Jio Recharge Plans: ಜಿಯೋ ಪರಿಚಯಿಸಿದೆ ಭಾರೀ ಅಗ್ಗದ ಬೆಲೆಯ ರೀಚಾರ್ಜ್ ಪ್ಲ್ಯಾನ್ ; 100 ರೂ. ಗಿಂತಲೂ ಕಡಿಮೆ ಬೆಲೆಯ ಯೋಜನೆ!!

Share the Article

Jio Recharge Plans: ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO, reliance), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿ ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನು ನೀಡುತ್ತಿದೆ. ಈವರೆಗೆ ಹಲವು ಪ್ರೀಪೇಯ್ಡ್​ ರೀಚಾರ್ಜ್​ ಯೋಜನೆಗಳನ್ನು (prepaid recharge plan) ಬಿಡುಗಡೆ ಮಾಡಿದ್ದು, ಇದೀಗ ಕೇವಲ 75 ರೂಪಾಯಿಯ ಅತ್ಯುತ್ತಮ ರೀಚಾರ್ಜ್ ಯೋಜನೆಯನ್ನು (Jio Recharge Plans) ತಂದಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭಾರೀ ಅಗ್ಗದ ಬೆಲೆಯ ರೀಚಾರ್ಜ್ ಯೋಜನೆ ತಂದಿದೆ. ಕೇವಲ 75 ರೂಪಾಯಿಯ ರೀಚಾರ್ಜ್ ಪ್ಲ್ಯಾನ್ (75 rs recharge plan) ಅನ್ನು ಜಿಯೋ ಗ್ರಾಹಕರ ಮುಂದಿಟ್ಟಿದೆ. ಈ ಯೋಜನೆಯು ಒಟ್ಟು 23 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಬಳಕೆದಾರರು ಒಟ್ಟು 2.5 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಲಿದ್ದಾರೆ. 100MB ದೈನಂದಿನ ಡೇಟಾದ ಜೊತೆಗೆ ಉಚಿತ ಕರೆ ಸೌಲಭ್ಯ ಲಭ್ಯವಿರುತ್ತದೆ.

2.5 ಜಿಬಿ ಡೇಟಾ ಬಳಸಿದ ನಂತರ ಹೆಚ್ಚುವರಿಯಾಗಿ, 50 SMS ವರೆಗೆ ಕಳುಹಿಸಬಹುದು. ಈ ಆಫರ್ ಕೇವಲ ಜಿಯೋ ಫೋನ್ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಈ ಮೊದಲು ಜಿಯೋ ಹಲವಾರು ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು, ಗ್ರಾಹಕರನ್ನು ಹೆಚ್ಚಿಸಿಕೊಂಡಿದೆ. ಸದ್ಯ ಏರ್ಟೆಲ್ (Airtel), ಬಿಎಸ್ಎನ್ಎಲ್ (bsnl) ಸಂಸ್ಥೆಗಳಿಗೆ ಜಿಯೋ ಪೈಪೋಟಿ ನೀಡುತ್ತಿದೆ.

Leave A Reply