Pragya Singh Thakur: ವಿದೇಶಿ ಹೆಣ್ಣಿಗೆ ಹುಟ್ಟಿದವ ದೇಶಭಕ್ತನಾಗಲು ಹೇಗೆ ಸಾಧ್ಯ? ಇವರನ್ನು ದೇಶ ಬಿಟ್ಟು ಓಡಿಸಿ! ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಪ್ರಜ್ಞಾ ಸಿಂಗ್

Pragya Singh Thakur :ರಾಹುಲ್ ಅವರನ್ನು ದೇಶದಲ್ಲಿ ರಾಜಕೀಯ ಮಾಡಲು ಬಿಡಬಾರದು. ಅವರನ್ನು ಭಾರತದಿಂದ ಹೊರಹಾಕಬೇಕು. ಅವರು ವಿದೇಶಿ ಮಹಿಳೆಗೆ ಹುಟ್ಟಿದವರು. ವಿದೇಶಿಗರಿಗೆ ಹುಟ್ಟಿದವ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಬಿಜೆಪಿ (BJP) ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (Pragya singh Thakur) ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಕಟುವಾಗಿ ಟೀಕಿಸಿದ್ದಾರೆ

 

ಹೌದು, ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಭಾರತದ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳಿಗೆ ಪ್ರಜ್ಞಾ ಠಾಕೂರ್, ರಾಹುಲ್ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ವಿದೇಶಿ ಮಹಿಳೆಗೆ ಹುಟ್ಟಿದ ಮಗು ದೇಶಭಕ್ತನಾಗಲು ಸಾಧ್ಯವಿಲ್ಲ ಎಂಬ ಚಾಣಕ್ಯನ ಮಾತು ಸಾಬೀತಾಗಿದೆ. ರಾಹುಲ್ ವಿದೇಶಿ ನೆಲದಲ್ಲಿ ನೀಡಿರುವ ಹೇಳಿಕೆಗಳು ಇದನ್ನು ಸಾಬೀತುಪಡಿಸಿದೆ. ಈ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷನನ್ನು ದೇಶದಿಂದ ಹೊರ ಹಾಕಬೇಕು ಎಂದು ಕಿಡಿಕಾರಿದ್ದಾರೆ.

ಭಾರತದ ರಾಜಕೀಯ ಪರಿಸ್ಥಿತಿಯ ಕುರಿತು ಯುಕೆಯಲ್ಲಿ ರಾಹುಲ್ ಮಾಡಿದ ಕಮೆಂಟ್‌ಗಳ ಕುರಿತು ಅಸಮಾಧಾನ ಹೊರ ಹಾಕಿದ ಠಾಕೂರ್, ದೇಶ ಮತ್ತು ಅವರನ್ನು ಆಯ್ಕೆ ಮಾಡಿದ ಜನರನ್ನು ರಾಹುಲ್ ಅವಮಾನಿಸಿದ್ದಾರೆ. ಕಾಂಗ್ರೆಸ್(Congress) ಹಲವಾರು ದಶಕಗಳ ಕಾಲ ದುರಾಡಳಿತ ನಡೆಸಿದೆ. ಮತ್ತೂ ಅದನ್ನು ಮುಂದುವರೆಸುತ್ತಿದೆ ಎಂದು ಕಿಡಿಕಾರಿದರು. ಭಾರತದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದರು. ಆದರೆ, ನೀವು ದೀರ್ಘಕಾಲದವರೆಗೆ ಅಧಿಕಾರದಲ್ಲಿದ್ದು ದೇಶವನ್ನು ಕೊಳ್ಳೆ ಹೊಡೆದಿದ್ದೀರಿ. ಈಗ ರಾಹುಲ್​ ಗಾಂಧಿ ವಿದೇಶದಲ್ಲಿದ್ದು, ದೇಶದ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಂದಹಾಗೆ ರಾಹುಲ್ ಅವರು ‘ಲೋಕಸಭೆಯಲ್ಲಿ(parliment) ಪ್ರತಿಪಕ್ಷಗಳು ಮಾತನಾಡುವ ವೇಳೆ ಹೆಚ್ಚಾಗಿ ಎಲ್ಲಾ ಮೈಕ್‌ಗಳು ಮೌನವಾಗಿರುತ್ತವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ ಎಂದು ಟೀಕಿಸಿ, ಲಂಡನ್‌ನಲ್ಲಿ ಬ್ರಿಟಿಷ್ ಸಂಸದರಿಗೆ ತಿಳಿಸಿದ್ದರು. ರಾಹುಲ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಸಂಸದೆ, ಅವರಿಗೆ ದೇಶದಲ್ಲಿ ರಾಜಕೀಯ ಮಾಡಲು ಬಿಡಬಾರದು ಮತ್ತು ಅವರನ್ನು ಭಾರತದಿಂದ ಹೊರಹಾಕಬೇಕು. ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ನಾನು ತೀವ್ರ ಖಂಡಿಸುತ್ತೇನೆ ಎಂದರು.

ರಾಹುಲ್​ ಗಾಂಧಿ ಅವರು ಅಸ್ತಿತ್ವ ಕಳೆದುಕೊಂಡಿದ್ದಾರೆ. ಅವರೀಗ ಅಳಿವಿನ ಅಂಚಿನಲ್ಲಿದ್ದಾರೆ. ಮಾತ್ರವಲ್ಲದೇ, ಅವರು ತಮ್ಮ ಬುದ್ಧಿಯನ್ನು ಕಳೆದುಕೊಂಡಿದ್ದಾರೆ. ನಿಮ್ಮನ್ನು ಆಯ್ಕೆ ಮಾಡಿದ ಜನರನ್ನು ನೀವು ಅವಮಾನಿಸುತ್ತಿದ್ದೀರಿ ಮತ್ತು ದೇಶವನ್ನೂ ಅವಮಾನಿಸುತ್ತಿದ್ದೀರಿ. ಅಲ್ಲದೆ ನೀವು ವಿದೇಶಿ ಮಹಿಳೆಗೆ ಹುಟ್ಟಿದವರು. ನೀವು ಹೇಗೆ ದೇಶಭಕ್ತನಾಗಲು ಸಾಧ್ಯ ಎಂದು ಪ್ರಶ್ನಿಸಿ ಪ್ರಗ್ಯಾ ಸಿಂಗ್​ ಠಾಕೂರ್​​​ ಹರಿಹಾಯ್ದರು.

Leave A Reply

Your email address will not be published.