viral video: ಊಸರವಳ್ಳಿಯಲ್ಲ ಬಣ್ಣ ಬದಲಿಸುವ ಚೇಳು ನೋಡಿದ್ದೀರಾ? ಇಲ್ಲಿದೆ ನೋಡಿ, ನೀವು ಬೆರಗಾಗೋದು ಖಂಡಿತ!!

scorpion viral video: ಬಣ್ಣ ಬದಲಾಯಿಸುವ ಜೀವಿ ಅಂದ್ರೆ ಊಸರವಳ್ಳಿ (chameleon). ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಕೆಲವರು ಊಸರವಳ್ಳಿಯನ್ನು ಮೋಸ ಮಾಡುವ ಜನರಿಗೆ ಹೋಲಿಸುತ್ತಾರೆ. ಯಾಕಂದ್ರೆ ಊಸರವಳ್ಳಿ ತನಗೆ ಬೇಕಾದ ಹಾಗೆ ಹಲವು ಬಣ್ಣಗಳಿಗೆ ಕ್ಷಣ ಕ್ಷಣ ಬದಲಾಗುತ್ತಿರುತ್ತದೆ. ಆದರೆ ಇಲ್ಲೊಂದು ಚೇಳು (scorpion) ಊಸರವಳ್ಳಿಯ ಹಾಗೇ ಬಣ್ಣ ಬದಲಾಯಿಸುತ್ತದೆ‌.

 

ಹೌದು, ಕಪ್ಪು ಬಣ್ಣದ ಚೇಳು ಬಣ್ಣ ಬದಲಾಯಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (scorpion viral video) ಆಗಿದೆ. ವಿಡಿಯೋದಲ್ಲಿ, ಮಹಿಳೆ (women) ತನ್ನ ಕೈಯಲ್ಲಿ ಚೇಳನ್ನು ಹಿಡಿದುಕೊಂಡಿರುವ ದೃಶ್ಯ ನೋಡಬಹುದು. ಅಬ್ಬಾ!!! ಆಕೆ ಸ್ವಲ್ಪವೂ ಭಯವಿಲ್ಲದೆ ಅದರ ಜೊತೆ ಆಟವಾಡುತ್ತಿದ್ದಾಳೆ. ನಗುತ್ತಿದ್ದಾಳೆ. ಅದಾಗಲೇ ಕಪ್ಪು ಬಣ್ಣದ ಚೇಳು ನೀಲಿ ಬಣ್ಣಕ್ಕೆ ಬದಲಾಗುತ್ತದೆ. ಸದ್ಯ ನೆಟ್ಟಿಗರು ವಿಭಿನ್ನ ಚೇಳನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಈ ವಿಡಿಯೋವನ್ನು Instagram ನಲ್ಲಿ @thereptilezoo ಎಂಬ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬಣ್ಣ ಬದಲಾಯಿಸುವ ಈ ಚೇಳು ಆಫ್ರಿಕಾದಲ್ಲಿ ಕಂಡುಬಂದಿದೆ. ಸದ್ಯ ಸೋಷಿಯಲ್ಸ್ ಬೆರಗಿನಿಂದ ವಿಡಿಯೋ ನೋಡುತ್ತಿದ್ದು, ತಮಗನಿಸಿದ ಮಾತುಗಳನ್ನು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ.

ಇದನ್ನೂ ಓದಿ : 8th Pay Commission : 7ನೇ ವೇತನ ಆಯೋಗದ ಬದಲು 8 ನೇ ಆಯೋಗಕ್ಕೆ ಮಣೆ?

ಒಬ್ಬ ಕಾಮೆಂಟರ್, “ನಾನು ಜೇಡಗಳಿಗೆ ಹೆದರುತ್ತೇನೆ ಆದರೆ ಚೇಳುಗಳಿಂದ ಆಕರ್ಷಿತನಾಗಿದ್ದೇನೆ” ಎಂದಿದ್ದಾರೆ. ಹಾಗೇ ಮತ್ತೊಬ್ಬರು “ಇದು ಯಾವುದೇ ಮಾನವ ಪ್ರಯತ್ನದ ಅಗತ್ಯವಿಲ್ಲದ ದೇವರ ಮ್ಯಾಜಿಕ್” ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಮಹಿಳೆ ಈ ಚೇಳನ್ನು ಕೈಯಲ್ಲಿ ಹಿಡಿದಿದ್ದು, ಚೇಳು ಬಣ್ಣ ಬದಲಾಯಿಸೋದು ನೋಡಿ ಸೋಷಿಯಲ್ಸ್ ಬೆಚ್ಚಿ ಬಿದ್ದಿರೋದು ಪಕ್ಕಾ!!!.

Leave A Reply

Your email address will not be published.