Beer Consumption: ಬಿಯರ್ ಸೇವನೆಯಿಂದ ಕಿಡ್ನಿ ಸ್ಟೋನ್ ಗುಣವಾಗುತ್ತದೆಯೇ? ಇಲ್ಲಿದೆ ಮಾಹಿತಿ

Beer Consumption: ಇಂದಿನ ಜನರು ಹೆಚ್ಚು ನೀರು (water) ಕುಡಿಯುವುದಿಲ್ಲ. ನೀರು ಕುಡಿದರೂ ಮೂತ್ರವಿಸರ್ಜನೆಗೆ ಹೋಗುವುದಿಲ್ಲ. ಇದು ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತದೆ. ಹೀಗಾಗಿ ಮೂತ್ರಪಿಂಡದ ಕಲ್ಲಿನ ಪ್ರಕರಣ ಹೆಚ್ಚಾಗಿದೆ. ಕೆಲವರು ಇದರಿಂದ ಪಾರಾಗಲು ಆಸ್ಪತ್ರೆಗೆ ಹೋದರೆ, ಇನ್ನೂ ಕೆಲವರು ಬಿಯರ್ ಕುಡಿಯುತ್ತಾರೆ (Beer Consumption). ಆದರೆ ಮೂತ್ರಪಿಂಡದ ಕಲ್ಲು (Kidney Stone) ನಿವಾರಣೆಗೆ ಬಿಯರ್ ಕುಡಿಯುವುದು ಎಷ್ಟು ಸರಿ. ಇದರಿಂದ ಸ್ಟೋನ್ ಹೋಗುತ್ತದಾ? ವೈದ್ಯರು ಏನು ಹೇಳುತ್ತಾರೆ ನೋಡೋಣ.

 

ಪ್ಯಾನ್-ಇಂಡಿಯಾ ಸಮೀಕ್ಷೆಯ ಪ್ರಕಾರ, ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಶೇಕಡಾ 50 ಕ್ಕಿಂತ ಹೆಚ್ಚು ಜನರು
ತಮ್ಮ ಚಿಕಿತ್ಸೆಯನ್ನು ಆರು ತಿಂಗಳಿಂದ ಎರಡು ವರ್ಷಗಳವರೆಗೆ ಮುಂದೂಡುತ್ತಾರೆ. ಯಾಕೆ ಗೊತ್ತಾ? ಆ ಜನರು ಬಿಯರ್ ಕುಡಿದು ಮೂತ್ರಪಿಂಡದ ಕಲ್ಲನ್ನು ಹೋಗಿಸುವ ವಿಧಾನವನ್ನು ಪ್ರಯತ್ನಿಸುತ್ತಾರೆ ಎಂದು ಹೇಳಲಾಗಿದೆ.

ಬಿಯರ್ ಮೂತ್ರವರ್ಧಕವಾಗಿದೆ, ಹೆಚ್ಚು ಮೂತ್ರವನ್ನು ರವಾನಿಸಲು ಸಹಕಾರಿಯಾಗಿದೆ. ಬಿಯರ್ ಕುಡಿದರೆ ಹೆಚ್ಚು ಮೂತ್ರ ವಿಸರ್ಜನೆಯಾಗುತ್ತದೆ. ಹಾಗಾಗಿ ಇದನ್ನು ಕುಡಿದರೆ ಸಣ್ಣ ಸಣ್ಣ ಕಲ್ಲುಗಳು ಹೊರಹಾಕಲ್ಪಡುತ್ತದೆ. ಈ ಕಾರಣದಿಂದ ಕಿಡ್ನಿ ಸ್ಟೋನ್ ಗೆ ಒಳಗಾದವರು ಬಿಯರ್ ಕುಡಿಯುತ್ತಾರೆ. ಆದರೆ, ಬಿಯರ್ ಕುಡಿದು ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸಬಹುದು ಎಂಬ ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಬಿಯರ್ ಕುಡಿಯುವುದರಿಂದ 5 ಮಿ.ಮೀ ಗಿಂತ ಹೆಚ್ಚು ಗಾತ್ರದ ಕಲ್ಲುಗಳನ್ನು ದೇಹದಿಂದ ಹೊರಹಾಕಲು ಸಾಧ್ಯವಿಲ್ಲ. ಯಾಕಂದ್ರೆ, ನಿರ್ಗಮನ ಮಾರ್ಗವು ಕೇವಲ 3 ಮಿ.ಮೀ. ಆಗಿದೆ. ಬಿಯರ್ ಕುಡಿದರೆ, ಅದು ನೀವು ಹೊರಹಾಕಲು ಸಾಧ್ಯವಾಗದ ಹೆಚ್ಚಿನ ಮೂತ್ರವನ್ನು ಉತ್ಪಾದಿಸುತ್ತದೆ. ಇದರಿಂದ ಮೊದಲೇ ನೋವಿನಿಂದ ಬಳಲುತ್ತಿದ್ದವರು ಇನ್ನಷ್ಟು ನೋವು ಅನುಭವಿಸಬೇಕಾಗುತ್ತದೆ. ಆರೋಗ್ಯ ಹದಗೆಡುತ್ತದೆ. ಅಲ್ಲದೆ, ಹೆಚ್ಙು ಸಮಯ ಮತ್ತು ನಿಯಮಿತವಾದ ಬಿಯರ್ ಸೇವನೆ ಹೆಚ್ಚಿನ ಆಕ್ಸಲೇಟ್ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

Leave A Reply

Your email address will not be published.