Scientists Kyushu University: ಸಲಿಂಗಿಗಳಿಂದ ಜನಿಸುತ್ತವೆ ಈ ಇಲಿಗಳು! ಇವುಗಳಿಗೆ ತಾಯಿ ಇಲ್ಲ, ಇಬ್ಬರು ತಂದೆ!

Scientists Kyushu University : ವೈದ್ಯಕೀಯ(Medical) ಹಾಗೂ ವಿಜ್ಞಾನ(Science) ಕ್ಷೇತ್ರಗಳೆರಡೂ ನಿರಂತರವಾಗಿ ಹೊಸತನ್ನು ಆವಿಷ್ಕರಿಸುತ್ತಿರುತ್ತವೆ. ಇವುಗಳಲ್ಲಿನ ಕೌತುಕಗಳಿಗೆ ಕೊನೆಯೆಂಬುದೇ ಇಲ್ಲ. ಅಂತೆಯೇ ಇದೀಗ ವೈದ್ಯ ಲೋಕದಲ್ಲೊಂದು ಹೊಸ ಪ್ರಯೋಗವೊಂದು ನಡೆದಿದೆ. ಜೀವಿಗಳ ಸಂತಾನೋತ್ಪತ್ತಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮೊದಲ ಬಾರಿಗೆ ಎರಡು ಗಂಡು ಇಲಿಗಳನ್ನು (Rat) ಉಪಯೋಗಿಸಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲಾಗಿದೆ.

ಹೌದು, ಜಪಾನ್‌ನ ಕ್ಯುಷು, ಒಸಾಕಾ ವಿವಿಯ (Scientists Kyushu University) ತಜ್ಞರು ಈ ಒಂದು ಹೊಸ ಪ್ರಯೋಗವನ್ನು ನಡೆಸಿದ್ದು, ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿ ಮಕ್ಕಳನ್ನು ಹೆರಲು ಈ ವಿಧಾನ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅವರು ಮೊದಲು ಇಲಿಯ ಚರ್ಮ ಕಣಗಳನ್ನು ಸಂಗ್ರಹಿಸಿ, ಇಂಡ್ಯೂಸ್ಡ್ ಫ್ಲೋರಿಪೋಟೆಂಟ್ ಸ್ಟೆಮ್ ಕಣಗಳನ್ನು ಸೃಷ್ಟಿಸಲು ಈ ಚರ್ಮಕಣಗಳನ್ನು ಮೂಲ ಕಣಗಳ ಸ್ಥಿತಿಗೆ ಸೇರಿಸಿದ್ದರು. ನಂತರ ಅವುಗಳಿಂದ ವೈ ಕ್ರೋಮೋಸೋಮ್ಸ್ ಬೇರ್ಪಡಿಸಿ ಆ ಸ್ಥಾನದಲ್ಲಿ ಮತ್ತೊಂದು ಎಕ್ಸ್ ಕ್ರೋಮೋಸೋಮ್ಸ್ ಇರಿಸಿದರು. ಈ ಕಣಗಳನ್ನು ಅಂಡಾಣುಗಳನ್ನಾಗಿ ಪರಿವರ್ತಿಸಿ, ನಂತರ ಈ ಅಂಡಾಣುಗಳನ್ನು ಮತ್ತೊಂದು ಇಲಿಯ ವೀರ್ಯದಲ್ಲಿ ಸೇರಿಸಿದರು.

ಈ ವಿಧಾನದಲ್ಲಿ 600 ಪಿಂಡಗಳು ಸೃಷ್ಟಿಯಾದವು. ಇವನ್ನು ಸರೋಗೇಟ್ ಇಲಿಗಳಲ್ಲಿ ಇರಿಸಿದ ನಂತ್ರ ಏಳು ಇಲಿ ಮರಿಗಳು ಹುಟ್ಟಿದ್ದು, ಅವು ಆರೋಗ್ಯವಾಗಿವೆ. ಈ ಇಲಿಗಳಿಗೆ ಜೀವಶಾಸ್ತ್ರದ ಲೆಕ್ಕದಲ್ಲಿ ಹೇಳೋದಾದ್ರೆ ಇಬ್ಬರು ತಂದೆ (ಬಯಾಲಾಜಿಕಲ್ ಫಾದರ್) (Biological Fathers) ಇಲಿಗಳಿವೆ ಎಂದು ಹೇಳಲಾಗಿದೆ.

ಅಲ್ಲದೆ ಈ ವಿಧಾನವನ್ನು ಮಾನವ ಕಣಗಳ ಮೇಲೆಯೂ ಪ್ರಯೋಗ ಮಾಡುವ ಬಗ್ಗೆ ಇದೀಗ ಬೇರೆ ಬೇರೆ ಪ್ರಯೋಗಗಳು ನಡೆದು ಅದನ್ನು ಪರಿಶೀಲಿಸಲಾಗುತ್ತಿದೆ. ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿಕೊಂಡು ಸಂತಾನೋತ್ಪತ್ತಿ ಮಾಡುವುದಕ್ಕೆ ಈ ವಿಧಾನ ಅವಕಾಶ ಮಾಡಿಕೊಡುವ ಸಂಭವ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ : Nepal: ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ! ವ್ಯಕ್ತಿಯ ಹೊಟ್ಟೆಯೊಳಗಿತ್ತು ‘ವೋಡ್ಕಾ ಬಾಟ್ಲಿ’!

Leave A Reply

Your email address will not be published.