ದಕ್ಷಿಣ ಕನ್ನಡ : ಪಿಕಪ್ -ಓಮ್ನಿ ಡಿಕ್ಕಿ ,ಓಮ್ನಿ ಚಾಲಕ ಮೃತ್ಯು

Mangalore -Bengalore Highway  :ಮಂಗಳೂರು: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ (Mangalore -Bengalore Highway) ತಲಪಾಡಿ ಎಂಬಲ್ಲಿ ಪಿಕಪ್ ವಾಹನ ಹಾಗೂ ಓಮ್ನಿ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ  ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಮೃತಪಟ್ಟಿದ್ದಾರೆ.

 

ಮೃತರನ್ನು ಬ್ರಹ್ಮರಕೂಟ್ಲು ನಿವಾಸಿ ರಾಜೇಶ್ ಶೆಟ್ಟಿ (50) ಎಂದು ಗುರುತಿಸಲಾಗಿದೆ.

ವಿರುದ್ಧ ದಿಕ್ಕಿನಲ್ಲಿ ಬಂದ ಪಿಕಪ್ ವಾಹನ ಓಮ್ನಿ ಕಾರಿಗೆ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಿ ದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ರಾಜೇಶ್ ಶೆಟ್ಟಿ ಅವರ ಮನೆಯ ಸಾಕುಬೆಕ್ಕಿಗೆ ಉಷಾರಿಲ್ಲದ ಕಾರಣ ಬೆಕ್ಕನ್ನು ವೈದ್ಯರ ಬಳಿ ಪರೀಕ್ಷೆ ನಡೆಸಿ, ಔಷಧಿಯ ಜೊತೆಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ತಲಪಾಡಿ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಬೆಕ್ಕು ಸ್ಥಳದಲ್ಲಿಯೇ ಸಾವಿಗೀಡಾಗಿದೆ.

Leave A Reply

Your email address will not be published.