Romantic Talk :ಲೈವ್ ಕಾಮೆಂಟರಿಯಲ್ಲಿ ಕ್ರಿಕೆಟಿಗನ ಪತ್ನಿಯ ಮೇಲೊಂದು ರೊಮ್ಯಾಂಟಿಕ್ ಮಾತು ಆಡಿದ ಕಾಮೆಂಟೇಟರ್!!! ಮುಂದೇನಾಯ್ತು?

Romantic Talk: ಈಗಾಗಲೇ ಮಾರ್ಚ್​ 8ರಂದು ಕ್ವೆಟ್ಟಾ ಗ್ಲಾಡಿಯೇಟರ್ಸ್​ ವಿರುದ್ಧದ ಪಂದ್ಯದಲ್ಲಿ ಪೇಶಾವರ್​​​ ಝಲ್ಮಿ ನಾಯಕ ಬಾಬರ್​ ಅಜಮ್​​​, (Babar Azam) ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಆದರೆ ಬಾಬರ್​​ ಅಜಮ್​ರ ಈ ಶತಕದ ಬಗ್ಗೆ ಮಾತನಾಡಿದ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (Pakistan Super League) ಕಾಮೆಂಟೇಟರ್​​ ಆಗಿ ಕಾರ್ಯ ನಿರ್ವಹಿಸುತ್ತಿರುವ ನ್ಯೂಜಿಲೆಂಡ್‌ನ ಮಾಜಿ ಬೌಲರ್ ಸೈಮನ್ ಡೌಲ್, ಬಾಬರ್​​ ಅವರನ್ನು ಟೀಕೆ ಮಾಡಿದ್ದರು.

ಅದಲ್ಲದೆ ಸೈಮನ್ ಡೌಲ್, (Simon Doull) ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಪತ್ನಿ ಸಮಿಯಾ ಅರ್ಜೂ (Hasan Ali Wife Samiya Arzoo) ಅವರ ಬಗ್ಗೆ ರೊಮ್ಯಾಂಟಿಕ್ ( Romantic Talk) ಕಾಮೆಂಟ್ ಮಾಡಿದ್ದು, ವಿವಾದಕ್ಕೆ ಸಿಲುಕಿದ್ದಾರೆ. ಅದರಲ್ಲೂ ಹಸನ್ ಅಲಿ ಪತ್ನಿ ಸಮಿಯಾ ಭಾರತೀಯ ಮಹಿಳೆ ಎಂಬ ಕಾರಣಕ್ಕಾಗಿ ವಿವಾದ ಗಳು ಹೆಚ್ಚಾಗಿದೆ.

ಈಗಾಗಲೇ ರಾವಲ್ಪಿಂಡಿಯಲ್ಲಿ ಅಂತ್ಯಗೊಂಡ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಇನ್ನು ಇಸ್ಲಾಮಾಬಾದ್ 19.5 ಓವರ್​​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿ ಗೆಲುವು ತನ್ನದಾಗಿಸಿದೆ.

ಈ ಪಂದ್ಯದಲ್ಲಿ ಇಸ್ಲಾಮಾಬಾದ್ ಗೆಲುವಿನ ನಂತರ ಡಗೌಟ್​ನಲ್ಲಿದ್ದ ಸಮಿಯಾ ಅರ್ಜೂ ಮೇಲೆ ಕ್ಯಾಮೆರಾಗಳೆಲ್ಲವೂ ಫೋಕಸ್ ಮಾಡಿದ್ದವು. ಆಕೆಯ ಪತಿ ಹಸನ್​ ಅಲಿ ಪ್ರತಿನಿಧಿಸುವ ಇಸ್ಲಾಮಾಬಾದ್ ತಂಡವು ಅದ್ಭುತ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಖುಷಿಯಲ್ಲಿ ಕುಪ್ಪಳಿಸಿದ್ದಾಳೆ. ಈ ವೇಳೆ ಎಲ್ಲಾ ಕ್ಯಾಮೆರಾಗಳು ಅವಳ ಮೇಲೆ ಕೇಂದ್ರೀಕರಿಸಿದ್ದವು. ಅದೇ ಸಮಯದಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಸೈಮನ್ ಡೌಲ್, ವಾವ್, ಸೂಪರ್. ಇದು ನಿಜವಾಗಿಯೂ ಅದ್ಭುತವಾಗಿದೆ’ ಎಂದರು. ಅವಳು ಗೆದ್ದಿದ್ದಾಳೆ. ಅವಳು ಕೆಲವು ಹೃದಯಗಳನ್ನು ಗೆದ್ದಿದ್ದಾಳೆ. ಅವಳು ಅದ್ಭುತವಾಗಿದ್ದಾಳೆ. ಜೊತೆಗೆ ಗೆಲುವು ಕೂಡ ಎಂದು ರೊಮ್ಯಂಟಿಕ್​​ ಕಾಮೆಂಟ್​ ಮಾಡಿದ್ದಾರೆ.

ನಂತರ ಡೌಲ್ ತಡವರಿಸಿಕೊಂಡು ‘ಅದು ಅದು… ಈ ಗೆಲುವು’ ಎಂದು ಕಾಮೆಂಟ್​ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಕಾಮೆಂಟರ್ ಆಗಬೇಕಾದ ಮತ್ತು ಸರಿಯಾಗಿ ವರ್ತಿಸಬೇಕಾದ ವ್ಯಕ್ತಿ, ಈ ರೀತಿ ಕಾಮೆಂಟ್ ಮಾಡುವುದು ಎಷ್ಟು ಸರಿ. ಬಾಬರ್ ಶತಕದ ಬಗ್ಗೆಯೂ ಇದೇ ಅಸಂಬದ್ಧವಾಗಿ ಮಾತನಾಡಿದ ಡೌಲ್, ಈಗ ಪಂದ್ಯ ನಡೆಯುವ ವೇಳೆ ಮಹಿಳೆಯರ ಸೌಂದರ್ಯವನ್ನು ಹೊಗಳಿರುವ ವರ್ತನೆಯನ್ನು ವೀಕ್ಷಕರು ಪ್ರಶ್ನಿಸುವಂತೆ ಮಾಡಿದೆ.

ಸದ್ಯ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಪತ್ನಿ ಸಮಿಯಾ ಅರ್ಜೂ ಅವಳ ಸೌಂದರ್ಯದ ಬಗ್ಗೆ ವಿವರಿಸಿರುವ ವಿಡಿಯೋ ಇದೀಗ ವೈರಲ್​ ಆಗುತ್ತಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು ಡೌಲ್ ಇದಕ್ಕೆಲ್ಲ ಉತ್ತರ ನೀಡಬೇಕಿದೆ.

Leave A Reply

Your email address will not be published.