Star kid Photo : ಈ ಚಿತ್ರದಲ್ಲಿರುವ ಬಾಲಕಿ ಈಗ ಫೇಮಸ್‌ ನಟಿ! ಯಾರೆಂದು ನೀವು ಪತ್ತೆ ಹಚ್ಚಬಲ್ಲಿರಾ?

Star kid Photo: ಪ್ರತಿಯೊಬ್ಬರಿಗೂ ಬಾಲ್ಯದ ದಿನಗಳು ವರ್ಣಿಸಲಾಗದ ಸುಂದರ ಭಾವನೆಗಳ ಸರಮಾಲೆಯನ್ನು ತೆರೆದಿಡುತ್ತದೆ. ಸೆಲೆಬ್ರಿಟಿ ಗಳು ಕೂಡ ಇದಕ್ಕೆ ಹೊರತಾಗಿಲ್ಲ. ಸಾಮಾನ್ಯವಾಗಿ ಸೆಲೆಬ್ರಿಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದು ಕಾಮನ್ ಸಂಗತಿ. ಇದೀಗ ನಟಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಲ್ಯದ ಫೋಟೋವನ್ನು(Childhood Photo) ಹಂಚಿಕೊಂಡಿದ್ದಾರೆ. ಹಾಗಿದ್ರೆ, ಈ ನಟಿ ಯಾರು ಎಂದು ಗುರುತಿಸಬಲ್ಲಿರಾ?

 

ಪ್ರತಿಯೊಬ್ಬರಿಗೂ ತಮ್ಮ ನೆಚ್ಚಿನ ನಟಿ ಬಾಲ್ಯದಲ್ಲಿ ಹೇಗಿದ್ದರು ಎಂಬ ಕುತೂಹಲ ಸಹಜವಾಗಿ ಮನೆ ಮಾಡಿರುತ್ತದೆ. ಇದೀಗ ವೈರಲ್ ಅದ ಫೋಟೋ ನೋಡಿ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಗೈಯುತ್ತಿದ್ದಾರೆ. ಈಗ ದಕ್ಷಿಣ ಭಾರತದ ನಟಿಯ ಬಾಲ್ಯದ​ ಫೋಟೋ(Star kid Photo) ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿ ಸಂಚಲನ ಮೂಡಿಸುತ್ತಿದೆ. ಇದೀಗ, ನಟಿಯ ಅಭಿಮಾನಿಗಳು ಫೋಟೋ ( Photo) ವನ್ನು ಹಂಚಿಕೊಂಡು ಈ ನಟಿ ಯಾರು ಎಂದು ಕಂಡು ಹಿಡಿಯುವಂತೆ ಸವಾಲು ಹಾಕುತ್ತಿದ್ದಾರೆ. ನೀವು ಕೂಡ ಫೋಟೋವನ್ನು ಗಮನಿಸಿ, ದಕ್ಷಿಣ ಭಾರತದ ಈ ನಟಿ ಯಾರು ಎಂದು ನೀವು ಕೂಡ ಸವಾಲು ಸ್ವೀಕರಿಸಿ!! ಉತ್ತರ ಹೇಳಬಲ್ಲಿರಾ??

ಎಷ್ಟು ಯೋಚಿಸಿದರೂ ಯಾರೆಂದು ತಿಳಿಯುತ್ತಿಲ್ಲ ಎನ್ನುವುದಾದರೆ ನಾವೇ ಹೇಳ್ತೀವಿ ಕೇಳಿ!! ಹಾಗಾದರೆ ಫೋಟೋದಲ್ಲಿರುವ ನಟಿ ಯಾರಪ್ಪ ಅನ್ನೋದಾದರೆ ಅದು ಮತ್ತಾರೂ ಅಲ್ಲ!! ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ನಟಿ ಕೀರ್ತಿ ಸುರೇಶ್(Keerthy Suresh). ಇನ್ನೂ ನಟಿಯ ಬಾಲ್ಯದ ಫೋಟೋಗಳನ್ನು ನೋಡಿದ ಅಭಿಮಾನಿಗಳಂತೂ ಫುಲ್ ಫಿದಾ ಆಗಿಬಿಟ್ಟಿದ್ದಾರೆ. ಫೋಟೋಗಳನ್ನು(Photo) ನೋಡಿದ ಅಭಿಮಾನಿಗಳು  ‘ಬಾಲ್ಯದಲ್ಲಿಯೂ ಸಹ  ನೀವು ಕ್ಯೂಟ್ ಆಗಿ ಕಾಣಿಸುತ್ತಿದ್ದು, ಅರೇ ಈಗಂತೂ ಕೇಳೋದೇ ಬೇಡ’ ಎಂದು ಕೀರ್ತಿ ಅವರ ಸೌಂದರ್ಯದ ಗುಣಗಾನ ಮಾಡುತ್ತಿದ್ದಾರೆ.

ಇನ್ನು ಈ ಶೇರ್ ಆಗುತ್ತಿರುವ ಫೋಟೋ ಯಾವಾಗ ತೆಗೆದದ್ದು ಎಂಬ ಕೌತುಕ ನಿಮಗೆಲ್ಲ ಇರಬಹುದಲ್ಲ!! ಕೀರ್ತಿ ಅವರ ಸಹೋದರಿ ರೇವತಿ ಸುರೇಶ್​ಗೆ ಹುಟ್ಟುಹಬ್ಬದ ಆಚರಣೆಯ ವಿಶೇಷ ಗಳಿಗೆಯಲ್ಲಿ  ತೆರೆದ ನೆನಪಿನ ಬುತ್ತಿಯಲ್ಲಿ ಅಚ್ಚಳಿಯದೆ ಉಳಿದ ಸವಿ ನೆನಪುಗಳು(Memories) ರೇವತಿ ಜೊತೆ ಕಳೆದ ಕ್ಷಣಗಳು ಕ್ಯಾಮೆರಾದಲ್ಲಿ ಬಂಧಿಯಾಗಿದ್ದ ನೂರಾರು ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಕಲ್ಪಿಸಿದೆ.

ಈ ವಿಶೇಷ ದಿನದಂದು ಕೀರ್ತಿ ಅವರು ಬಾಲ್ಯದ ಸುಂದರ ನೆನಪನ್ನು ಮೆಲುಕು ಹಾಕುವ ಸಲುವಾಗಿ  ಇತ್ತೀಚೆಗೆ ಕೀರ್ತಿ  ಅವರು ಬಾಲ್ಯದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಫೋಟೋ ಸ್ಟುಡಿಯೋ ಮೊದಲಾದ ಕಡೆಗಳಲ್ಲಿ ಕೀರ್ತಿ ಹಾಗೂ ರೇವತಿ ಒಟ್ಟಿಗೆ ನಿಂತಿರುವ ಫೋಟೋಗಳನ್ನೂ ಒಳಗೊಂಡಿವೆ. ಈ ಫೋಟೊ ನೋಡಿದ ಅಭಿಮಾನಿಗಳಂತೂ ದಿಲ್ ಕುಶ್ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದು ಅಲ್ಲದೇ  ‘ಕೀರ್ತಿ ಅವರಂಥ ಸಹೋದರಿ ಪಡೆದ ರೇವತಿಯೇ ಧನ್ಯರು’ ಎಂದು ಕಾಮೆಂಟ್(Comment) ಮೂಲಕ ನಮ್ಮ ನೆಚ್ಚಿನ ನಟಿಯ ಮೊಗದಲ್ಲಿ ಮಂದಹಾಸ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

 

Leave A Reply

Your email address will not be published.