Bride Viral Video : ಮದುವೆ ಶಾಸ್ತ್ರ ನಡೆಯುತ್ತಿರುವಾಗಲೇ ನಿದ್ದೆಗೆ ಜಾರಿದಳು ವಧು! ವರ ಏನು ಮಾಡಿದ ಗೊತ್ತೇ?

Bride Viral Video : ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ವೀಡಿಯೋ(Viral Video) ಎಲ್ಲೆಡೆ ಟ್ರೆಂಡ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಇದೀಗ ಮದುವೆ ಮಂಟದಲ್ಲಿ ವಧು ಮಾಡಿದ ಕೆಲಸವೊಂದು ವೈರಲ್‌ ಆಗಿದ್ದು, ವಧುವಿನ ಅವಸ್ಥೆ ನೋಡಿ ನೆಟ್ಟಿಗರು ಹೀಗೂ ಉಂಟೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

ಮದುವೆ ಎಂದರೆ ಸಹಜವಾಗಿ ವಧು ವರರ ಪಾಲಿಗೆ ವಿಶೇಷವಾದ ದಿನ. ವಧು ವರರ ಪಾಲಿಗೆ ಪ್ರತಿ ಕ್ಷಣಗಳು ಕೂಡ ಅವಿಸ್ಮರಣೀಯ ಆನಂದವನ್ನು ಉಂಟು ಮಾಡುತ್ತವೆ. ಮದುವೆಯ ವಿಧಿವಿಧಾನಗಳ ನಡುವೆ ವಧುವೊಬ್ಬಳು ನಿದ್ರೆಗೆ (Bride Viral Video)ಜಾರಿದ ಘಟನೆ ವೈರಲ್ ಆಗಿದೆ.

ಮದುವೆಯ( Marriage) ದಿನದಂದು ಸಂಪೂರ್ಣವಾಗಿ ವಧು ವರರ(Groom) ಪಾಡು ಹೇಳತೀರದು. ಉಳಿದ ದಿನಗಳಿಗೆ ಹೋಲಿಸಿದರೆ ಮದುವೆಯ ಸಮಾರಂಭದ ನಡುವೆ ವಧು ವರರು ಸುಸ್ತಿನ ಅವಸ್ಥೆಯಲ್ಲಿ ಹೈರಾಣಾಗಿ ಹೋಗಿರುತ್ತಾರೆ. ಕೆಲವೊಮ್ಮೆ ಇಬ್ಬರೂ ಮಂಟಪದಲ್ಲಿ ಆಕಳಿಸುವುದನ್ನು ಗಮನಿಸಿರ ಬಹುದು.ಇದೀಗ, ವೈರಲ್ ಆಗಿರುವ ವೀಡಿಯೋದಲ್ಲಿ ವಧು ನಿದ್ರಿಸುವ(Sleeping) ದೃಶ್ಯ ನೋಡುಗರಿಗೆ ಹಾಸ್ಯಾಸ್ಪದ ಎನಿಸುತ್ತಿದೆ. ಈ ವಿಡಿಯೋವನ್ನು Instagram ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ.

ಮದುವೆ ದಿನ (Marriage Ceremony)ವಧು ವರನ ಪ್ರತಿ ಚಲನವಲನ ಗಳು ಫೋಟೋ ವಿಡಿಯೋಗಳಲ್ಲಿ ಸೇರೆಯಾಗುತ್ತದೆ. ಅಷ್ಟೆ ಏಕೆ ನಮ್ಮ ನೆಚ್ಚಿನ ಸ್ಥಳದಲ್ಲೇ ಪ್ರೀ ವೆಡ್ಡಿಂಗ್ ಶೂಟ್ (Pre -Wedding Shoot) ಮತ್ತು ಮದುವೆ ದಿನ ಕೂಡ ವಿಶೇಷ ಕಾಳಜಿ ವಹಿಸಿ ನಮ್ಮ ವಿಶೇಷ ದಿನಕ್ಕೆ ಕಾಲಿಟ್ಟ ನೆನಪನ್ನು ಮೆಲುಕು ಹಾಕಲು ಪ್ರತಿ ಫೋಟೋ ತೆಗೆಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಸಹಜವಾಗಿ ಮದುವೆ ಎಂದಾಗ ವಿಧಿ ವಿಧಾನಗಳು ಹೆಚ್ಚಿದ್ದು, ವಧು ವರರು ಕುಳಿತು ಕೆಲ ಶಾಸ್ತ್ರಗಳನ್ನ ಮಾಡುವುದು ವಿಡಿಯೋದಲ್ಲಿ(Video) ಕಾಣುತ್ತದೆ. ಈ ಸಂದರ್ಭ ವಧು ವಿಧಿ ವಿಧಾನಗಳ ನಡುವೆ ನಿದ್ರೆಗೆ ಜಾರಿದ್ದು, ವರನು ತನ್ನ ಕೈಯಿಂದ ವಧುವನ್ನು ತಿವಿದು ಎಚ್ಚರಿಸಿದ ದೃಶ್ಯ( Bride Viral Video)ವಿಡಿಯೋದಲ್ಲಿ ಸೆರೆಯಾಗಿದೆ.

ಈ ವೇಳೆ ವಧುವಿಗೆ ಎಚ್ಚರವಾಗಿ ಸುತ್ತಲೂ ಕಣ್ಣು ಹಾಯಿಸಿ ಸುಂದರ ನಗು ( Smile) ನೀಡಿದ್ದಾಳೆ. ಈ ಸಂಪೂರ್ಣ ದೃಶ್ಯವನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾರೆ. ಸದ್ಯ, ಈ ವೀಡಿಯೊ ವೈರಲ್ ಆಗಿದ್ದು, ಮದುವೆ ಜಂಜಾಟದ ನಡುವೆ ವೀಡಿಯೋ ಮಾಡಿದ ವ್ಯಕ್ತಿ ವಧುವಿನ(Bride) ನಿದ್ರಾಭಂಗಿ ಯನ್ನೂ ಗಮನಿಸಿ ವರನಿಗೆ ತಿಳಿಸಿದ್ದು, ನೆಟ್ಟಿಗರು ವಧುವಿನ ಅವಸ್ಥೆ ನೋಡಿ ಏನಮ್ಮಾ ನಿನ್ನ ವರಸೆ? ಎಂದು ಪ್ರಶ್ನಿಸಿದರು ಅಚ್ಚರಿಯಿಲ್ಲ. ಈ ವೀಡಿಯೊ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದು ವಧುವಿನ ಕಾಲೆಳೆಯುವ ಪ್ರಯತ್ನ ಕೂಡ ನಡೆಸಿದ್ದಾರೆ.

https://www.instagram.com/reel/CpWuTqJBFGH/?utm_source=ig_embed&utm_campaign=loading

Leave A Reply

Your email address will not be published.