Ration Card Big Updates: ಪಡಿತರ ವಿತರಣೆ ಕುರಿತು ಬಿಗ್ ಅಪ್ಡೇಟ್ ನೀಡಿದ ಕೇಂದ್ರ ಸರ್ಕಾರ

Ration Card Big Update: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಕೇಂದ್ರ ಸರ್ಕಾರ (Central Government) ಪಡಿತರ ವಿತರಣೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಹೊಸ ನಿಯಮ ಜಾರಿಗೆ(Ration Card Big Update) ತಂದಿದ್ದು, ಹೀಗಾಗಿ ಪಡಿತರ ಚೀಟಿ ಫಲಾನುಭವಿಗಳಿಗೆ ಸಿಹಿ ಸುದ್ದಿಯೊಂದು(Good News) ಹೊರಬಿದ್ದಿದೆ.

 

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಸಾರ, ಪಡಿತರ(Ration Card Holders) ಫಲಾನುಭವಿಗಳಿಗೆ ಆಹಾರ ಧಾನ್ಯಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹೊಸ ಯೋಜನೆ(Ration Card Big Update) ರೂಪಿಸಿದೆ. ಕೇಂದ್ರ ಸರ್ಕಾರ ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಮಾಪಕಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (EPOS) ಸಾಧನಗಳನ್ನು ಲಿಂಕ್ ಮಾಡಲು ತೀರ್ಮಾನ ಕೈಗೊಂಡಿದ್ದು, ಈ ನಿಯಮ ಜಾರಿಗೆ ಬಂದರೆ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ವಂಚನೆ ನಡೆಸಲು ಸಾಧ್ಯವಾಗದು.

 

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ, ಸರ್ಕಾರವು ಪ್ರತಿ ವ್ಯಕ್ತಿಗೆ ಐದು ಕೆಜಿ ಗೋಧಿ ಮತ್ತು ಅಕ್ಕಿಯನ್ನು (ಆಹಾರ ಧಾನ್ಯಗಳು) ದೇಶದ ಸುಮಾರು 80 ಕೋಟಿ ಜನರಿಗೆ ಕ್ರಮವಾಗಿ ಕೆಜಿಗೆ 2-3 ರೂ.ಗಳ ಸಬ್ಸಿಡಿ ದರದಲ್ಲಿ ಒದಗಿಸುತ್ತಿದೆ ಆದರೆ, ಸರ್ಕಾರ ನೀಡುತ್ತಿರುವ ಪಡಿತರ ವಿತರಣೆಯಲ್ಲಿ ಫಲಾನುಭವಿಗಳಿಗೆ ಸೇರಬೇಕಾದಷ್ಟು ಪಡಿತರ ವಿತರಣೆಯಾಗುವಲ್ಲಿ ಅಕ್ರಮ ನಡೆಯುತ್ತಿರುವ ಕುರಿತಂತೆ ಹೆಚ್ಚಿನ ಕಡೆಗಳಲ್ಲಿ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕೇಂದ್ರ ಈ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

 

ಈ ನಿಯಮ ಜಾರಿಗೆ ಬಂದ ಬಳಿಕ ಎಲ್ಲಾ ಪಡಿತರ ವಿತರಕರು ಎಲೆಕ್ಟ್ರಾನಿಕ್ ಮಾಪಕಗಳನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರವು ಇದಕ್ಕಾಗಿ ತಪಾಸಣೆಯನ್ನೂ ಕೂಡ ನಡೆಸುತ್ತಿದೆ, ಇದರಿಂದ ಯಾವುದೇ ವ್ಯಕ್ತಿಯ ಪಡಿತರದಲ್ಲಿ ಇನ್ಮುಂದೆ ವಂಚನೆ ನಡೆಯುವುದಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನಡಿಯಲ್ಲಿ ಪಡಿತರ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವ ದೆಸೆಯಲ್ಲಿ ಹೊಸ ಯೋಜನೆ ರೂಪಿಸಲಾಗಿದೆ.

ಇಡೀ ದೇಶದಲ್ಲಿ ಮೋದಿ ಸರ್ಕಾರದ (Narendra Modi) ‘ಒನ್ ನೇಷನ್ ಒನ್ ಪಡಿತರ ಚೀಟಿ ಯೋಜನೆ’( One Nation- One Ration Card )ಕೂಡ ಇದೀಗ ಜಾರಿಗೆ ಬಂದಿದ್ದು, ಇದರ ಜೊತೆಗೆ ಈ ನಿಯಮ ಜಾರಿಯಾದ ನಂತರ ಎಲ್ಲ ಪಡಿತರ ಅಂಗಡಿಗಳಲ್ಲಿ ಆನ್ ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್( POS ) ಸಾಧನಗಳನ್ನು ಕಡ್ಡಾಯಗೊಳಿಸಿ ಸೂಚನೆ ನೀಡಲಾಗಿದೆ. ಇದಲ್ಲದೆ, ಯಾವುದೇ ನೆಟ್‌ವರ್ಕ್ ಇಲ್ಲದಿದ್ದರು ಕೂಡ ಈ ಯಂತ್ರಗಳು ಆಫ್‌ಲೈನ್‌ನಲ್ಲಿ(Offline) ಮತ್ತು ಆನ್‌ಲೈನ್ ಮೋಡ್‌ನಲ್ಲಿ(Online Mode) ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ ಎನ್ನಲಾಗಿದೆ.

 

ಸರ್ಕಾರವು ಒದಗಿಸಿದ ಮಾಹಿತಿಯ ಅನುಸಾರ, ಈ ತಿದ್ದುಪಡಿಯು ಎನ್‌ಎಫ್‌ಎಸ್‌ಎ (NFSA)ಅಡಿಯಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ(Targeted Public Distribution System) (TPDS) ಕಾರ್ಯ ನಿರ್ವಹಿಸುವಲ್ಲಿ ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ಸುಧಾರಿಸುವ ಮೂಲಕ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತೂಕದ ಆಹಾರ ಧಾನ್ಯ ಸರಿಯಾಗಿ ವಿತರಣೆ ಯಾಗುವ ಕುರಿತು ಖಚಿತತೆ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಪಡಿತರ ವಿತರಕರಿಗೆ ಸರ್ಕಾರವು ಹೈಬ್ರಿಡ್ ಮಾಡೆಲ್ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಒದಗಿಸಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಫಲಾನುಭವಿಗಳು ಯಾವುದೇ ಪರಿಸ್ಥಿತಿಯಲ್ಲಿಯು ಕೂಡ ಕಡಿಮೆ ಪಡಿತರವನ್ನು ಪಡೆಯುವಂತೆ ಆಗಬಾರದು ಎಂಬ ಕಳಕಳಿಯಿಂದ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. .

 

ಕೇಂದ್ರದ ಹೊಸ ನಿಯಮ ಜಾರಿಗೆ ಬಂದ ಬಳಿಕ, ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆನ್‌ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಅಂದರೆ ಪಿಒಎಸ್ ಸಾಧನಗಳೊಂದಿಗೆ ಸಂಪರ್ಕ ಹೊಂದಿರುವುದು ಕಡ್ಡಾಯವಾಗಿದ್ದು, ಹೀಗಾಗಿ, ಪಡಿತರ ವಿತರಣೆಯಲ್ಲಿ ಫಲಾನುಭವಿಗಳಿಗೆ ತೂಕದಲ್ಲಿ (Weight)ಯಾವುದೇ ವಂಚನೆ(Scam) ನಡೆಯಲು ಅಸ್ಪದವಿರುವುದಿಲ್ಲ. ಸರಕಾರದ ಹೊಸ ನಿಯಮದಿಂದ ಪಡಿತರ ಫಲಾನುಭವಿಗಳಿಗೆ ಪ್ರಯೋಜನವಾಗುವುದು ನಿಶ್ಚಿತ ಎನ್ನಲಾಗುತ್ತಿದೆ.

Leave A Reply

Your email address will not be published.