CT Ravi : ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕೊಟ್ಟಿದ್ದು ಕಾಂಗ್ರೆಸ್- ಸಿ ಟಿ ರವಿ

C.T Ravi: ಚುನಾವಣೆಯ(Election) ಕಾವು ಗದಿಗೇರುವ ಮುನ್ನ ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ವಾಕ್ಸಮರ ನಡೆಯೋದು ಮಾಮೂಲಿ. ಇದೀಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ (C. T. Ravi) ಪ್ರತಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ಸಿಎಂ(CM) ಕುರ್ಚಿಗಾಗಿ ತೀವ್ರ ಕಸರತ್ತು ನಡೆಯುತ್ತಿದ್ದು ಸಿದ್ದು ಮತ್ತು ಡಿಕೆಶಿ ನಡುವೆ ಪೈಪೋಟಿ ನಡೆಯುತ್ತಿರುವುದು ಜಗತ್ತಿಗೆ ತಿಳಿದಿದೆ. ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ (Siddaramaiah)ಅವರನ್ನು ಹರಕೆಗೆ ನೀಡುವ ಕುರಿಯಂತೆ ಬಳಕೆ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನರ ಸಂಪೂರ್ಣ ಬೆಂಬಲ (Support)ಇರುವ ಬಗ್ಗೆ ಬಿಜೆಪಿಯ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದು, ಈಗಾಗಲೇ ಮೂರು ಕ್ಷೇತ್ರಗಳ ಲ್ಲಿ ಬಿಜೆಪಿಯ ಶಾಸಕರಿರುವುದಲ್ಲದೆ ಕೊಪ್ಪಳ ಮುಂದಿನ ಚುನಾವಣೆಯ ಐದು ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಕುರಿತು ಕೊಪ್ಪಳದ ಬಿಜೆಪಿ( BJP)ನಾಯಕರು ನಿರೀಕ್ಷೆ ( Hope) ಇಟ್ಟುಕೊಂಡಿದ್ದಾರೆ.

ಕೊಪ್ಪಳ (Koppala)ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ವೇಳೆ ಸಿ. ಟಿ. ರವಿ (C.T Ravi) ಕಾಂಗ್ರೆಸ್ ( Congress) ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ವಿದ್ಯುತ್‌ ಖಾತೆ ಸಚಿವರಾಗಿದ್ದ ಸಂದರ್ಭದಲ್ಲಿಯೇ ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದವರು ಈಗ ಈಗ ಉಚಿತ ವಿದ್ಯುತ್‌ (Free Electricity)ನೀಡುತ್ತೇವೆ ಎಂದರೆ ಯಾರಾದರೂ ನಂಬಲು ಸಾಧ್ಯವೇ? ಕಾಂಗ್ರೆಸ್ ಇಲ್ಲಿಯವರೆಗೂ ಮೋಸ(Spam), ವಂಚನೆ ಮಾಡುವ ಕಡೆಗೆ ಗಮನ ನೀಡುತ್ತಿದೆಯೆ ಹೊರತು ದೇಶದ ಹಿತ ಕಾಪಾಡುವ ಕಡೆ ಗಮನವೇ ನೀಡುವುದಿಲ್ಲ. ಇದಲ್ಲದೆ, ಭಯೋತ್ಪಾದಕರಿಗೆ (Terrorists) ಬಿರಿಯಾನಿ( Biriyani)ಭಾಗ್ಯ ಕರುಣಿಸಿದಂತಹ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಪ್ರಜಾಪ್ರಭುತ್ವದ ಕುರಿತಂತೆ ಮಾತನಾಡುವ ಯಾವ ನೈತಿಕತೆ ಇದೆ? ಎಂದು ಸಿ. ಟಿ ರವಿ ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ.

ಇಡೀ ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದು, ಅಲ್ಲಿ ಯಾವ ಗ್ಯಾರಂಟಿ ಕಾರ್ಡ್‌ ನೀಡಿಲ್ಲ. ಇನ್ನೂ ಅಧಿಕಾರದಲ್ಲಿ ಇಲ್ಲದಿರುವ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ನೀಡುತ್ತಿದೆ ಎಂದು ಬಿಜೆಪಿ ನಾಯಕರು( BJP Leaders) ಲೇವಡಿ ಮಾಡಿದ್ದಾರೆ.ಮತದಾರರು ನೀವೇನೇ ಕಥೆ ಹೇಳಿದರು ಕೂಡ ನಂಬುವಷ್ಟು ದಡ್ಡರಲ್ಲ. ಇನ್ನು ಕಾಂಗ್ರೆಸ್‌ ಪಕ್ಷದ ವತಿಯಿಂದ ಗ್ಯಾರಂಟಿ ಕಾರ್ಡ್‌ ವಿತರಣೆ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದ್ದು ಇದೊಂದು ಸುಳ್ಳು ದಾಖಲೆಯಾಗಿದ್ದು, ಮತದಾರರ ಮನವೊಲಿಸುವ ಪ್ರಯತ್ನವಷ್ಟೆ. ನಿಮ್ಮ ಸರ್ಕಾರವಿದ್ದಾಗ ಜನರಿಗೆ ಯಾವುದೇ ಭದ್ರತೆ ನೀಡಿಲ್ಲ. ಹಾಗಿದ್ದ ಮೇಲೆ, ಈಗ ಗ್ಯಾರಂಟಿ ಕಾರ್ಡ್‌ ನೀಡಿದರೆ ಜನರು ನಂಬುತ್ತಾರೆಯೇ ಎಂದು ಕೊಪ್ಪಳದಲ್ಲಿ ಬಿಜೆಪಿ ನಾಯಕರು ಪ್ರತಿಪಕ್ಷ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ್ದಾರೆ.

K S Eshwarappa: ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು! ಮೈಕ್ ನಲ್ಲಿ ಕೂಗಿದರೇ ಅಲ್ಲಾಗೆ ಕಿವಿ ಕೇಳೋದಾ?: ಆಝಾನ್ ವಿರುದ್ಧ ಗುಡಿಗಿದ ಈಶ್ವರಪ್ಪ

Leave A Reply

Your email address will not be published.