High paid heroines: ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆವ ಬಾಲಿವುಡ್​ ಬೆಡಗಿಯರಿವರು! ಇವರ ಸಂಬಳ ಕೇಳಿದ್ರೆ ನೀವೇ ಹೌಹಾರುತ್ತೀರ!

High paid heroines :ಚಿತ್ರರಂಗದಲ್ಲಿ ನಟಿಯರಿಗಿಂತ ನಟರದ್ದೇ ಕ್ರೇಜ್ ಜಾಸ್ತಿ ಅನ್ಬೋದು. ಯಾವುದಾದರೂ ಹೊಸ ಸಿನಿಮಾ ಬಂತೆಂದರೆ ಅದರ ಹೀರೋ ಯಾರೆಂದು ನೋಡುತ್ತೇವೆಯೇ ಹೊರತು ಹೀರೋಯಿನ್ ಯಾರೆಂದು ಯಾರ ಗಮನಿಸೋದಿಲ್ಲ. ಇನ್ನು ಸಂಭಾವನೆ ವಿಚಾರದಲ್ಲೂ ಕೂಡ ಚಿತ್ರಗಳಲ್ಲಿ ನಾಯಕಿಗಿಂತ ನಾಯಕನಿಗೆ ಸಂಭಾವನೆ ಹೆಚ್ಚು. ಇದು ಸಾಮಾನ್ಯ ಸಂಗತಿ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವೊಂದು ಚಿತ್ರಗಳಲ್ಲಿ ನಾಯಕನಿಗಿಂತ, ನಾಯಕಿಯೇ ಹೆಚ್ಚು ಸಂಭಾವನೆ ಪಡೆದಿದ್ದಾರೆ (High paid heroines). ಅಂಥ ಬಾಲಿವುಡ್​ ಬೆಡಗಿಯರು ಯಾರು ಗೊತ್ತಾ?

 

ಕರೀನಾ ಕಪೂರ್ (Kareena Kapoor), ಮಾಧುರಿ ದೀಕ್ಷಿತ್: 1994ರಲ್ಲಿ ಸೂರಜ್ ಬರ್ಜತ್ಯಾ ನಿರ್ದೇಶನದಲ್ಲಿ ತೆರೆಕಂಡ ಸಿನಿಮಾ ‘ಹಮ್ ಆಪ್ಕೆ ಹೈ ಕೌನ್’. ಈ ಚಿತ್ರಕ್ಕಾಗಿ ಮಾಧುರಿ ದೀಕ್ಷಿತ್ (Madhuri Dixit) ತಮ್ಮ ಸಹ ನಟ ಸಲ್ಮಾನ್ ಖಾನ್‌ಗಿಂತ ಹೆಚ್ಚು ಶುಲ್ಕವನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಹೌದು ಈ ಚಿತ್ರಕ್ಕಾಗಿ ಮಾಧುರಿ ಸುಮಾರು 3 ಕೋಟಿ ಸಂಭಾವನೆ ಪಡೆದಿದ್ದರಂತೆ. ಸಲ್ಮಾನ್ ಸಂಭಾವನೆ 2.75 ಕೋಟಿ ಎಂದು ಹೇಳಲಾಗುತ್ತಿದೆ. ಇನ್ನು ‘ವೀರೆ ದಿ ವೆಡ್ಡಿಂಗ್’ ಚಿತ್ರಕ್ಕಾಗಿ ಕರೀನಾ ಕಪೂರ್ ಬರೋಬ್ಬರಿ 7 ಕೋಟಿ ಸಂಭಾವನೆ ಪಡೆದಿದ್ರು. ಆದರೆ ಈ ಚಿತ್ರದಲ್ಲಿ ಅವರ ಸಹ ನಟ ಸುಮಿತ್ ವ್ಯಾಸ್ ಅವರ ಸಂಭಾವನೆ ಕೇವಲ 80 ಲಕ್ಷ ರೂ. ಅದರಂತೆ ಕರೀನಾ ಅವರ ಶುಲ್ಕ ಸುಮಿತ್ ಅವರಿಗಿಂತ 8.75 ಪಟ್ಟು ಹೆಚ್ಚಾಗಿತ್ತು.

ಕಂಗನಾ ರಣಾವತ್ (Kangana Ranaut)​, ಶ್ರದ್ಧಾ ಕಪೂರ್​: ಕಂಗನಾ ರಣಾವತ್​ ಅನೇಕ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅನೇಕ ಚಿತ್ರಗಳಲ್ಲಿ ಅವರು ತಮ್ಮ ಸಹ ನಟರಿಗಿಂತ ಹೆಚ್ಚು ಶುಲ್ಕವನ್ನು ಪಡೆದಿದ್ದಾರೆ. ‘ರಂಗೂನ್’ ಚಿತ್ರಕ್ಕೆ ಶಾಹಿದ್ ಕಪೂರ್ ಮತ್ತು ಸೈಫ್ ಅಲಿ ಖಾನ್, ‘ಕಟ್ಟಿ ಬಟ್ಟಿ’ ಚಿತ್ರಕ್ಕೆ ಇಮ್ರಾನ್ ಖಾನ್ ಅವರಿಗಿಂತ ಹೆಚ್ಚು ಶುಲ್ಕ ವಿಧಿಸಿದ್ದರು ಎನ್ನಲಾಗಿದೆ. ಆದರೆ, ಅವರ ಶುಲ್ಕ ಎಷ್ಟು ಎಂಬುದು ಬಹಿರಂಗವಾಗಿಲ್ಲ. ಇನ್ನು ಶ್ರದ್ಧಾ ಕಪೂರ್ (Shraddha Kapoor)​. ದಿನೇಶ್ ವಿಜನ್ ಅವರ ‘ಸ್ತ್ರೀ’ ಚಿತ್ರದಲ್ಲಿ ಶ್ರದ್ಧಾ ಕಪೂರ್ ಪ್ರಮುಖ ಪಾತ್ರವನ್ನು ಹೊಂದಿದ್ದರು, ಅವರ ಎದುರು ರಾಜಕುಮಾರ್ ರಾವ್ ಕಾಣಿಸಿಕೊಂಡರು. ಈ ಚಿತ್ರಕ್ಕಾಗಿ ರಾಜ್‌ಕುಮಾರ್‌ಗಿಂತ ಹೆಚ್ಚು ಶುಲ್ಕವನ್ನು ಶ್ರದ್ಧಾ ಪಡೆದುಕೊಂಡಿದ್ದಾರೆ. ಶ್ರದ್ಧಾ ಪಡೆದದ್ದು ಏಳು ಕೋಟಿ ರೂಪಾಯಿ ಎನ್ನಲಾಗಿದೆ. ಅದೇ ಸಮಯದಲ್ಲಿ, ‘ಚಿಚೋರೆ’ ಚಿತ್ರಕ್ಕೆ ಅವರ ಸಂಭಾವನೆ ಅವರ ಸಹ-ನಟ ಸುಶಾಂತ್ ಸಿಂಗ್ ರಜಪೂತ್‌ಗಿಂತ ಹೆಚ್ಚು.

ದೀಪಿಕಾ ಪಡುಕೋಣೆ (Deepika Padukone), ಆಲಿಯಾ ಭಟ್​: ‘ರಾಜಿ’ ಚಿತ್ರಕ್ಕಾಗಿ ಆಲಿಯಾ ಭಟ್ (Alia Bhatt) ತಮ್ಮ ಸಹ ನಟ ವಿಕ್ಕಿ ಕೌಶಲ್‌ಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರಕ್ಕಾಗಿ, ಆಲಿಯಾ ಭಟ್ ಸುಮಾರು 10 ಕೋಟಿ ರೂಪಾಯಿಗಳನ್ನು ತೆಗೆದುಕೊಂಡರೆ, ಈ ಚಿತ್ರಕ್ಕಾಗಿ ವಿಕ್ಕಿ ಕೌಶಲ್ ಅವರ ಸಂಭಾವನೆಯು ಸುಮಾರು 3 .4 ಕೋಟಿ ರೂಪಾಯಿಯಾಗಿದೆ. ಇನ್ನು ದೀಪಿಕಾ ಪಡುಕೋಣೆ ಬಾಲಿವುಡ್‌ನ ದುಬಾರಿ ನಟಿಯರಲ್ಲಿ ಒಬ್ಬರು. ಒಂದು ಚಿತ್ರದಲ್ಲಿ ಪತಿ ರಣವೀರ್ ಸಿಂಗ್ ಗಿಂತ ಹೆಚ್ಚು ತೆಗೆದುಕೊಂಡಿದ್ದಾರೆ. ‘ಪದ್ಮಾವತ್’ ಚಿತ್ರದ ಬಗ್ಗೆ ಮಾತನಾಡು ವುದಾದರೆ, ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕಾಗಿ ದೀಪಿಕಾ ಸುಮಾರು 13 ಕೋಟಿ ರೂಪಾಯಿಗಳನ್ನು ಪಡೆದರೆ, ಅವರ ಸಹ ನಟರಾದ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಇಬ್ಬರೂ ಚಿತ್ರದಲ್ಲಿ ಸಂಭಾವನೆಯಾಗಿ 10 ಕೋಟಿ ಪಡೆದರು.

 

ಇದನ್ನೂ ಓದಿ: ಪ್ರಧಾನಿ ಮೋದಿಗೆ ಚೀನಿಯರಿಟ್ಟ ನಿಕ್ ನೇಮ್ ಯಾವುದು? ಅದರ ಅರ್ಥವೇನು ಗೊತ್ತಾ?

Leave A Reply

Your email address will not be published.