Smartphone: ಈ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಈ ಸ್ಮಾರ್ಟ್ ಫೋನ್ ಗಳು ; ಫೀಚರ್ ಸೂಪರ್!!!

Share the Article

Smartphones: ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್ ಫೋನ್ ಗಳು (smartphones) ಎಂಟ್ರಿ ಕೊಡುತ್ತಿವೆ. ಅದ್ಭುತ ವೈಶಿಷ್ಟ್ಯತೆ, ಆಕರ್ಷಣೀಯ ಬಣ್ಣ, ಅತ್ಯುತ್ತಮ ಫೀಚರ್ ನೊಂದಿಗೆ ಜನರನ್ನು ಸೆಳೆಯುತ್ತಿವೆ. ಈಗಾಗಲೇ ಹಲವಾರು ಕಂಪನಿಗಳು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿವೆ. ಹಾಗೇ ಈ ತಿಂಗಳಿನಲ್ಲಿ ಸಾಕಷ್ಟು ಫೋನ್ ಲಾಂಚ್ ಆಗಲಿದೆ. ಹಾಗಿದ್ರೆ ಮಾರ್ಚ್ ತಿಂಗಳಿನಲ್ಲಿ ಯಾವೆಲ್ಲಾ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ? ಎಂಬುದರ ಮಾಹಿತಿ ನೋಡೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A34 ಫೋನ್‌ (samsung galaxy A34) : ಈ ಫೋನ್ ಮಾರ್ಚ್ 15 ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ ಎನ್ನಲಾಗಿದೆ. ಗ್ಯಾಲಕ್ಸಿ A34 6.6 ಇಂಚಿನ ಡ್ಯೂಡ್ರಾಪ್-ನೋಚ್ಡ್ ಡಿಸ್‌ಪ್ಲೇ ಹೊಂದಿದ್ದು, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಚಿಪ್ ಪ್ರೊಸೆಸರ್‌ ಪಡೆದಿದೆ. ಕ್ಯಾಮೆರಾದಲ್ಲಿ, 48 ಮೆಗಾ ಪಿಕ್ಸಲ್‌ (mega pixel) ಪ್ರಾಥಮಿಕ ಕ್ಯಾಮೆರಾ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 (samsung galaxy A54): ಗ್ಯಾಲಕ್ಸಿ A54 ಫೋನ್‌ ಕೂಡ ಮಾರ್ಚ್ 15 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂಬ ನಿರೀಕ್ಷೆ ಇದೆ. ಇದು 6.4 ಇಂಚಿನ ಸೆಂಟರ್ ಪಂಚ್-ಹೋಲ್ ಡಿಸ್‌ಪ್ಲೇ ಹೊಂದಿದ್ದು,ಈ ಫೋನ್ Exynos 1380 SoC ಪ್ರೊಸೆಸರ್‌ (processor) ಸಾಮರ್ಥ್ಯ ಪಡೆದಿರಲಿದೆ. 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಕೂಡ ಇರಲಿದೆ.

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ (oppo find N2 flip): ಈ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಪ್ರೈಮೆರಿ ಡಿಸ್‌ಪ್ಲೇ ಹೊಂದಿದ್ದು, 1,080 x 2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಬಲಿಷ್ಟವಾದ ಮೀಡಿಯಾಟೆಕ್‌ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ಇದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ ಕಲರ್‌ ಒಎಸ್‌ 13.0 ನೊಂದಿಗೆ ಕಾರ್ಯನಿರ್ವಹಿಸಲಿದೆ. ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಕೂಡ ಇದೆ.

ಐಕ್ಯೂ Z7 ಸ್ಮಾರ್ಟ್‌ಫೋನ್ ಸರಣಿ (IQ Z7): ಈ ಫೋನ್ ಡೆಮೆನ್ಸಿಟಿ 920 ಚಿಪ್‌ಸೆಟ್ ಪ್ರೊಸೆಸರ್‌ ನೊಂದಿಗೆದೇಶೀಯ ಮಾರುಕಟ್ಟೆಯಲ್ಲಿ ಮಾರ್ಚ್ 21 ರಂದು ಬಿಡುಗಡೆ ಆಗಲಿದೆ. ಹಾಗೆಯೇ ಈ ಫೋನ್ 6GB RAM + 128GB RAM ಮತ್ತು 8GB + 128GB ವೇರಿಯಂಟ್‌ ಆಯ್ಕೆ ಪಡೆದಿರಲಿದೆ. ಇದು ಅಮೊಲೆಡ್‌ ಡಿಸ್‌ಪ್ಲೇ ಪಡೆದಿದ್ದು, 64 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಕೂಡ ಇರಲಿದೆ. ಈ ಫೋನ್ ಗೆ ಸ್ನಾಪ್‌ಡ್ರಾಗನ್ 782G ಜೊತೆಗೆ ಆಂಡ್ರಾಯ್ಡ್‌ 13 ಸಪೋರ್ಟ್‌ ಇರಲಿದೆ. 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಗೆ ಬರಲಿದೆ.

ಪೊಕೊ X5 ಸ್ಮಾರ್ಟ್‌ಫೋನ್‌ (poco X5) : ಈ ಫೋನ್ ಮಾರ್ಚ್ 14 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿದೆ. ಪೊಕೊ X5 ಸ್ಮಾರ್ಟ್‌ಫೋನ್‌ ಬಲಿಷ್ಟವಾದ ಸ್ನ್ಯಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ಹೊಂದಿದ್ದು, 6.67 ಇಂಚಿನ 120Hz ಅಮೊಲೆಡ್‌ ಡಿಸ್‌ಪ್ಲೇ ಇದೆ. ಕ್ಯಾಮೆರಾ ಬಗ್ಗೆ ಹೇಳಬೇಕಾದರೆ, 48 ಮೆಗಾ ಪಿಕ್ಸಲ್‌ ಮುಖ್ಯ ಕ್ಯಾಮೆರಾ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಹಾಗೆಯೇ ಬ್ಯಾಟರಿಯು 5,000 mAh ಇದ್ದು, ಇದು 33W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ಇದನ್ನೂ ಓದಿ : ವಾಷಿಂಗ್ ಪೌಡರ್ ನಿರ್ಮಾ’ ಪೋಸ್ಟರ್ ಹಾಕಿ ಅಮಿತ್ ಶಾ ಗೆ ಸ್ವಾಗತ!

Leave A Reply