OnePlus TV 65 Q2 Pro: ಒನ್ಪ್ಲಸ್ ನಿಂದ ಭರ್ಜರಿ ಬೆಲೆಯ ₹99,999 ಸ್ಮಾರ್ಟ್ ಟಿವಿ ರಿಲೀಸ್!
OnePlus TV 65 Q2 Pro: ಸ್ಮಾರ್ಟ್ಟಿವಿಗಳ (smart TV )ಫೀಚರ್ಸ್ಗಳು ಕೂಡ ಮೊಬೈಲ್ನಂತೆಯೇ (mobile ) ಫೀಚರ್ಸ್ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್ಸೀರಿಸ್, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್ಟಿವಿಗಳಲ್ಲೇ ನೋಡಬಹುದು.
ಚೀನಾ ಮೂಲದ ಒನ್ಪ್ಲಸ್, ಭಾರತದಲ್ಲಿ ಸ್ಮಾರ್ಟ್ಫೋನ್ ಜತೆಗೇ, ಇಯರ್ಫೋನ್,ಟ್ಯಾಬ್ಲೆಟ್, ಇಯರ್ಬಡ್ಸ್ ಮತ್ತು ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲೂ ತನ್ನ ಹವಾ ತೋರಿಸುತ್ತಿದೆ. ಇದೀಗ ಭಾರತದಲ್ಲಿ ಒನ್ಪ್ಲಸ್ ಹೊಸ ಮಾದರಿಯ 65 ಇಂಚಿನ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದೆ.
ಸದ್ಯ ಹೊಸ ಸ್ಮಾರ್ಟ್ಟಿವಿ ಖರೀದಿಸುವ ಯೋಜನೆಯಲ್ಲಿರುವವರಿಗೆ ನಂಬರ್ 1 ಕಂಪನಿ ಒನ್ಪ್ಲಸ್ನಿಂದ ಒಂದು ಒಳ್ಳೆಯ ಸುದ್ದಿ ನೀಡಿದೆ. ಹೌದು, ₹99,999 ಬೆಲೆಯ ಒನ್ಪ್ಲಸ್ TV 65 Q2 Pro ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದೆ.
ಒನ್ಪ್ಲಸ್ TV 65 Q2 Pro ವಿಶೇಷತೆಗಳು ಇಂತಿವೆ :
ಸದ್ಯ ಪ್ರೀಮಿಯಂ ಟಿವಿ ಸರಣಿಯಲ್ಲಿ ಬಿಡುಗಡೆಯಾಗಿರುವ ಒನ್ಪ್ಲಸ್ TV 65 Q2 Pro (OnePlus TV 65 Q2 Pro), 65 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 3840 x 2160 ರೆಸೊಲ್ಯೂಶನ್ ಹೊಂದಿದೆ. ಇದರಿಂದಾಗಿ ಗುಣಮಟ್ಟದ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡಿಬರುತ್ತವೆ ಎಂದು ಒನ್ಪ್ಲಸ್ ತಿಳಿಸಿದೆ .
ಹೊಸ ಒನ್ಪ್ಲಸ್ TV 65 Q2 Pro ಸ್ಮಾರ್ಟ್ ಟಿವಿಯಲ್ಲಿ ಡಾಲ್ಬಿ ವಿಶನ್, HDR10+ ಪ್ರಮಾಣೀಕೃತ, HDR10, HLG ವೈಶಿಷ್ಟ್ಯ ಹೊಂದಿದೆ. ಹೀಗಾಗಿ ಡಾಲ್ಬಿ ಅಟ್ಮೋಸ್ ಅನುಭವದ ಜತೆಗೆ, 2.1 ಚಾನಲ್ 70W ಸೌಂಡ್ ಓಟ್ಪುಟ್ ಲಭ್ಯವಾಗುತ್ತದೆ.
ಗೂಗಲ್ ಟಿವಿ ಆ್ಯಂಡ್ರಾಯ್ಡ್ 11 (Android 11) ಮೂಲಕ ಕಾರ್ಯನಿರ್ವಹಿಸುವ ಒನ್ಪ್ಲಸ್ TV 65 Q2 Pro, ಹತ್ತು ಹಲವು ಅಪ್ಲಿಕೇಶನ್ಗಳನ್ನು ಹೊಂದಿದೆ. ಅದಲ್ಲದೆ ಆಕ್ಸಿಜನ್ ಪ್ಲೇ, ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಯೂಟ್ಯೂಬ್, ಗೂಗಲ್ ಪ್ಲೇ ಸ್ಟೋರ್ ಬೆಂಬಲವಿದ್ದು, ಬಳಕೆದಾರರು ಅಗತ್ಯವಿರುವ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬಳಸಬಹುದು.
ಮುಖ್ಯವಾಗಿ ಗೂಗಲ್ ಸ್ಮಾರ್ಟ್ ವಾಯ್ಸ್ ಅಸಿಸ್ಟ್ ಮತ್ತು ಅಲೆಕ್ಸಾ ಬೆಂಬಲವಿದ್ದು, 3GB+32GB ಸ್ಟೋರೇಜ್ ಹೊಂದಿದೆ. ಸದ್ಯ ಹೊಸ ಮಾದರಿಗೆ ₹99,999 ಬೆಲೆ ಇದ್ದು , ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗೆ ₹5,000 ಇನ್ಸ್ಟಂಟ್ ಡಿಸ್ಕೌಂಟ್ ಲಭ್ಯವಿದೆ. ಉಳಿದಂತೆ ಇಎಂಐ ಬಳಸಿ, ಹೊಸ ಟಿವಿ ಖರೀದಿಸಬಹುದು. ಸದ್ಯ ಅಧಿಕ ಗಾತ್ರದ ಸ್ಕ್ರೀನ್ ಹೊಂದಿರುವ ಟಿವಿಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಈ ಸ್ಮಾರ್ಟ್ ಟಿವಿ ಯನ್ನು (Smart TV) ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : ʻಬೇಸಿಗೆ ತಾಪಮಾನʼಕ್ಕೆ ಕುಕ್ಕುಟೋದ್ಯಮಕ್ಕೆ ತಟ್ಟಿದ್ಯಾ ಎಫೆಕ್ಟ್ ..?