ಅನ್ಯಗ್ರಹದಿಂದ ಬಂದು ಬೀಚಿನಲ್ಲಿ ಬೆತ್ತಲೆಯಾಗಿ ಓಡಾಡಿದ ವ್ಯಕ್ತಿ ?!

Alien :ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡಾಡಿ, ತಾನು ಅನ್ಯ ಗೃಹದಿಂದ ಬಂದಿದ್ದೇನೆ ಎಂದು ಹೇಳಿ ಚಕಿತಗೊಳಿಸಿದ ಘಟನೆ ನಡೆದಿದೆ. ನೀವೆಲ್ಲ ಅಮೀರ್ ಖಾನ ಅಭಿನಯ ಮತ್ತು ನಿರ್ಮಾಣದ ಬಾಲಿವುಡ್‌ನ ಪಿಕೆ ಸಿನಿಮಾ ನೋಡಿದವರಿಗೆ ಈ ಒಂದು ಘಟನೆ ಥೇಟ್ ಅದರಂತೆಯೇ ಎನಿಸುತ್ತದೆ ಅನ್ನಿಸಬಹುದು. ಆ ಕಾಲ್ಪನಿಕ ಪಾತ್ರದಂತೆಯೇ ಇವತ್ತು ವ್ಯಕ್ತಿಯೊಬ್ಬ ನಾ ಅನ್ಯಗ್ರಹದಿಂದ ಬಂದವನೆಂದು ಹೇಳಿ ಆಶ್ಚರ್ಯ ಮೂಡಿಸಿದ್ದಾನೆ.

 

ಅಮೆರಿಕದ (America) ಬೀದಿಯಲ್ಲಿ ಬೆತ್ತಲಾಗಿ (Naked) ಸಂಚರಿಸಿದ್ದಾನೆ. ಫ್ಲೋರಿಡಾದ (Florida) ಪಾಮ್ ಬೀಚ್‌ನಲ್ಲಿ (Palm Beach) 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಓದಿ ಬಂದು ಆತನನ್ನು ಬಂಧಿಸಿದ್ದಾರೆ. ನೀನ್ಯಾರು ಅಂತ ಕೇಳಿದ್ದಕ್ಕೆ ನಾನು ಬೇರೊಂದು ಗ್ರಹದಿಂದ ಬಂದಿದ್ದೇನೆ (Alien) ಎಂದಿದ್ದಾನೆ.

ಪೊಲೀಸರು ಬಂಧಿಸಿದಾಗ ಆತನ ಮೈ ಮೇಲೆ ಒಂದು ಎಳೆ ಕೂಡಾ ಬಟ್ಟೆಯಿರಲಿಲ್ಲ. ಆತ ಬಟ್ಟೆ ಹಾಕುವುದನ್ನು ಮರೆಯುವುದಲ್ಲದೆ, ತಾನು ಹಾಕುವ ನಾನು ಬಟ್ಟೆಗಳನ್ನು ಕೂಡಾ ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ, ಮರೆತು ಹೋಗಿದೆ ಎಂದಿದ್ದಾನೆ. ಅಲ್ಲದೆ ಆತ ತನ್ನ ಹೆಸರು ಅಥವಾ ಯಾವುದೇ ಗುರುತುಗಳನ್ನು ನೀಡಲು ನಿರಾಕರಿಸಿದ್ದಾನೆ. ಪೊಲೀಸರು ಪ್ರಶ್ನಿಸಿದಾಗ, ಅಸಲಿಗೆ ನಾನು ಈ ಭೂಮಿಯವನೇ ಅಲ್ಲ. ಅನ್ಯಗ್ರಹದಿಂದ ಭೂಮಿಗೆ ಬಂದಿದ್ದೇನೆ. ಇಲ್ಲಿಗೆ ಬಂದ ಮೇಲೆ ಕೆಲ ದಿನಗಳಿಂದ ಪಾಮ್ ಬೀಚ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾನೆ.

” ಅನ್ಯ ಗ್ರಹದಿಂದ ಬಂದವನಾ ನೀ?, ಬಟ್ಟೆ ಇಲ್ಲದ ನಿನ್ನ ದೇಹವೆಲ್ಲ ಇಲ್ಲಿಯವರ ಥರ ಇದೆಯಲ್ಲ ” ಎಂದ ಪೊಲೀಸರು ಅಸಭ್ಯವಾಗಿ ವರ್ತಿಸಿರುವುದಕ್ಕೆ ಆತನನ್ನು ಬಂಧಿಸಿದ್ದಾರೆ. ಇದಾದ ಬಳಿಕ ಪೊಲೀಸರು ಆತನ ಬಗ್ಗೆ ಪತ್ತೆ ಹಚ್ಚಿ, ಹೆಸರನ್ನು ಜೇಸನ್ ಸ್ಮಿತ್ ಎಂದು ಗುರುತಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.