Bellare police station: ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಲೋಕಾರ್ಪಣೆ | ಜನರ ಬೇಡಿಕೆಗಳಿಗೆ ಶಾಶ್ವತ ವ್ಯವಸ್ಥೆ; ಎಸ್.ಅಂಗಾರ

Bellare police station:ಸುಳ್ಯ, ಮಾ.13: ಬೆಳ್ಳಾರೆಯಲ್ಲಿದ್ದ ಪೊಲೀಸ್ ಠಾಣೆ(Bellare police station) ಸಣ್ಣದಾಗಿದ್ದರಿಂದ ಅಲ್ಲಿ ವ್ಯವಸ್ಥೆ ಸರಿಯಾಗಿರಲಿಲ್ಲ. ಹೊಸ ಠಾಣಾ ಕಟ್ಟಡ ಆಗಬೇಕೆಂಬ ಬೇಡಿಕೆ ಇತ್ತು. ಆದರೆ ಸರಕಾರ ಬೇಡಿಕೆಯನ್ನು ಶಾಶ್ವತ ವ್ಯವಸ್ಥೆ ಕಲ್ಪಿಸುವ ಮೂಲಕ ಈಡೇರಿಸಿದೆ. ಶಾಶ್ವತ ವ್ಯವಸ್ಥೆಗೆ ಸಮಯ ತಗುಲಬಹುದು. ಆದರೆ ಸರಕಾರ ಸದಾ ಶಾಶ್ವತ ಪರಿಹಾರ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

 

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡವನ್ನು ಅವರು ಸೋಮವಾರ ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪೊಲೀಸ್ ಠಾಣೆಗಳು ಕಡಿಮೆ ಆಗಬೇಕಿದೆ. ಅದಾಗಲೇ ಜನರಲ್ಲಿ ಭಾವನೆ ಬದಲಾಗಲು ಸಾಧ್ಯ. ವಿದ್ಯಾವಂತರ ಸಂಖ್ಯೆ ಹೆಚ್ಚಳವಾಗುತ್ತಿದೆ, ಪ್ರಕರಣಗಳು ಹೆಚ್ಚಳವಾಗುತ್ತಿದೆ. ಯಾಕೆ ಈ ರೀತಿ ಆಗುತ್ತಿದೆ ಎಂಬ ಬಗ್ಗೆ ಯೋಚನೆ ಮಾಡಬೇಕಾದ ಅಗತ್ಯತೆ ಇದೆ ಎಂದರು. ಬೆಳ್ಳಾರೆ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ 3.5 ಕೋಟಿ ವೆಚ್ಚದಲ್ಲಿ ಪೊಲೀಸರ ವಸತಿ ನಿರ್ಮಾಣವಾಗಲಿದೆ ಎಂದ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಣಕ್ಕೂ ಚಾಲನೆ ನೀಡಲಾಗಿದ್ದು ಕಾಮಗಾರಿ ಆರಂಭಗೊಂಡಿದೆ ಎಂದರು.
ಬದಲಾವಣೆ, ಸಹಕಾರ ಅಗತ್ಯ:-
ಇಂದು ಸರಕಾರಿ ಜಾಗಗಳ ಒತ್ತುವರಿಯಾಗುತ್ತಿದೆ. ಕಂದಾಯ ಇಲಾಖೆಯೇ ಬೇರೆ ಇಲಾಖೆಗಳಿಗೆ ಜಾಗ ನೀಡಬೇಕು. ಆದರೆ ಎಷ್ಟೋ ಕಡೆಗಳಲ್ಲಿ ಗ್ರಾಮ ಕರಣಿಕರ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಜಾಗ ಇಲ್ಲ ಎಂಬ ಸ್ಥಿತಿ ಕಾಣಬಹುದು. ನಾವು ಬದಲಾವಣೆ ಆಗಬೇಕು. ಯಾವುದೇ ಜಾಗ ಒತ್ತುವರಿ ಅಗದಂತೆ ನೋಡಿಕೊಳ್ಳಲು ಸಹಕಾರ ನೀಡಬೇಕಿದೆ ಎಂದರು.
ಸುಳ್ಯ ಪ್ರಭಾರ ತಹಶೀಲ್ದಾರ್ ಜಿ.ಮಂಜುನಾಥ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಮಟೆ ವಿಕ್ರಮ್ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಮ್.ಎನ್. ವಂದಿಸಿದರು. ಬೆಳ್ಳಾರೆ ಪೊಲೀಸ್ ಅಧಿಕಾರಿ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರ

Leave A Reply

Your email address will not be published.