ್ಯ ಕಾರು ಪ್ರಿಯರಿಗಾಗಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ , ಅಧಿಕ ಮೈಲೇಜ್ ಹೊಂದಿರುವ ಈ ಕಾರುಗಳನ್ನು ನೀವು ಆಯ್ಕೆ ಮಾಡಬಹುದಾಗಿದೆ.

Leave A Reply

Your email address will not be published.