Electric Scooter Offer : ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಿ ಭರ್ಜರಿ 30 ಸಾವಿರ ಮೌಲ್ಯದ ಎಲೆಕ್ಟ್ರಿಕ್ ಸೈಕಲ್ ಫ್ರೀಯಾಗಿ ಪಡೆಯಿರಿ!
Electric scooter offers: ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದ್ದೀರಾ ಹಾಗಾದರೆ ಇಲ್ಲಿ ನಿಮಗೆ ಭರ್ಜರಿ ಕೊಡುಗೆ (Electric scooter offers)ಒಂದು ಕಾದಿದೆ. ಪ್ರಸ್ತುತ ಪೆಟ್ರೋಲ್-ಡೀಸೆಲ್ ದರಗಳು ಏರಿಕೆ ಆಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಜನರು(Electric scooter offer) ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಒಲವು ತೋರಿಸುತ್ತಿದ್ದಾರೆ.
ಅದರಲ್ಲೂ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric scooter offer)ಖರೀದಿಸಿದ್ರೆ ಉಚಿತ ರೂ. 30 ಸಾವಿರ ಮೌಲ್ಯದ ಎಲೆಕ್ಟ್ರಿಕ್ ಬೈಸಿಕಲ್ (ಇವಿ) ಗೆಲ್ಲಲು ಒಂದು ಅವಕಾಶ ಲಭ್ಯವಿದೆ.
ಗ್ರೀವ್ಸ್ ಕಾಟನ್ ಒಡೆತನದ ಗ್ರೀವ್ಸ್ ರಿಟೇಲ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಖರೀದಿಯ ಮೇಲೆ ಕೊಡುಗೆಯನ್ನು ಘೋಷಿಸಿದೆ. ಗ್ರೀವ್ಸ್ ರಿಟೇಲ್ ಶೋರೂಮ್‌ಗೆ ಭೇಟಿ ನೀಡುವ ಮೂಲಕ ಈ ಕೊಡುಗೆಯನ್ನು ನೀವು ಪಡೆಯಬಹುದು.
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಇತರ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಯೋಚಿಸುತ್ತಿರುವವರು ಈ ಸ್ಕೂಟರ್ ಅನ್ನು ಪರಿಶೀಲಿಸಬಹುದು. ಕಂಪೆನಿಯು ಫೇಸ್‌ಬುಕ್ ಮೂಲಕ ಈ ಕೊಡುಗೆಯ ಮಾಹಿತಿಯನ್ನು ಪ್ರಕಟಿಸಿದೆ.
ಗ್ರೀವ್ಸ್ ಕಾಟನ್ ಕಂಪೆನಿಯು (company )ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ ಅವುಗಳೆಂದರೆ Zeal EX, Magnus, Primus. ಆಂಪಿಯರ್ ಬ್ರಾಂಡ್ ಅಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಿದೆ.
ಸದ್ಯ ಕಂಪೆನಿಯು ಇತ್ತೀಚೆಗೆ ಆಂಪಿಯರ್ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಗರಿಷ್ಠ ವೇಗ ಗಂಟೆಗೆ 77 ಕಿಲೋಮೀಟರ್. ಕೇವಲ 4.2 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಹೆಚ್ಚಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 107 ಕಿಲೋಮೀಟರ್ವರೆಗೆ ಹೋಗಬಹುದು.
ಈ ವಾಹನದಲ್ಲಿ 48V 3KW ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಇನ್ನು ಈ ಸ್ಕೂಟರ್ನಲ್ಲಿ ವಿಶೇಷವಾಗಿ ರೈಡಿಂಗ್ ಮೋಡ್‌ಗಳು ಇಕೋ, ಸಿಟಿ, ಪಿಡಬ್ಲ್ಯೂಆರ್ ಮತ್ತು ರಿವರ್ಸ್ ಆಯ್ಕೆಗಳೂ ಇವೆ. ಕಾಂಬಿ ಬ್ರೇಕಿಂಗ್ ಸಿಸ್ಟಂ ಸಹ ಇದೆ. ಇದರ ಬೆಲೆ 1,09,900 ರೂಪಾಯಿ ಆಗಿದೆ.
ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ. 82 ಸಾವಿರ. ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ನೀವು ಅಗ್ಗದ ಬಡ್ಡಿ ದರದಲ್ಲಿ ಸಾಲವನ್ನು ಸಹ ಪಡೆಯಬಹುದು. ಬಡ್ಡಿ ದರವು 8.99 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
ಝೀಲ್ ಎಲೆಕ್ಟ್ರಿಕ್ ಸ್ಕೂಟರ್ ವ್ಯಾಪ್ತಿಯು 80 ರಿಂದ 100 ಕಿಲೋಮೀಟರ್ ಆಗಿದೆ. ಬ್ಯಾಟರಿ ಚಾರ್ಜ್ ಮಾಡಲು ಸುಮಾರು 5 ಗಂಟೆ ತೆಗೆದುಕೊಳ್ಳುತ್ತದೆ. ಇದರ ಬೆಲೆ ರೂ. 69,900. ಇದರ ಗರಿಷ್ಠ ವೇಗ ಗಂಟೆಗೆ 55 ಕಿ.ಮೀ.
ವಿಶೇಷವಾಗಿ ಗ್ರೀವ್ಸ್ ಕಾಟನ್ ರಿಟೇಲ್ ಕಂಪೆನಿಯು ಬಹು-ಬ್ರಾಂಡ್ EV ಪ್ಲಾಟ್‌ಫಾರ್ಮ್ ಆಗಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು, ಎಲೆಕ್ಟ್ರಿಕ್ ಬೈಕ್‌ಗಳು, ಎಲೆಕ್ಟ್ರಿಕ್ ಬೈಸಿಕಲ್‌ಗಳು ಮತ್ತು ವಿವಿಧ ಕಂಪೆನಿಗಳ ಎಲೆಕ್ಟ್ರಿಕ್ ಆಟೋಗಳು ಈ ಶೋ ರೂಂನಲ್ಲಿ ಲಭ್ಯವಿದೆ.
ಸದ್ಯ ಈ ಮೇಲಿನ ಕೊಡುಗೆ ಸೀಮಿತ ಅವಧಿಯ ಕೊಡುಗೆಯಾಗಿದೆ. ಆದ್ದರಿಂದ, ಒಂದು ವೇಳೆ ತಡವಾದರೆ ಆಫರ್ ಲಭ್ಯವಾಗದಿರಬಹುದು.
ಇದನ್ನೂ ಓದಿ :Clean Gold : ಈ ಟ್ರಿಕ್ಸ್ ಯೂಸ್ ಮಾಡಿ ಚಿನ್ನ, ಬೆಳ್ಳಿ ಆಭರಣ ಕ್ಲೀನ್ ಮಾಡಿ! ಮಿಂಚುತ್ತೆ!!!