Pregnancy : 47ನೇ ವಯಸ್ಸಿನಲ್ಲಿ ತನ್ನ ತಾಯಿ ಮತ್ತೊಮ್ಮೆ ಪ್ರೆಗ್ನೆಂಟ್‌ ಆದ ವಿಷಯ ತಿಳಿದು ಮಗಳು ಶಾಕ್‌!

Pregnancy : ಮಹಿಳೆಯರಲ್ಲಿ ಇತ್ತೀಚೆಗೆ ಫಲವತ್ತತೆ ಕೊರತೆಯಿಂದ ಗರ್ಭ ಧರಿಸಲು ನಾನಾ ರೀತಿಯ ಪ್ರಯತ್ನ ಮಾಡಬೇಕಾಗುತ್ತದೆ. ಇನ್ನು 35 ದಾಟಿದರೆ ಗರ್ಭ ಧರಿಸುವುದು ನೋ ಚಾನ್ಸ್ ಅಂತಾ ನಮ್ಮ ನಂಬಿಕೆ. ಆದರೆ ಈಗಿನ ವೈದ್ಯಕೀಯ ತಂತ್ರಜ್ಞಾನ ತುಂಬಾ ಬೆಳವಣಿಗೆ ಹೊಂದಿದ್ದು, ಅಸಾಧ್ಯ ಆದುದನ್ನು ಸಾಧ್ಯ ಎಂಬ ಚಾಲೆಂಜ್ ಮಾಡುತ್ತದೆ. ಅಂದರೆ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART), ವಿಟ್ರೊ ಫಲೀಕರಣ (IVF), ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ಇನ್ನು ಹಲವಾರು ವಿಧಾನಗಳ ಮೂಲಕ ಗರ್ಭ ಧರಿಸಬಹುದಾಗಿದೆ.

ಅದೇ ರೀತಿ ಇಲ್ಲೊಬ್ಬಳು 47 ವರ್ಷದ ಮಹಿಳೆ ಗರ್ಭಿಣಿ (Pregnancy) ಆಗಿ ಅಚ್ಚರಿ ಮೂಡಿಸಿದ್ದಾರೆ. ಈಕೆಯ ಮಗಳಾದ, 23 ವರ್ಷದ ಯುವತಿ ಆರ್ಯ ಪಾರ್ವತಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ವಿಚಾರ ಕೇಳಿ 23 ವರ್ಷದ ತನ್ನ ಮಗಳೇ ಶಾಕ್ ಆಗಿರುವುದಾಗಿ ತಿಳಿಸಿದ್ದಾಳೆ.

ಪೋಸ್ಟ್ ನಲ್ಲಿ, ನನ್ನ ತಾಯಿಗೆ 47 ವರ್ಷ. ಈಕೆ ಈಗ ತುಂಬು ಗರ್ಭಿಣಿ. ನನ್ನ ತಂದೆ, ತಾಯಿ ಈ ವಿಚಾರವನ್ನು ನನಗೆ ತಿಳಿಸಲು ಸ್ವಲ್ಪ ಸಮಯ ತೆಗೆದುಕೊಂಡರು, ಒಂದು ದಿನ ನನ್ನ ತಂದೆಯಿಂದ ನನಗೆ ಫೋನ್ ಬಂತು. ನಿನ್ನ ತಾಯಿ ಗರ್ಭಿಣಿ ಎಂದರು. ಈ ವಿಚಾರ ತಿಳಿದು ಒಂದು ಕ್ಷಣ ಶಾಕ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.

ನನ್ನ ತಾಯಿಗೆ ಈಗ 8 ತಿಂಗಳು. ನನಗೆ ನನ್ನ ತಂಗಿಯನ್ನು ನೋಡಬೇಕು ಅನಿಸುತ್ತಿದೆ. ಆಕೆಯನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ತಾಯಿಯನ್ನು ತುಂಬಾ ಸಂತೋಷದಿಂದಲೇ ಆರೈಕೆ ಮಾಡುತ್ತೇನೆ ಎಂದು ಮಗಳಾದ ಆರ್ಯ ಪಾರ್ವತಿ ಅವರು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ತಾಯಿಯ ಬಾಣಂತಿ ಆರೈಕೆ ಮಾಡುವ ಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ. ಅದೂ ಅಲ್ಲದೆ ಇದೊಂದು ಆಶ್ಚರ್ಯ ವಿಚಾರವು ಹೌದು. ಕೆಲವರಿಗೆ ಈ ವಯಸ್ಸಿನಲ್ಲಿ ಮಗು ಹೆರುವ ಯೋಚನೆ ಮಾಡಲು ಕೂಡ ಧೈರ್ಯ ಇರುವುದಿಲ್ಲ. ಹಾಗಿರುವಾಗ ಇವರ ಧೈರ್ಯ ನಾವು ಮೆಚ್ಚಲೇ ಬೇಕು.

Leave A Reply

Your email address will not be published.