Redmi 12C: ಶವೋಮಿಯಿಂದ ರೆಡ್ಮಿ 12C ಸ್ಮಾರ್ಟ್‌ಫೋನ್ ಬಿಡುಗಡೆ : ತೀರಾ ಕಡಿಮೆ ಬೆಲೆಗೆ!!
Redmi 12C: ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾರು (car), ಬೈಕ್ ಗಳ (bike) ಹವಾ ಹೆಚ್ಚಿದೆ. ಆದರೆ ಸ್ಮಾರ್ಟ್ ಫೋನ್ ಗಳ ಹವಾ ಏನೂ ಕಮ್ಮಿ ಆಗಿಲ್ಲ. ಜನಪ್ರಿಯ ಕಂಪನಿಗಳು ನೂತನ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಲೇ ಇವೆ. ಎಣಿಕೆಗೂ ಮೀರಿದಷ್ಟು ಸ್ಮಾರ್ಟ್ಫೋನ್ ಗಳು ಲಾಂಚ್ ಆಗುತ್ತಿವೆ. ಜನರನ್ನು ಸೆಳೆಯಲು ಅತ್ಯಾಕರ್ಷಕವಾಗಿ, ವಿಭಿನ್ನ ವೈಶಿಷ್ಟ್ಯ ಹಾಗೇ ಮನಮೋಹಕ ಬಣ್ಣದೊದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಹಾಗೆಯೇ ಇದೀಗ ಪ್ರಸಿದ್ಧ ಶವೋಮಿ (Xiaomi) ಕಂಪನಿ ತನ್ನ ಹೊಸ ರೆಡ್ಮಿ 12ಸಿ (Redmi 12C) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ.
ಚೀನಾ ಮೂಲದ ಪ್ರಸಿದ್ಧ ಕಂಪನಿ ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ನಲ್ಲಿ ನೂತನ ಸ್ಮಾರ್ಟ್ಫೋನ್ಗಳನ್ನು ಘೋಷಣೆ ಮಾಡುತ್ತಿದೆ. ಕಂಪನಿಯು ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳನ್ನು (smartphone) ಗ್ರಾಹಕರ ಮುಂದಿಡಲು ಸಜ್ಜಾಗಿದೆ. Redmi 12C ಬಜೆಟ್ ಬೆಲೆಯ ಫೋನಾಗಿದ್ದು, ಇದರ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.
ರೆಡ್ಮಿ 12C ಸ್ಮಾರ್ಟ್‌ಫೋನ್ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿದ್ದು, ಗ್ರಾಹಕರಿಗೆ ಒಂದು ಮಾದರಿಯಲ್ಲಿ ಲಭ್ಯವಿದೆ. ಈ ಫೋನ್ ಮಾರ್ಚ್ ತಿಂಗಳ ಕೊನೆಗೆ ಭಾರತದಲ್ಲಿಯೂ (india) ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ IDR 1,599,000 ಆಗಿದೆ. ಭಾರತದಲ್ಲಿ ಇದರ ಬೆಲೆ 8,500ರೂ.ಎಂದು ಅಂದಾಜಿಸಲಾಗಿದೆ.
ಇದು 4GB RAM + 128GB ಇಂಟರ್ ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಶಾಡೋ ಬ್ಲಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.71 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 20.6:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಬಲಿಷ್ಟವಾದ ಮಿಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್ ಇದ್ದು, ಇದು ಆಂಡ್ರಾಯ್ಡ್ 12 ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಈ ಸ್ಮಾರ್ಟ್ಫೋನ್ ಎರಡು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ಸ್ ಮತ್ತು ಮೂರು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ ಅನ್ನು ಪಡೆದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ ಸೆಲ್ಫಿ ಕ್ಯಾಮೆರಾ
5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಪಡೆದಿದೆ. ರಿಯರ್ ಕ್ಯಾಮೆರಾ ಮೂಲಕ ಪ್ರತಿ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ (fps) 1080p ವರೆಗಿನ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಹಾಗೆಯೇ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಹೊಂದಿದ್ದು, ಇದು 10W ಚಾರ್ಜಿಂಗ್ ಬೆಂಬಲಿಸುತ್ತದೆ. ಇದು AI ಕ್ರಿಯೇಟ್ ಅನ್‌ಲಾಕ್, ವೈ-ಫೈ, ಬ್ಲೂಟೂತ್ 5.1, ಡ್ಯುಯಲ್ ಸಿಮ್ ಬೆಂಬಲ, ಎಫ್‌ಎಂ ರೇಡಿಯೋ ಮತ್ತು 3.5 ಎಂಎಂ ಆಡಿಯೊ ಜಾಕ್ ಅನ್ನು ಸಪೋರ್ಟ್ ಮಾಡುತ್ತದೆ.
ಇದನ್ನೂ ಓದಿ : Protein Supplements Side Effects : ಪ್ರೊಟೀನ್ ಸಪ್ಲಿಮೆಂಟ್ ನಿಂದಾಗುವ ಅಡ್ಡಪರಿಣಾಮದ ಪಟ್ಟಿ ಇಲ್ಲಿದೆ!